ನವದೆಹಲಿ: ದೇಶದಲ್ಲಿ ಬಳಕೆಯಾಗುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ಬೆಂಕಿ ಹೊತ್ತಿಕೊಳ್ಳುವ ಪ್ರಕರಣ ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತಿವೆ. ನಿನ್ನೆಯಷ್ಟೇ ಹೈದರಾಬಾದ್ನಲ್ಲಿ ಚಾರ್ಜಿಂಗ್ ಇಟ್ಟಿದ್ದ ಎಲೆಕ್ಟ್ರಿಕಲ್ ಸ್ಕೂಟರ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಓರ್ವ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ನಡೆದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಎಚ್ಚರಿಕೆ ನೀಡಿದ್ದಾರೆ.
-
Several mishaps involving Electric Two Wheelers have come to light in last two months. It is most unfortunate that some people have lost their lives and several have been injured in these incidents.
— Nitin Gadkari (@nitin_gadkari) April 21, 2022 " class="align-text-top noRightClick twitterSection" data="
">Several mishaps involving Electric Two Wheelers have come to light in last two months. It is most unfortunate that some people have lost their lives and several have been injured in these incidents.
— Nitin Gadkari (@nitin_gadkari) April 21, 2022Several mishaps involving Electric Two Wheelers have come to light in last two months. It is most unfortunate that some people have lost their lives and several have been injured in these incidents.
— Nitin Gadkari (@nitin_gadkari) April 21, 2022
ಸುರಕ್ಷತಾ ಮಾನದಂಡಗಳನ್ನು ಪಾಲನೆ ಮಾಡದೇ, ನಿರ್ಲಕ್ಷ್ಯ ವಹಿಸಿದರೆ, ಎಲೆಕ್ಟ್ರಿಕ್ ವಾಹನ ತಯಾರಕರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ. ಎಲೆಕ್ಟ್ರಿಕ್ ವಾಹನ ತಯಾರು ಮಾಡುವ ಯಾವುದೇ ಕಂಪನಿ ಉತ್ಪಾದನೆ ವೇಳೆ ನಿರ್ಲಕ್ಷ್ಯವಹಿಸಿದರೆ ದೊಡ್ಡ ಮಟ್ಟದ ದಂಡ ವಿಧಿಸಲಾಗುವುದು ಎಂದಿದ್ದಾರೆ. ಇದರ ಜೊತೆಗೆ ಎಲ್ಲ ದೋಷಮುಕ್ತ ವಾಹನ ಹಿಂಪಡೆದುಕೊಳ್ಳುವಂತೆ ಸೂಚನೆ ನೀಡಬೇಕಾಗುತ್ತದೆ ಎಂದಿದ್ದಾರೆ.
ಇದೇ ವೇಳೆ ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದಂತೆ ಅನೇಕ ಅವಘಡ ಸಂಭವಿಸಿರುವ ಘಟನೆ ಕಳೆದ ಎರಡು ತಿಂಗಳಿಂದ ಮೇಲಿಂದ ಮೇಲೆ ನಡೆಯುತ್ತಿರುವುದು ಬೆಳಕಿಗೆ ಬಂದಿವೆ. ಇದರಲ್ಲಿ ಕೆಲವರು ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿರುವುದು ಅತ್ಯಂತ ದುರದೃಷ್ಟಕರ ಎಂದು ತಿಳಿಸಿದ್ದಾರೆ.
ಈಗಾಗಲೇ ನಡೆದಿರುವ ಘಟನೆಗಳ ಬಗ್ಗೆ ತನಿಖೆ ನಡೆಸಲು ಮತ್ತು ಬರುವ ದಿನಗಳಲ್ಲಿ ಇಂತಹ ಪ್ರಕರಣ ನಡೆಯದಂತೆ ತಡೆಯಲು ರಸ್ತೆ ಸಾರಿಗೆ ಸಚಿವಾಲಯ ಈಗಾಗಲೇ ತಜ್ಞರ ತಂಡ ರಚನೆ ಮಾಡಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.