ಶ್ರೀನಗರ, ಜಮ್ಮು ಕಾಶ್ಮೀರ: ರಾಷ್ಟ್ರೀಯ ತನಿಖಾ ದಳ (ಎನ್ಐಎ) ಜಮ್ಮು ಕಾಶ್ಮೀರದಲ್ಲಿ ನಾಗರಿಕರ ಮೇಲೆ ಭಯೋತ್ಪಾದನಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 8 ಮಂದಿಯನ್ನ ಬಂಧಿಸಿದ್ದು, ತನಿಖೆ ಮತ್ತಷ್ಟು ಚುರುಕುಗೊಳಿಸಿದೆ.
ಎಂಟು ಮಂದಿಯನ್ನು ಶುಕ್ರವಾರ ಬಂಧಿಸಲಾಗಿದೆ. ಬಂಧಿತರು ವಿವಿಧ ಭಯೋತ್ಪಾದನಾ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದು, ಭಯೋತ್ಪಾದಕರಿಗೆ ಬೇಕಾದ ಶಸ್ತ್ರಗಳು ಮತ್ತು ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಿದ್ದರು ಎಂದು ಎನ್ಐಎ ತನ್ನ ಅಧಿಕೃತ ಹೇಳಿಕೆ ನೀಡಿದೆ.
ಶ್ರೀನಗರ, ಕುಲ್ಗಾಂ,ಶೋಪಿಯಾನ್, ಕುಪ್ವಾರಾ, ಪುಲ್ವಾಮಾ, ಅನಂತ್ನಾಗ್ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ದಾಳಿ ಶುಕ್ರವಾರ ದಾಳಿ ನಡೆಸಲಾಗಿದೆ. ಶ್ರೀನಗರದಲ್ಲಿ ಆದಿಲ್ ಅಹ್ಮದ ವರ್, ಮನನ್ ಗುಲ್ಜಾರ್ ದರ್, ಸೋಭಿಯಾ, ಜಮಿನ್ ಆದಿಲ್ ಮತ್ತು ಹ್ಯಾರಿಸ್ ನಿಸಾರ್ ಲಾಂಗೂ ಎಂಬುವರನ್ನು ಬಂಧಿಸಲಾಗಿದೆ.
ಕುಪ್ವಾರಾ ಜಿಲ್ಲೆಯಿಂದ ಹಿಲಾಲ್ ಅಹ್ಮದ್ ದಾರ್ ಶಕೀಬ್ ಬಶೀರ್ ಹಾಗೂ ಅನಂತ್ನಾಗ್ನಿಂದ ರೌಫ್ ಭಟ್ ಎಂಬಾತನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಇದರಿಂದ ಒಟ್ಟು ಬಂಧಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ವಿದ್ಯುನ್ಮಾನ ಸಾಧನಗಳನ್ನುಜಪ್ತಿ ಮಾಡಲಾಗಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: ಉತ್ತರಾಖಂಡ ಟ್ರೆಕ್ಕಿಂಗ್ ದುರಂತ: ಏಳಕ್ಕೇರಿದ ಸಾವಿನ ಸಂಖ್ಯೆ, ಇಬ್ಬರಿಗಾಗಿ ಶೋಧ