ನವದೆಹಲಿ: ದೇಶ ಭ್ರಷ್ಟ ಉದ್ಯಮಿ ನೀರವ್ ಮೋದಿ ಅವರ ಸಹೋದರಿ ಪೂರ್ವಿ ಮೋದಿ ತಮ್ಮ ಬ್ರಿಟನ್ನ ಬ್ಯಾಂಕ್ ಖಾತೆಯಿಂದ ಸುಮಾರು 17.25 ಕೋಟಿಗೂ ಹೆಚ್ಚು ಹಣವನ್ನು ಭಾರತೀಯ ಸರ್ಕಾರಕ್ಕೆ ರವಾನಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ಗುರುವಾರ ಮಾಹಿತಿ ನೀಡಿದೆ.
ಪಿಎನ್ಬಿ ವಂಚನೆ ಪ್ರಕರಣದಲ್ಲಿ ಕ್ರಿಮಿನಲ್ ಕೇಸ್ಗಳಿಂದ ಸ್ವಲ್ಪ ವಿನಾಯಿತಿಗೆ ಅನುಮತಿ ನೀಡಲು ಒಪ್ಪಿಗೆ ನೀಡಿದ ಬಳಿಕ ಪೂರ್ವಿ ಮೋದಿ ತಮ್ಮ ಬ್ರಿಟನ್ ಬ್ಯಾಂಕ್ ಖಾತೆಗಳಿಂದ 17 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಭಾರತ ಸರ್ಕಾರದ ಖಾತೆಗೆ ವರ್ಗಾಯಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮೊದಲು ಇಂಗ್ಲೆಂಡ್ನಲ್ಲಿ ನನ್ನ ಹೆಸರಲ್ಲಿ ಖಾತೆ ಇರುವುದು ಗೊತ್ತಾಗಿದ್ದು, ನನ್ನ ಸಹೋದರ ಈ ಖಾತೆಯನ್ನು ತೆರೆದಿದ್ದನು. ಅದರಲ್ಲಿರುವ ಹಣವು ನನಗೆ ಸೇರಿದ್ದಲ್ಲ ಎಂದು ಪೂರ್ವಿ ಮೋದಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಹೇಳಿದ್ದರು.
ಇದನ್ನೂ ಓದಿ: ಬಿಳಿಯ ಖಂಡ ಅಂಟಾರ್ಟಿಕಾದಲ್ಲಿ ದಾಖಲೆಯ ತಾಪಮಾನ ದೃಢ
ಮತ್ತೊಂದೆಡೆ ನೀರವ್ ಮೋದಿಯನ್ನು ಭಾರತಕ್ಕೆ ಕರೆತರಲು ಯುಕೆ ಹೈಕೋರ್ಟ್ನಲ್ಲಿ ಸಲ್ಲಿಸಿದ ಮೇಲ್ಮನವಿ ಅರ್ಜಿ ವಜಾಗೊಂಡಿದ್ದು, ಇನ್ನಷ್ಟು ಪ್ರಯತ್ನಗಳನ್ನು ಮಾಡುವುದಾಗಿ ವಿದೇಶಾಂಗ ಸಚಿವಾಲಯ ಕೆಲವು ದಿನಗಳ ಹಿಂದೆ ತಿಳಿಸಿತ್ತು.