ETV Bharat / bharat

ಶಾಕಿಂಗ್​.. ಇನ್‌ಸ್ಟಾ ಕ್ವೀನ್ ಎಂದೇ ಖ್ಯಾತಿ ಪಡೆದಿದ್ದ 9 ವರ್ಷದ ಬಾಲಕಿ ಆತ್ಮಹತ್ಯೆ!

ಸಾಮಾಜಿಕ ಜಾಲತಾಣದಲ್ಲಿ ಇನ್‌ಸ್ಟಾ ಕ್ವೀನ್ ಎಂದೇ ಹೆಸರಾಗಿದ್ದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ನಡೆದಿದೆ.

Nine year old insta queen dies by suicide in Tamil Nadu
ಶಾಕಿಂಗ್​... 9 ವರ್ಷದ ಬಾಲಕಿ, ಇನ್‌ಸ್ಟಾ ಕ್ವೀನ್ ಆತ್ಮಹತ್ಯೆ!
author img

By

Published : Mar 30, 2023, 7:05 PM IST

ತಿರುವಳ್ಳೂರು (ತಮಿಳುನಾಡು): ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಆಘಾತಕಾರಿ ಮತ್ತು ಆತಂಕಕಾರಿ ಘಟನೆಯೊಂದು ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಇನ್‌ಸ್ಟಾ ಕ್ವೀನ್ ಎಂದೇ ಹೆಸರು ಮಾಡಿದ್ದ 9 ವರ್ಷದ ಬಾಲಕಿಯೊಬ್ಬಳು ಸಾವಿಗೆ ಶರಣಾಗಿದ್ದಾಳೆ.

ಇಲ್ಲಿನ ಪೆರಿಯ ಕುಪ್ಪಂ ಗ್ರಾಮದ ಖಾಸಗಿ ಶಾಲೆಯಲ್ಲಿ ಬಾಲಕಿ 4ನೇ ತರಗತಿ ಓದುತ್ತಿದ್ದಳು. ಮಾರ್ಚ್ 28ರಂದು ಮಂಗಳವಾರ ರಾತ್ರಿ ತಮ್ಮ ಮನೆಯ ಹೊರಗೆ ಆಟವಾಡುತ್ತಿದ್ದಳು. ವಾರ್ಷಿಕ ಪರೀಕ್ಷೆಯ ಸಮಯವಾದ್ದರಿಂದ ಆಟ ಬಿಟ್ಟು ಅಧ್ಯಯನದತ್ತ ಗಮನ ಹರಿಸುವಂತೆ ತಂದೆ ಬುದ್ಧಿ ಹೇಳಿದ್ದರು.

ಇದನ್ನೂ ಓದಿ: ಧಾರವಾಡ: ನಿರ್ಮಾಣ ಹಂತದ ಕಟ್ಟಡದಲ್ಲಿ ಪ್ರೇಮಿಗಳು ಆತ್ಮಹತ್ಯೆ

ಇದರಿಂದ ಮನನೊಂದಿದ್ದ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಳು. ನಂತರದಲ್ಲಿ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಆಕೆಯನ್ನು ಪೋಷಕರು ರಕ್ಷಿಸಿ ತಕ್ಷಣವೇ ತಿರುವಳ್ಳೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಕೊನೆಯುಸಿರೆದಿದ್ದಾಳೆ.

ಈ ಘಟನೆ ಸಂಬಂಧ ತಿರುವಳ್ಳೂರು ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಾವಿನ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇನ್ನು, ಮೃತ ಬಾಲಕಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋಗಳನ್ನು ಶೇರ್​ ಮಾಡುತ್ತಿದ್ದಳು. ಸೊಗಸಾದ ಕಣ್ಣಿನ ಚಲನೆ ಹಾಗೂ ನಟನೆಯ ಕೌಶಲ್ಯದಿಂದಾಗಿ ಅಭಿಮಾನಿಗಳು ಈ ಬಾಲಕಿಯನ್ನು ಪ್ರೀತಿಯಿಂದ ಇನ್‌ಸ್ಟಾ ಕ್ವೀನ್ ಎಂದೇ ಕರೆಯುತ್ತಿದ್ದರು.

ಇದನ್ನೂ ಓದಿ: ಸಾಮಾಜಿಕ ಮಾಧ್ಯಮ ಬಹಳ ಉಪಯುಕ್ತ; ಬಳಸುವ ಮಾರ್ಗ ಗೊತ್ತಿರಬೇಕು ಅಷ್ಟೇ

ತ್ರಿಶೂರ್​ನಲ್ಲಿ ಬಾಲಕನ ಕೊಲೆ: ಮತ್ತೊಂದೆಡೆ, ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ನಡುವೆ ನಡೆದ ಘರ್ಷಣೆಯಲ್ಲಿ ಐದು ವರ್ಷದ ಬಾಲಕನೊಬ್ಬನನ್ನು ಹತ್ಯೆ ಮಾಡಲಾಗಿದೆ. ಅಸ್ಸೋಂ ಮೂಲದ ವಲಸೆ ಕಾರ್ಮಿಕನ ಮಗ ಕೊಲೆಗೀಡಾಗಿರುವ ಬಾಲಕ.

ಇಲ್ಲಿನ ಮುಪ್ಲಿಯಮ್​ನಲ್ಲಿ ಗುರುವಾರ ಬೆಳಗ್ಗೆ ನಡೆದ ಘಟನೆಯಲ್ಲಿ ಬಾಲಕನ ತಾಯಿ ನಜೀಮಾ ಕಟ್ಟೂ ಎಂಬುವರ ಕೈ ತುಂಡಾಗಿದೆ. ಮತ್ತೊಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರನ್ನೂ ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಹತ್ತಿರದ ಸಂಬಂಧಿ ಜಮಾಲ್ ಹುಸೈನ್ ಎಂಬಾತನನ್ನು ಇತರ ಕಾರ್ಮಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಾರಣಾಂತಿಕ ಹಲ್ಲೆಯಿಂದ ಬಾಲಕ ಸಾವು, ಆರೋಪಿ ಪೊಲೀಸರ ವಶಕ್ಕೆ.. ಆರೋಪಿ ಜಮಾಲ್ ಹುಸೈನ್ ಒಂದು ದಿನದ ಹಿಂದೆಯಷ್ಟೇ ಮುಪ್ಲಿಯಮ್​ಗೆ ಆಗಮಿಸಿದ್ದ. ನಂತರ ಯಾವುದೋ ವಿಷಯಕ್ಕೆ ರಾತ್ರಿ ವಾಗ್ವಾದ ನಡೆದಿದೆ. ಇಂದು ಬೆಳಗ್ಗೆಯೂ ಈ ಗಲಾಟೆ ಮುಂದುವರಿದಿತ್ತು. ಈ ಸಂದರ್ಭದಲ್ಲಿ ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ಪುದುಕ್ಕಾಡ್ ತಾಲೂಕು ಆಸ್ಪತ್ರೆಗೆ ಸಾಗಿಸಲಾಯಿತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿ ಜಮಾಲ್ ಹುಸೈನ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ರಾಯಚೂರಿನಲ್ಲಿ ಪ್ರಾಂಶುಪಾಲ ಅರೆಸ್ಟ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.