ETV Bharat / bharat

ಭೂಕುಸಿತ: ಮೃತರ ಕುಟುಂಬಸ್ಥರು, ಗಾಯಾಳುಗಳಿಗೆ ಪರಿಹಾರ ಘೋಷಣೆ - ಕಿನ್ನೌರ್ ಜಿಲ್ಲೆ

ಹಿಮಾಚಲ ಪ್ರದೇಶದಲ್ಲಿ ಬಸ್ತೇರಿಯಲ್ಲಿ ನಡೆದ ಭೂಕುಸಿತ ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರು ಮತ್ತು ಗಾಯಾಳುಗಳಿಗೆ ಪ್ರಧಾನಿ ಮೋದಿ ಪರಿಹಾರ ಘೋಷಿಸಿದ್ದಾರೆ.

Himachal Pradesh landslide
ಹಿಮಾಚಲ ಪ್ರದೇಶ ಭೂಕುಸಿತ
author img

By

Published : Jul 26, 2021, 7:35 AM IST

Updated : Jul 26, 2021, 10:01 AM IST

ಶಿಮ್ಲಾ : ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಬಸ್ತೇರಿ ಬಳಿ ಭೂಕುಸಿತ ಉಂಟಾಗಿ ಮೃತಪಟ್ಟವರ ಕುಟುಂಬಸ್ಥರು ಮತ್ತು ಗಾಯಾಳುಗಳಿಗೆ ಪಿಎಂ ರಿಲೀಫ್ ಫಂಡ್​ನಿಂದ ಪ್ರಧಾನಿ ನರೇಂದ್ರ ಮೋದಿ ಪರಿಹಾರ ಘೋಷಣೆ ಮಾಡಿದ್ದಾರೆ.

ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರವನ್ನು ಪ್ರಧಾನಿ ಘೋಷಿಸಿದ್ದಾರೆ. ಅಲ್ಲದೆ, ದೂರವಾಣಿ ಕರೆ ಮಾಡಿ ಘಟನೆಯ ಬಗ್ಗೆ ಪ್ರಧಾನಿ ಮಾಹಿತಿ ಪಡೆದಿದ್ದಾರೆ.

  • An ex-gratia of Rs. 2 lakh each from PMNRF would be given to the next of kin of those who lost their lives in an accident in Kinnaur, Himachal Pradesh. Rs. 50,000 would be given to the injured: PM @narendramodi

    — PMO India (@PMOIndia) July 25, 2021 " class="align-text-top noRightClick twitterSection" data=" ">

ಭಾರಿ ಮಳೆಯಿಂದ ಬಸ್ತೇರಿಯ ಸಾಂಗ್ಲಾ-ಚಿಟ್ಕುಲ್ ರಸ್ತೆ ಬಳಿ ಭಾನುವಾರ ಮಧ್ಯಾಹ್ನ ಪರ್ವತದ ತುದಿಯಲ್ಲಿ ಹಲವು ಬಾರಿ ಭೂಕುಸಿತ ಸಂಭವಿಸಿದ್ದು, ಬಂಡೆಗಳು ಉರುಳಿಬಿದ್ದ ಪರಿಣಾಮ 9 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಸೇತುವೆ ಮುರಿದು ಬಿದ್ದಿದೆ.

ಓದಿ : ಭೂಕುಸಿತದ ಭಯಾನಕ ವಿಡಿಯೋ: ಪರ್ವತದಿಂದ ಉರುಳಿದ ಬಂಡೆಗಳಿಗೆ 9 ಪ್ರವಾಸಿಗರು ಬಲಿ

ಭೂಕುಸಿತ ಸಂಭವಿಸುತ್ತಿರುವ ಭೀಕರ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಗುಡ್ಡದ ಮೇಲಿಂದ ಬೃಹತ್ ಗಾತ್ರದ ಬಂಡೆಗಳು ಉರುಳಿ ಬಂದು ಸೇತುವೆ ಮೇಲೆ ಬೀಳುತ್ತಿರುವ ದೃಶ್ಯ ಭಯಾನಕವಾಗಿದೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ ಟೆಂಪೋ ಟ್ರಾವೆಲ್ಲರ್​​ ಮೇಲೆ ಬಂಡೆಗಳು ಉರುಳಿ ಬಿದ್ದ ಪರಿಣಾಮ 9 ಮಂದಿ ಸ್ಥಳದಲ್ಲಿ ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ. ಚಿಟ್ಕುಲ್​ನಿಂದ ಸಾಂಗ್ಲಾಕ್ಕೆ ತೆರಳುತ್ತಿದ್ದ ಪ್ರಯಾಣಿಕರ ವಾಹನದ ಮೇಲೆ ಬಂಡೆಗಳು ಉರುಳಿದೆ. ಇದೇ ರೀತಿಯ ಘಟನೆಯಲ್ಲಿ ಜಿಲ್ಲೆಯ ಮತ್ತೊಂದೆಡೆ ಬಂಡೆ ಉರುಳಿ ಬಿದ್ದು ಪಾದಚಾರಿ ಮೃತಪಟ್ಟಿದ್ದಾರೆ.

ದುರ್ಘಟನೆಯಲ್ಲಿ ಮೃತರನ್ನು ಮಾಯಾ ದೇವಿ ಬಿಯಾನಿ (55), ಅವರ ಪುತ್ರ ಅನುರಾಗ್ ಬಿಯಾನಿ (31) ಮಗಳು ರಿಚಾ ಬಿಯಾನಿ (25), ಮಹಾರಾಷ್ಟ್ರದ ಪ್ರತಿಭಾ ಸುನಿಲ್ ಪಾಟೀಲ್ (27), ಜೈಪುರದ ದೀಪ ಶರ್ಮಾ (34), ಅಮೋಘ್ ಬಾಪತ್ (27), ಛತ್ತೀಸ್​ಗಢದ ಸತೀಶ್ ಕಟಕ್ಬರ್ (34), ಪಶ್ಚಿಮ ಬಂಗಾಳದ ಚಾಲಕ ಉಮ್ರಾಬ್ ಸಿಂಗ್ (42) ಮತ್ತು ಕುಮಾರ್ ಉಲ್ಹಾಸ್ ವೇದಪಥಕ್ (37) ಎಂದು ಗುರುತಿಸಲಾಗಿದೆ.

Last Updated : Jul 26, 2021, 10:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.