ETV Bharat / bharat

ಪೆಗಾಸಸ್​ ಸ್ಪೈವೇರ್​ ಬಳಸಿ ಗೂಢಚರ್ಯೆ ಬಗ್ಗೆ ಪುರಾವೆಗಳಿಲ್ಲ: ಸುಪ್ರೀಂಕೋರ್ಟ್​ - pegasus spyware

ಪೆಗಾಸಸ್​ ಸ್ಪೈವೇರ್​ ಬಳಸಿ ಪ್ರತಿಪಕ್ಷಗಳನ್ನು ಹಣಿಯಲಾಗುತ್ತಿದೆ ಎಂಬ ಅನುಮಾನವನ್ನು ಸುಪ್ರೀಂಕೋರ್ಟ್ ದೂರ ಮಾಡಿದೆ. ಇಂತಹ ಯಾವುದೇ ಗೂಢಚರ್ಯೆ ನಡೆದಿಲ್ಲ ಎಂದು ಅದು ಹೇಳಿದೆ.

pegasus-spyware-sc
ಸುಪ್ರೀಂಕೋರ್ಟ್
author img

By

Published : Aug 25, 2022, 12:01 PM IST

Updated : Aug 25, 2022, 1:25 PM IST

ನವದೆಹಲಿ: ಪ್ರತಿಪಕ್ಷದ ನಾಯಕರು, ಪತ್ರಕರ್ತರು ಮತ್ತು ಇತರರ ಮೇಲೆ ಪೆಗಾಸಸ್​ ಸ್ಪೈವೇರ್​ ಬಳಸಿ ಗೂಢಚರ್ಯೆ ನಡೆಸಲಾಗುತ್ತಿದೆ ಎಂಬ ಆರೋಪಕ್ಕೆ ಸುಪ್ರೀಂಕೋರ್ಟ್​ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ. ಈ ಬಗ್ಗೆ ತನಿಖೆ ನಡೆಸಿದ ತಾಂತ್ರಿಕ ಸಮಿತಿ ನೀಡಿದ ವರದಿಯಾಧರಿಸಿ ಕೋರ್ಟ್​ ಈ ನಿರ್ಧಾರಕ್ಕೆ ಬಂದಿದೆ.

ದೇಶದ ಯಾರ ವಿರುದ್ಧವೂ ಪೆಗಾಸಸ್​ ಸ್ಪೇವೇರ್​ ಬಳಸಿ ರಹಸ್ಯ ಕಾರ್ಯಾಚರಣೆ ನಡೆಸಿಲ್ಲ. ಇದನ್ನು ಸಾಬೀತು ಪಡಿಸುವ ಅಂಶಗಳು ಕಂಡುಬಂದಿಲ್ಲ. ತನಿಖೆಯ ವೇಳೆ ಕೇಂದ್ರ ಸರ್ಕಾರ ಸಹಕರಿಸಿಲ್ಲ ಎಂದೂ ಸಮಿತಿ ತಿಳಿಸಿದೆ ಎಂಬುದನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ, ನ್ಯಾ.ಸೂರ್ಯಕಾಂತ್ ಮತ್ತು ನ್ಯಾ.ಹಿಮಾಕೊಹ್ಲಿ ಅವರಿದ್ದ ಪೀಠ ಇದೇ ವೇಳೆ ಹೇಳಿದೆ.

ಪೆಗಾಸಸ್​ ಸ್ಪೈವೇರ್​ ಬಳಸಿ ನಡೆದಿದೆ ಎಂದು ಹೇಳಲಾದ ಗೂಢಚರ್ಯೆ ಬಗ್ಗೆ ತಿಳಿಯಲು 29 ಮೊಬೈಲ್​ಗಳನ್ನು ತನಿಖೆಯ ವೇಳೆ ಪರಿಶೀಲಿಸಲಾಗಿದೆ. ಆದರೆ, ಯಾವುದೇ ರಹಸ್ಯ ಕಾರ್ಯಾಚರಣೆ ನಡೆಸಿದ ಬಗ್ಗೆ ತಿಳಿದುಬಂದಿಲ್ಲ. ಪೆಗಾಸಸ್​ ಸೇರಿ 5 ಸ್ಪೈವೇರ್​ಗಳೇ ಕಳಪೆ ಸೈಬರ್​ ಭದ್ರತೆಯನ್ನು ಹೊಂದಿವೆ ಎಂಬುದನ್ನು ಸಮಿತಿ ಕಂಡುಕೊಂಡಿದೆ.

ಸಮಿತಿ ನೀಡಿದ ಮೂರು ಭಾಗಗಳಾಗಿ ವರದಿ ಮಾಡಿದೆ. ಅವುಗಳಲ್ಲಿ ಒಂದನ್ನು ತನಿಖೆಗಾಗಿ ನೇಮಿಸಲಾದ ಸಮಿತಿಯ ಮುಂದಾಳು ಸುಪ್ರೀಂಕೋರ್ಟ್​ ನಿವೃತ್ತ ನ್ಯಾ.ಆರ್​.ವಿ. ರವೀಂದ್ರನ್​ ಅವರು ಸಲ್ಲಿಸಿದ್ದಾರೆ. ಇವುಗಳನ್ನು ಯಾವ ಸಮಯದಲ್ಲಿ ಬಿಡುಗಡೆ ಮಾಡಬೇಕು ಎಂಬುದನ್ನು ಪರಿಶೀಲಿಸಲಾಗುವುದು ಎಂದು ಕೋರ್ಟ್​ ಹೇಳಿದೆ.

ಸಮಿತಿಯ ಮೇಲ್ವಿಚಾರಕ ನ್ಯಾ.ರವೀಂದ್ರನ್ ಅವರು, ನಾಗರಿಕರ ರಕ್ಷಣೆ, ಭವಿಷ್ಯದ ಕ್ರಮ, ಹೊಣೆಗಾರಿಕೆ, ಕಣ್ಗಾವಲಿನ ಕುರಿತು ಸಲಹೆಗಳು, ಶಿಫಾರಸುಗಳುಳ್ಳ ವರದಿಯನ್ನು ಸಲ್ಲಿಸಿದ್ದಾರೆ.

ಓದಿ: ಇಡಿ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿ ದೋಚಿದ ಖದೀಮರು... 60 ಲಕ್ಷ ನಗದು, 1 ಕೆಜಿ ಚಿನ್ನ ಕದ್ದು ಪರಾರಿ

Last Updated : Aug 25, 2022, 1:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.