ನವದೆಹಲಿ: ಏರುತ್ತಿರುವ ತೈಲ ಬೆಲೆ ಕುರಿತ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತೈಲ ದರದ ಮೇಲಿನ ತೆರಿಗೆಯಿಂದ ಧರ್ಮ ಸಂಕಟದ ಪರಿಸ್ಥಿತಿ ಎದುರಿಸುತ್ತಿದ್ದೇವೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಮಾತ್ರ ಡೀಸಲ್ ಹಾಗೂ ಪೆಟ್ರೋಲ್ ಮೇಲೆ ತೆರಿಗೆ ವಿಧಿಸುವುದಿಲ್ಲ ಬದಲಾಗಿ, ರಾಜ್ಯ ಸರ್ಕಾರಗಳು ಸಹ ತೆರಿಗೆ ವಿಧಿಸುತ್ತವೆ ಎಂದಿದ್ದಾರೆ. ಇವುಗಳ ಮೇಲೆ ಆದಾಯವನ್ನು ಲೆಕ್ಕಹಾಕಿದಾಗ ಶೇ 41ರಷ್ಟು ರಾಜ್ಯಗಳಿಗೆ ಹೋಗುತ್ತದೆ ಎಂದಿದ್ದಾರೆ.
ಅಲ್ಲದೆ ತೈಲ ದರ ಏರಿಕೆಯಿಂದಾಗಿ ಜನಸಾಮಾನ್ಯರ ಮೇಲಾಗುತ್ತಿರುವ ಹೊರೆಯ ಬಗ್ಗೆಯೂ ಸರ್ಕಾರಕ್ಕೆ ಅರಿವಿದೆ ಎಂದಿದ್ದಲ್ಲದೆ, ತೈಲವನ್ನು ಜಿಎಸ್ಟಿ ವ್ಯಾಪ್ತಿಗೆ ತರುವ ಕುರಿತು ಚರ್ಚೆಯಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಆರೋಗ್ಯದಲ್ಲಿ ದಿಢೀರ್ ಏರುಪೇರು: ಏರ್ ಆಂಬ್ಯುಲೆನ್ಸ್ ಮೂಲಕ ಸಂಸದೆ ಸಾಧ್ವಿ ಮುಂಬೈಗೆ ರವಾನೆ!