ETV Bharat / bharat

ಪಾಕ್​ನ ಹೊಸ ಉಗ್ರಗಾಮಿ ಸಂಘಟನೆಗೆ ಫಂಡಿಂಗ್​: ಹಣದ ಜಾಡು ಹಿಡಿದು ಹೊರಟ ಎನ್​ಐಎ

ರಾಷ್ಟ್ರೀಯ ತನಿಖಾ ಸಂಸ್ಥೆಯು ಪಾಕಿಸ್ತಾನ ಮೂಲದ ಹೊಸ ಉಗ್ರಗಾಮಿ ಸಂಘಟನೆ ಲಷ್ಕರ್-ಇ-ಮುಸ್ತಫಾ ಸಂಘಟನೆಗೆ ಬರುತ್ತಿರುವ ಹಣದ ಮೂಲವನ್ನು ಪತ್ತೆ ಹಚ್ಚಲು ಮುಂದಾಗಿದೆ.

NIA investigating source of funding for Pakistan based Lashkar-e-Mustafa
ಉಗ್ರಗಾಮಿ ಸಂಘಟನೆಗೆ ಫಂಡಿಂಗ್​: ಹಣದ ಜಾಡು ಹಿಡಿದು ಹೊರಟ ಎನ್​ಐಎ
author img

By

Published : Aug 14, 2021, 7:50 AM IST

ನವದೆಹಲಿ: ಪಾಕಿಸ್ತಾನ ಮೂಲದ ಹೊಸ ಉಗ್ರಗಾಮಿ ಸಂಘಟನೆ ಲಷ್ಕರ್-ಇ-ಮುಸ್ತಫಾ (ಎಲ್‌ಇಎಂ)ಗೆ ಬರುತ್ತಿರುವ ಹಣಕಾಸಿನ ಮೂಲವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ಮಾಡುತ್ತಿದ್ದು, ಈ ವಿಚಾರದಲ್ಲಿ ಮೌಲಾನಾ ಮಸೂದ್ ಅಜರ್​ನ ಸಹೋದರ ಮುಫ್ತಿ ರೌಫ್​ನ ಪಾತ್ರವನ್ನು ಹುಡುಕುತ್ತಿದೆ.

ಎನ್ಐಎಯ ಹಿರಿಯ ಅಧಿಕಾರಿಯೊಬ್ಬರು 'ಈಟಿವಿ ಭಾರತ'ದೊಂದಿಗೆ ಈ ಕುರಿತು ಮಾಹಿತಿ ನೀಡಿದ್ದು, ಹಣದ ಜಾಡನ್ನು ತನಿಖೆ ಮಾಡಲಾಗುತ್ತಿದೆ ಮತ್ತು ಆದರೆ ಈ ಕುರಿತು ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಎನ್‌ಐಎ ಸಲ್ಲಿಸಿದ ಇತ್ತೀಚಿನ ಚಾರ್ಜ್​​​ಶೀಟ್‌ನಲ್ಲಿ, ಲಷ್ಕರ್-ಇ-ಮುಸ್ತಫಾ ಇಂಡಿಯಾ ಮುಖ್ಯಸ್ಥ ಹಿದಾಯತ್ ಉಲ್ಲಾ ಮಲಿಕ್ ಅಥವಾ ಹಸ್ನೈನ್, ಮೌಲಾನಾ ಮಸೂದ್ ಅಜರ್ ಸಹೋದರ ಮುಫ್ತಿ ರೌಫ್,ಅಶಾಕ್​​ ಅಹ್ಮದ್ ನೆಂಗ್ರೂ, ಡಾಕ್ಟರ್ ಎಂದೇ ಕರೆಸಿಕೊಳ್ಳುತ್ತಿದ್ದ ಭಯೋತ್ಪಾದಕ ನಾಯಕ ಅಬು ತಲ್ಹಾ ಜೊತೆ ಪಾಕಿಸ್ತಾನದ ಮೊಬೈಲ್ ಸಂಖ್ಯೆ ಮೂಲಕ ಸಂಪರ್ಕದಲ್ಲಿದ್ದನೆಂದು ಉಲ್ಲೇಖಿಸಲಾಗಿದೆ.

ಈ ಚಾರ್ಜ್​ಶೀಟ್​ನಲ್ಲಿ ಜೈಷ್-ಇ-ಮೊಹಮದ್ ಸಂಘಟನೆಯ ಕಮಾಂಡರ್​ಗಳು ಲಷ್ಕರ್ -ಇ- ಮುಸ್ತಾಫಾ ಮುಖ್ಯಸ್ಥ ಹಿದಾಯತ್ ಮಲಿಕ್​ಗೆ ಜಮ್ಮು ಪ್ರದೇಶ ಸೇರಿದಂತೆ ಜಮ್ಮು ಕಾಶ್ಮೀರ ಭಾಗದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಲಾಗಿದೆ.

ಪುಲ್ವಾಮಾ ದಾಳಿಯ ನಂತರ ಅಂತಾರಾಷ್ಟ್ರೀಯ ಒತ್ತಡದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಜೈಷ್-ಇ-ಮೊಹಮ್ಮದ್ ಸಂಘಟನೆಯು ಲಷ್ಕರ್-ಇ-ಮುಸ್ತಾಫಾ ಹೆಸರಿನಲ್ಲಿ ಹೊಸ ಸಂಘಟನೆಯೊಂದನ್ನು 2020ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟುಹಾಕಿತ್ತು.

ಇದನ್ನೂ ಓದಿ: ಅಮರಾವತಿಯಲ್ಲಿ ಅಪೌಷ್ಟಿಕತೆ: ಮೂರೇ ತಿಂಗಳಲ್ಲಿ 49 ಮಕ್ಕಳ ಮರಣ ಮೃದಂಗ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.