ETV Bharat / bharat

ದೇಶಾದ್ಯಂತ 93 ಸ್ಥಳಗಳಲ್ಲಿ ಎನ್​​ಐಎ ದಾಳಿ.. 106 ಪಿಎಫ್​ಐ ಕಾರ್ಯಕರ್ತರ ಬಂಧನ - ಯಾವ ಯಾವ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲು

ಈ ಸಂಬಂಧ ಐದು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಈ ಪ್ರಕರಣಗಳ ಅಡಿಯೇ ಎಲ್ಲ ಬಂಧನಗಳನ್ನು ಮಾಡಲಾಗಿದೆ. ದೆಹಲಿಯಲ್ಲಿ ಬಂಧಿಸಲಾಗಿರುವ ಎಲ್ಲ ಪಿಎಫ್‌ಐ ಕಾರ್ಯಕರ್ತರನ್ನು ಕೋರ್ಟ್​ಗೆ ಹಾಜರು ಪಡಿಸಿದ ಬಳಿಕ ನಾಲ್ಕು ದಿನಗಳ ಎನ್​ಐಎ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

nia-nationwide-crackdown-on-pfi
ದೇಶಾದ್ಯಂತ 93 ಸ್ಥಳಗಳಲ್ಲಿ ಎನ್​​ಐಎ ದಾಳಿ
author img

By

Published : Sep 22, 2022, 8:30 PM IST

ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪಿಎಫ್‌ಐ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ 15 ರಾಜ್ಯಗಳ 93 ಸ್ಥಳಗಳಲ್ಲಿ ದಾಳಿ ನಡೆಸಿದೆ. ದಾಳಿ ವೇಳೆ ದೇಶಾದ್ಯಂತ ಸುಮಾರು 106 ಪಿಎಫ್​ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಎನ್‌ಐಎ ಒಂದೇ 45 ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿದ್ದು, ಅವರ ವಿರುದ್ಧ ಕಠಿಣ ಯುಎಪಿಎ ಅಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು 'ಸಮುದಾಯಗಳ ನಡುವೆ ದ್ವೇಷ ಉತ್ತೇಜಿಸುವ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದು, ದೇಶದ ವಿರುದ್ಧ ಇವರು ಯುದ್ಧ ಸಾರಿದ್ದಾರೆ ಎಂದು ಆರೋಪಿಸಿದರು.

ಕೇರಳದ (39 ಸ್ಥಳಗಳು), ತಮಿಳುನಾಡು (16), ಕರ್ನಾಟಕ (12), ಆಂಧ್ರಪ್ರದೇಶ (7), ತೆಲಂಗಾಣ (1), ಯುಪಿ (2), ರಾಜಸ್ಥಾನ (4), ದೆಹಲಿ (4) ಅಸ್ಸೋಂ (1), ಎಂಪಿ (1), ಮಹಾರಾಷ್ಟ್ರ (4) ಗೋವಾ (1), ಪಶ್ಚಿಮ ಬಂಗಾಳ (1), ಬಿಹಾರ (1) ಮತ್ತು ಮಣಿಪುರ (1) ಸೇರಿ 15 ರಾಜ್ಯಗಳ 93 ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸಿದೆ.

ಈ ಸಂಬಂಧ ಐದು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಈ ಪ್ರಕರಣಗಳ ಅಡಿಯೇ ಎಲ್ಲ ಬಂಧನಗಳನ್ನು ಮಾಡಲಾಗಿದೆ. ದೆಹಲಿಯಲ್ಲಿ ಬಂಧಿಸಲಾಗಿರುವ ಎಲ್ಲಾ ಪಿಎಫ್‌ಐ ಕಾರ್ಯಕರ್ತರನ್ನು ಕೋರ್ಟ್​ಗೆ ಹಾಜರು ಪಡಿಸಿದ ಬಳಿಕ ನಾಲ್ಕು ದಿನಗಳ ಎನ್​ಐಎ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

ಮುಂಬೈನಲ್ಲಿ ಬಂಧಿತ ಕಾರ್ಯಕರ್ತರನ್ನು ಐದು ದಿನ ಎನ್​​ಐಎ ಕಸ್ಟಡಿ: ಮುಂಬೈ ನ್ಯಾಯಾಲಯವು ಗುರುವಾರ ಐವರು ಪಿಎಫ್‌ಐ ಕಾರ್ಯಕರ್ತರನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ವಶಕ್ಕೆ ನೀಡಿದೆ. ಎಟಿಎಸ್ ರಾಷ್ಟ್ರವ್ಯಾಪಿ ಬಹು ಸಂಸ್ಥೆಗಳ ಕಾರ್ಯಾಚರಣೆಯ ಭಾಗವಾಗಿ ಗುರುವಾರ ರಾಜ್ಯದ ವಿವಿಧೆಡೆಯಿಂದ ಒಟ್ಟು 20 ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿದೆ. ಇವರಲ್ಲಿ ಐವರನ್ನು 14 ದಿನಗಳ ಕಾಲ ಕಸ್ಟಡಿಗೆ ಕೋರಿ ಎಟಿಎಸ್‌ನೊಂದಿಗೆ ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದರೆ, ನ್ಯಾಯಾಲಯ ಅವರನ್ನು ಐದು ದಿನಗಳ ಕಾಲ ತನಿಖಾ ಸಂಸ್ಥೆಯ ವಶಕ್ಕೆ ನೀಡಿ ಆದೇಶ ಮಾಡಿದೆ.

ಮಹಾರಾಷ್ಟ್ರದಲ್ಲಿ ಮುಂಬೈ, ನವಿ ಮುಂಬೈ, ಥಾಣೆ, ಔರಂಗಾಬಾದ್, ಪುಣೆ, ಕೊಲ್ಹಾಪುರ, ಬೀಡ್, ಪರ್ಭಾನಿ, ನಾಂದೇಡ್, ಮಾಲೆಗಾಂವ್ (ನಾಸಿಕ್ ಜಿಲ್ಲೆ) ಮತ್ತು ಜಲಗಾಂವ್‌ನಲ್ಲಿ ಎಟಿಎಸ್ ತಂಡದಿಂದ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಯಾವ ಯಾವ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲು: ಭಯೋತ್ಪಾದನಾ ನಿಗ್ರಹ ಸಂಸ್ಥೆ ಮುಂಬೈ, ನಾಸಿಕ್, ಔರಂಗಾಬಾದ್ ಮತ್ತು ನಾಂದೇಡ್‌ನಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 153-A (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು), 121A (ರಾಜ್ಯದ ವಿರುದ್ಧ ಕೆಲವು ಅಪರಾಧಗಳನ್ನು ಮಾಡಲು ಪಿತೂರಿ) ಮತ್ತು 120B (ಕ್ರಿಮಿನಲ್) ಸೇರಿದಂತೆ ಯುಎಪಿಎ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ.

ಇದನ್ನು ಓದಿ:18 ಗಂಟೆಗಳಿಗೂ ಹೆಚ್ಚು ಸಮಯ ಶಾಲಾ ಕೊಠಡಿಯಲ್ಲೇ ಸಿಕ್ಕಿಹಾಕ್ಕೊಂಡ​ ಬಾಲಕಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.