ಪಾಟ್ನಾ: ಬಿಹಾರ ರಾಜ್ಯಕ್ಕೆ ಇಬ್ಬರು ಉಪಮುಖ್ಯಮಂತ್ರಿಗಳು ಆಯ್ಕೆಯಾಗಿದ್ದಾರೆ. ತಾರ್ಕಿಶೋರ್ ಪ್ರಸಾದ್ ಮತ್ತು ರೇಣು ದೇವಿ ಅವರು ಬಿಹಾರದ ನೂತನ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು, ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರಿಗೆ ರಾಜ್ಯಪಾಲ ಫಾಗು ಚೌಹಾಣ್ ಅವರು ಪ್ರಮಾಣವಚನ ಬೋಧಿಸಲಿದ್ದಾರೆ. ಪ್ರಮಾಣವಚನ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಾಗಿಯಾಗಲಿದ್ದಾರೆ.
ಪ್ರಮಾಣವಚನ ಸ್ವೀಕಾರ ಸಮಾರಂಭ ಇಂದು ಸಂಜೆ 4:30 ಕ್ಕೆ ರಾಜಭವನದಲ್ಲಿ ನಡೆಯಲಿದೆ. ಇದರಲ್ಲಿ ಬಿಜೆಪಿಯ ತಾರ್ಕಿಶೋರ್ ಪ್ರಸಾದ್ ಮತ್ತು ರೇಣು ದೇವಿ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಿತೀಶ್ ಕುಮಾರ್ 7 ನೇ ಬಾರಿಗೆ ಬಿಹಾರ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭದಲ್ಲಿ ಕೆಲವು ಮಂತ್ರಿಗಳು ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
52 ವರ್ಷದ ತಾರ್ಕಿಶೋರ್ ಪ್ರಸಾದ್ ಪ್ರಸಾದ್ ರಾಜಕೀಯಕ್ಕೆ ಪ್ರವೇಶಿಸಿದ್ದು , ಅಖಿಲ್ ಭಾರತೀಯ ವಿದ್ಯಾ ಪರಿಷತ್ ಮೂಲಕ. 2005 ರಿಂದ ಕತಿಹಾರ್ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ 4 ಬಾರಿ ಗೆದ್ದಿದ್ದಾರೆ. ಹೀಗಾಗಿ ಇವರಿಗೆ ಬಿಹಾರದ ರಾಜಕೀಯದಲ್ಲಿ ಉತ್ತಮ ಹಿಡಿತವಿದೆ ಎಂದು ಪರಿಗಣಿಸಲಾಗಿದೆ. ಇದೇ ವೇಳೆ, ಅಲ್ಪಸಂಖ್ಯಾತ , ಹಿಂದುಳಿದ ವರ್ಗದಿಂದ ಬಂದ ರೇಣು ದೇವಿ ಬೆತಿಯ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.

ಇನ್ನು ನಿತೀಶ್ ಏಳನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದು, ಇಂದು ನಡೆಯುವ ಸಮಾರಂಭದಲ್ಲಿ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಿತೀಶ್ 2000 ರಿಂದ 2020 ರವರೆಗೆ ಮೊದಲ ಆರು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನು ಇಂದು ಸಂಜೆ ರಾಜಭವನದಲ್ಲಿ ನಿತೀಶ್ ಕುಮಾರ್ ಅವರಲ್ಲದೇ, ಜೀತನ್ ರಾಮ್ ಮಾಂಜಿ ಅವರ ಪುತ್ರ ಸಂತೋಷ್ ಸುಮನ್, ವಿಐಪಿಯ ಮುಖೇಶ್ ಸಾಹ್ನಿ ಮತ್ತು ಜೆಡಿಯು ವಿಜೇಂದರ್ ಯಾದವ್, ಶ್ರವಣ್ ಕುಮಾರ್, ನರೇಂದ್ರ ನಾರಾಯಣ್ ಯಾದವ್, ಮಹೇಶ್ವರ ಹಜಾರಿ ಮತ್ತು ಬಿಜೆಪಿಯ ಪ್ರೀತಿ ಕುಮಾರ್, ಮಂಗಲ್ ಪಾಂಡೆ ಮತ್ತು ನಂದಕಿಶೋರ್ ಯಾದವ್ ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
-
राजद शपथ ग्रहण का बायकॉट करती है। बदलाव का जनादेश NDA के विरुद्ध है। जनादेश को 'शासनादेश' से बदल दिया गया। बिहार के बेरोजगारों,किसानो,संविदाकर्मियों, नियोजित शिक्षकों से पूछे कि उनपर क्या गुजर रही है।NDA के फर्ज़ीवाड़े से जनता आक्रोशित है। हम जनप्रतिनिधि है और जनता के साथ खड़े है
— Rashtriya Janata Dal (@RJDforIndia) November 16, 2020 " class="align-text-top noRightClick twitterSection" data="
">राजद शपथ ग्रहण का बायकॉट करती है। बदलाव का जनादेश NDA के विरुद्ध है। जनादेश को 'शासनादेश' से बदल दिया गया। बिहार के बेरोजगारों,किसानो,संविदाकर्मियों, नियोजित शिक्षकों से पूछे कि उनपर क्या गुजर रही है।NDA के फर्ज़ीवाड़े से जनता आक्रोशित है। हम जनप्रतिनिधि है और जनता के साथ खड़े है
— Rashtriya Janata Dal (@RJDforIndia) November 16, 2020राजद शपथ ग्रहण का बायकॉट करती है। बदलाव का जनादेश NDA के विरुद्ध है। जनादेश को 'शासनादेश' से बदल दिया गया। बिहार के बेरोजगारों,किसानो,संविदाकर्मियों, नियोजित शिक्षकों से पूछे कि उनपर क्या गुजर रही है।NDA के फर्ज़ीवाड़े से जनता आक्रोशित है। हम जनप्रतिनिधि है और जनता के साथ खड़े है
— Rashtriya Janata Dal (@RJDforIndia) November 16, 2020
ಈ ಮಧ್ಯೆ ಇಂದಿನ ಸಿಎಂ ನಿತೀಶ್ ಕುಮಾರ್ ಪ್ರಮಾಣವಚನ ಸಮಾರಂಭವನ್ನು ಬಹಿಷ್ಕರಿಸುವುದಾಗಿ ಆರ್‌ಜೆಡಿ ಹೇಳಿದೆ.
ನಿತೀಶ್ ಕುಮಾರ್ 6 ಬಾರಿ ಸಿಎಂ ಆಗಿದ್ದ ಅವಧಿ:
- 3 ಮಾರ್ಚ್ 2000ರಿಂದ ಮಾರ್ಚ್ 2000
- 24 ನವೆಂಬರ್ 2005 ರಿಂದ ನವೆಂಬರ್ 2010
- 24 ನವೆಂಬರ್ 2010 ರಿಂದ ಮೇ 17 2014
- 22 ಫೆಬ್ರವರಿ 2015 ರಿಂದ ನವೆಂಬರ್ 2015
- 20 ನವೆಂಬರ್ 2015 ರಿಂದ 26 ಜುಲೈ 2017
- 27 ಜುಲೈ 2017 ರಿಂದ ನವೆಂಬರ್ 2020
ಮತ್ತು ಈಗ ನವೆಂಬರ್16 ರಂದು 7 ನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.