ಜೈಪುರ: ಕೊರೊನಾ ವೈರಸ್ನ ಎರಡನೇ ಅಲೆ ಆತಂಕದ ಮಧ್ಯೆ, ರಾಜಸ್ಥಾನ ಸರ್ಕಾರ ಎಂಟು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸುವುದಾಗಿ ಭಾನುವಾರ ಘೋಷಿಸಿದೆ. ಜೊತೆಗೆ ರಾಜ್ಯಕ್ಕೆ ಬರುವ ಪ್ರವಾಸಿಗರಿಗೆ ಆರ್ಟಿ-ಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಿದೆ.
-
अजमेर, भीलवाड़ा, जयपुर, जोधपुर, कोटा, उदयपुर, सागवाड़ा एवं कुशलगढ़ में रात्रि 11 से प्रातः 5 बजे तक नाइट कर्फ्यू रहेगा।
— Ashok Gehlot (@ashokgehlot51) March 21, 2021 " class="align-text-top noRightClick twitterSection" data="
आगामी 25 मार्च से राजस्थान में बाहर से आने वाले सभी यात्रियों के लिए 72 घंटे के भीतर की आरटी-पीसीआर नेगेटिव रिपोर्ट अनिवार्य होगी।
">अजमेर, भीलवाड़ा, जयपुर, जोधपुर, कोटा, उदयपुर, सागवाड़ा एवं कुशलगढ़ में रात्रि 11 से प्रातः 5 बजे तक नाइट कर्फ्यू रहेगा।
— Ashok Gehlot (@ashokgehlot51) March 21, 2021
आगामी 25 मार्च से राजस्थान में बाहर से आने वाले सभी यात्रियों के लिए 72 घंटे के भीतर की आरटी-पीसीआर नेगेटिव रिपोर्ट अनिवार्य होगी।अजमेर, भीलवाड़ा, जयपुर, जोधपुर, कोटा, उदयपुर, सागवाड़ा एवं कुशलगढ़ में रात्रि 11 से प्रातः 5 बजे तक नाइट कर्फ्यू रहेगा।
— Ashok Gehlot (@ashokgehlot51) March 21, 2021
आगामी 25 मार्च से राजस्थान में बाहर से आने वाले सभी यात्रियों के लिए 72 घंटे के भीतर की आरटी-पीसीआर नेगेटिव रिपोर्ट अनिवार्य होगी।
ಅಜ್ಮೀರ್, ಭಿಲ್ವಾರಾ, ಜೋಧ್‌ಪುರ, ಕೋಟಾ, ಉದಯಪುರ, ಸಾಗ್ವಾರಾ, ಕುಶಲ್‌ಘರ್ ಮತ್ತು ಜೈಪುರದಲ್ಲಿ ಸೋಮವಾರದಿಂದ ಪ್ರತಿದಿನ ರಾತ್ರಿ 11 ರಿಂದ ಬೆಳಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗುವುದು. ಆದರೆ ಎಲ್ಲಾ ತುರ್ತು ಸೇವೆಗಳಿಗೆ ಕರ್ಫ್ಯೂ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ. ಈ ರಾತ್ರಿ ಕರ್ಫ್ಯೂ ಕಾರ್ಖಾನೆಗಳಿಗೆ ಅನ್ವಯಿಸಲಾಗುವುದಿಲ್ಲ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಕೊರೊನಾ ಕೋರ್ ಗ್ರೂಪ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೋವಿಡ್ -19 ಹರಡುವುದನ್ನು ತಡೆಯಲು, ರಾಜ್ಯದ ಎಲ್ಲಾ ನಗರಗಳಲ್ಲಿ ರಾತ್ರಿ 10 ರಿಂದ ಮಾರುಕಟ್ಟೆಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ. ಮಾರ್ಚ್ 25 ರಿಂದ ರಾಜಸ್ಥಾನಕ್ಕೆ ಪ್ರಯಾಣಿಸುವವರಿಗೆ 72 ಗಂಟೆಗಳಿಗಿಂತ ಹೆಚ್ಚು ಹಳೆಯದಾಗಿರದ ಆರ್ಟಿ-ಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ಈ ಹಿಂದೆ ಕೇರಳ, ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಹರಿಯಾಣ ಮತ್ತು ಮಧ್ಯಪ್ರದೇಶದಿಂದ ಬರುವವರು ತಮ್ಮೊಂದಿಗೆ ಕೋವಿಡ್ ನೆಗೆಟಿವ್ ವರದಿಯನ್ನು ತರುವಂತೆ ಆದೇಶಿಸಲಾಗಿತ್ತು. ಇದೀಗ ಕೊರೊನಾ ನೆಗೆಟಿವ್ ವರದಿಯಿಲ್ಲದೆ ರಾಜಸ್ಥಾನಕ್ಕೆ ಬರುವ ಪ್ರಯಾಣಿಕರು 15 ದಿನಗಳವರೆಗೆ ಕ್ವಾರಂಟೈನ್ಗೆ ಒಳಗಾಗಬೇಕು ಎಂದು ಘೋಷಿಸಲಾಗಿದೆ.
ಐದು ಆ್ಯಕ್ಟಿವ್ ಪ್ರಕರಣಗಳನ್ನು ಹೊಂದಿರುವ ಸ್ಥಳಗಳನ್ನು ಮಿನಿ ಕಂಟೈನ್‌ಮೆಂಟ್ ವಲಯಗಳಾಗಿ ಪರಿವರ್ತಿಸಲಾಗುತ್ತದೆ. ಮುಂದಿನ ಆದೇಶದವರೆಗೆ ಪ್ರಾಥಮಿಕ ಶಾಲೆಗಳು ಮುಚ್ಚಲ್ಪಡುತ್ತವೆ ಹಾಗೂ ಶೇ 50 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ತರಗತಿಗಳು ಮತ್ತು ಕಾಲೇಜುಗಳಿಗೆ ಹಾಜರಾಗಲು ಅವಕಾಶವಿರುವುದಿಲ್ಲ. ಈ ಸಂಸ್ಥೆಗಳಲ್ಲಿ ಸ್ಕ್ರೀನಿಂಗ್, ರ್ಯಾಂಡಮ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗುತ್ತದೆ. ಪೋಷಕರು ಒಪ್ಪಿಗೆ ಕೊಟ್ಟರಷ್ಟೇ ಮಕ್ಕಳು ಶಾಲೆಗೆ ಬರಲು ಅವಕಾಶ. ಮದುವೆ ಮತ್ತು ಅಂತ್ಯಕ್ರಿಯೆಯಂಥ ಸಮಾರಂಭದಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು 20 ಕ್ಕೆ ಸೀಮಿತಗೊಳಿಸಲಾಗುತ್ತದೆ.
ಇದನ್ನೂ ಓದಿ:ಕೊರೊನಾ ಕಾಟ: ಛತ್ತೀಸ್ಗಢದಲ್ಲಿ ಶಾಲಾ-ಕಾಲೇಜು ಮತ್ತೆ ಬಂದ್