ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗುರುವಾರ ದೆಹಲಿ ಪ್ರವಾಸದಿಂದ ಪಾಟ್ನಾಕ್ಕೆ ಮರಳಿದ್ದಾರೆ. ವಿಪಕ್ಷಗಳ ಒಗ್ಗಟ್ಟಿನ ಕಸರತ್ತು ಮತ್ತೆ ಆರಂಭವಾಗಿದೆ. ಲೋಕಸಭೆ ಚುನಾವಣೆಯಲ್ಲಿ ವಿರೋಧ ಪಕ್ಷದಿಂದ ಪ್ರಧಾನಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ಇನ್ನು ನಿಗೂಢವಾಗಿದೆ.
ಇಲ್ಲಿನ ಜೆಡಿಯು ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಬಿಆರ್ ಅಂಬೇಡ್ಕರ್ ಅವರ ಜಯಂತಿಯಂದೇ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೇಂದ್ರದಲ್ಲಿ ಕುಳಿತಿರುವ ಜನರಿಗೆ ಕೆಲಸದಲ್ಲಿ ನಂಬಿಕೆಯಿಲ್ಲ, ಆದರೆ ಪ್ರಚಾರವನ್ನು ಮಾತ್ರ ನಂಬುತ್ತಾರೆ. ನಾವು ಪ್ರತಿ ಪಕ್ಷಗಳನ್ನು ಒಗ್ಗೂಡಿಸಲು ದೇಶಾದ್ಯಂತ ಹೋಗಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ನಾವು ಕೆಲಸದಲ್ಲಿ ನಂಬಿಕೆ ಇಡುತ್ತೇವೆ ಮತ್ತು ಸಾಮಾನ್ಯ ಜನರ ಕಲ್ಯಾಣಕ್ಕಾಗಿ ಅನೇಕ ಕೆಲಸಗಳನ್ನು ಮಾಡುತ್ತಿದ್ದೇವೆ. ಆದರೆ ಕೇಂದ್ರದಲ್ಲಿ ಕುಳಿತಿರುವ ಜನರಿಗೆ ಯಾವುದೇ ಕೆಲಸವಿಲ್ಲ. ಅವರು ಕೇವಲ ಪ್ರಚಾರ ಮಾಡಲು ಬಯಸುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಈ ಜನರ ಕೊಡುಗೆ ಇಲ್ಲ. ಆದ್ದರಿಂದ ಅವರು ದೇಶದ ಇತಿಹಾಸವನ್ನು ಬದಲಾಯಿಸಲು ಬಯಸುತ್ತಾರೆ ಎಂದು ನಿತೀಶ್ ಕುಮಾರ್ ವಾಗ್ದಾಳಿ ನಡೆಸಿದರು.
ನಾವು ಕಾಂಗ್ರೆಸ್, ಎಎಪಿ ಮತ್ತು ಎಡ ಪಕ್ಷಗಳ ನಾಯಕರೊಂದಿಗೆ ಆಳವಾದ ಚರ್ಚೆ ನಡೆಸಿದ್ದೇವೆ. ಅವರೆಲ್ಲರೂ ಪ್ರತಿಪಕ್ಷಗಳ ಒಗ್ಗಟ್ಟಿಗೆ ಒಪ್ಪಿಗೆ ನೀಡಿದ್ದಾರೆ. ಗರಿಷ್ಠ ಸಂಖ್ಯೆಯ ಪ್ರತಿ ಪಕ್ಷದ ಜನರನ್ನು ಒಗ್ಗೂಡಿಸಲು ನಾನು ದೇಶಾದ್ಯಂತ ಭೇಟಿ ನೀಡಲು ನಿರ್ಧರಿಸಿದ್ದೇನೆ ಎಂದರು. ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ರಚನೆಯಾದಾಗಿನಿಂದ ನಾನು ಪ್ರತಿಪಕ್ಷಗಳ ಒಗ್ಗಟ್ಟಿಗೆ ಪ್ರತಿಪಾದಿಸುತ್ತಿದ್ದೇನೆ. ಎನ್‌ಡಿಎ ತೊರೆಯುವ ನನ್ನ ನಿರ್ಧಾರವನ್ನು ಎಲ್ಲರೂ ಮೆಚ್ಚಿದ್ದಾರೆ. ನಾನು 7 ತಿಂಗಳ ಕಾಲ ಕರೆಗಾಗಿ ಕಾಯುತ್ತಿದ್ದೆ ಮತ್ತು ಕಾಂಗ್ರೆಸ್ ನಾಯಕರು ನನಗೆ ಕರೆ ಮಾಡಿದಾಗ ನಾನು ಅಲ್ಲಿಗೆ ಹೋಗಿದ್ದೆ. ಆಗ ಅವರೊಂದಿಗೆ ಚರ್ಚೆ ನಡೆಸಿದ್ದೆವು ಎಂದು ಅವರು ಹೇಳಿದರು.
ದೆಹಲಿಯಿಂದ ಜೆಡಿಯು ಕಚೇರಿಗೆ ಆಗಮಿಸಿದ ನಿತೀಶ್ ಕುಮಾರ್ ಅವರಿಗೆ ಕಾರ್ಯಕರ್ತರು ಗುಲಾಬಿ ದಳಗಳ ಸುರಿಮಳೆ ಹರಿಸಿ, ‘ದೇಶ್ ಕಾ ಪಿಎಂ ಕೈಸಾ ಹೋ ನಿತೀಶ್ ಕುಮಾರ್ ಜೈಸಾ ಹೋ’ ಎಂಬ ಘೋಷಣೆಯೊಂದಿಗೆ ಭವ್ಯ ಸ್ವಾಗತ ನೀಡಿದರು. ಇದಕ್ಕೂ ಮುನ್ನ ನಿತೀಶ್ ಕುಮಾರ್ ಅವರು ಪಾಟ್ನಾ ತಲುಪಿದ ಕೂಡಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೀವು ಚಿಂತಿಸಬೇಡಿ, ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂದು ನಗುತ್ತಾ ಹೇಳಿದರು. ನಾವು ಎಲ್ಲರೂ ಭೇಟಿಯಾಗಿದ್ದೇವೆ ಎಂಬುದು ಎಲ್ಲರಿಗೂ ತಿಳಿದಿದೆ. ಹೊಸದೇನೂ ಇಲ್ಲ. ಎಲ್ಲರೂ ತಿಳಿದಿರುವ ಬಗ್ಗೆ ಕುಳಿತು ಮಾತನಾಡಿದೆವು. ಒಗ್ಗಟ್ಟಿಗಾಗಿ ನಮ್ಮ ಪ್ರಯತ್ನ ಎಂದು ನಿತೀಶ್ ಕುಮಾರ್ ಹೇಳಿದರು.
ಎಲ್ಲ ಜನರು ತಮ್ಮ ಹೇಳಿಕೆ ನೀಡಿದ್ದಾರೆ. ನಾವು ಹೋಗಿದ್ದೇವೆ, ಹಲವು ಪಕ್ಷಗಳೊಂದಿಗೆ ಮಾತುಕತೆ ನಡೆಸಲಾಗಿದೆ ಮತ್ತು ಇತರ ಪಕ್ಷಗಳೊಂದಿಗೆ ಚರ್ಚೆ ನಡೆಯುತ್ತಿದೆ. ಇದಾದ ಬಳಿಕ ಒಂದಾಗುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ನಾವು ಅದೇ ಕೆಲಸದಲ್ಲಿ ತೊಡಗಿದ್ದೇವೆ. ಎಲ್ಲ ಜನರೊಂದಿಗೆ ನಡೆಸಿದ ಸಂವಾದ, ಎಲ್ಲಾ ಪಕ್ಷದವರು ಈಗಾಗಲೇ ತಮ್ಮ ಹೇಳಿಕೆಯನ್ನು ನೀಡಿದ್ದಾರೆ ಎಂದರು.
ಓದಿ: ಶೆಟ್ಟರ್ ಸಭೆ ಬಗ್ಗೆ ಗೊತ್ತಿದೆ..2 ದಿನದಲ್ಲಿ ಮೂರನೇ ಪಟ್ಟಿ ಬಿಡುಗಡೆ: ಸಿಎಂ ಬೊಮ್ಮಾಯಿ