ETV Bharat / bharat

ನವಜಾತ ಶಿಶುವಿಗೆ ಕಚ್ಚಿದ 'ಇಲಿ'.. ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಆಕ್ರೋಶ - ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಕಚ್ಚಿದ ಇಲಿ

ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುವಿಗೆ ಇಲಿಯೊಂದು ಕಚ್ಚಿರುವ ಪರಿಣಾಮ ಅದು ಜಿವನ್ಮರಣದ ಮಧ್ಯೆ ಹೋರಾಟ ನಡೆಸಿದೆ.

newborn was bitten by mouse
newborn was bitten by mouse
author img

By

Published : May 2, 2022, 7:03 PM IST

ಗಿರಿದಿಹ್ (ಜಾರ್ಖಂಡ್): ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಮಾಡುವ ಯಡವಟ್ಟಿನಿಂದಾಗಿ ಅನೇಕರು ಈಗಾಗಲೇ ಸಾವನ್ನಪ್ಪಿರುವ ಘಟನೆ ನಮ್ಮ ಕಣ್ಮುಂದೆ ನಡೆದು ಹೋಗಿವೆ. ಇದೀಗ ಅಂತಹ ಮತ್ತೊಂದು ಘಟನೆ ಜಾರ್ಖಂಡ್​ನ ಗಿರಿದಹ್​​​ ಆಸ್ಪತ್ರೆಯಲ್ಲಿ ನಡೆದಿದೆ.

newborn was bitten by mouse
ನವಜಾತ ಶಿಶು ಘಟಕದಲ್ಲಿ ಮಗುವಿಗೆ ಚಿಕಿತ್ಸೆ

ಗಿರಿದಹ್ ಜಿಲ್ಲೆಯ ಚೈತಡಿಯಲ್ಲಿರುವ ಸರ್ಕಾರಿ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ಘಟಕದಲ್ಲಿ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ನವಜಾತ ಶಿಶುವಿಗೆ ಇಲಿಯೊಂದು ಕಚ್ಚಿದೆ. ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದು, ಇದೀಗ ಹೆಚ್ಚಿನ ಚಿಕಿತ್ಸೆಗೋಸ್ಕರ ಧನ್ಬಾದ್​​ಗೆ ಕರೆದೊಯ್ಯಲಾಗಿದೆ. ಈ ವಿಷಯವನ್ನ ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದ್ದು, ಕಠಿಣ ಶಿಕ್ಷೆಗೆ ಆಗ್ರಹಿಸಿದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿ ತಂದೆ, ಮಗಳ ಮೇಲೆ ಚಿರತೆ ದಾಳಿ!

ಜಾರ್ಖಂಡ್​ನ ನಿವಾಸಿ ರಾಜೇಶ್ ಸಿಂಗ್​ ಅವರ ಪತ್ನಿ ಮಮತಾ ದೇವಿ ಕಳೆದ ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಬಾಲಕಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಶಿಶು ವಿಭಾಗದಲ್ಲಿ ಇರಿಸಲಾಗಿತ್ತು. ಈ ನಡುವೆ ಸೋಮವಾರ ಈ ವಿಭಾಗದಲ್ಲಿ ಕೆಲಸ ಮಾಡ್ತಿದ್ದ ನರ್ಸ್​​ ಮಗುವಿಗೆ ಜಾಂಡೀಸ್ ಕಾಣಿಸಿಕೊಂಡಿರುವುದಾಗಿ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಹೆಚ್ಚಿನ ಚಿಕಿತ್ಸೆಗಾಗಿ ಧನ್ಬಾದ್​ಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಂತೆ ವೈದ್ಯರು ಮಗುವಿನ ತಪಾಸಣೆ ನಡೆಸಿದ್ದು, ಈ ವೇಳೆ ಇಲಿ ಕಚ್ಚಿರುವ ವಿಷಯ ತಿಳಿದು ಬಂದಿದೆ.

newborn was bitten by mouse
ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪ್ರತಿಭಟನೆ

ಈ ಮಾಹಿತಿಯನ್ನ ಕುಟುಂಬ ಸದಸ್ಯರು ಶಾಸಕ ಸುದಿವ್ಯ ಕುಮಾರ್ ಮತ್ತು ಜೆಎಂಎಂ ಜಿಲ್ಲಾಧ್ಯಕ್ಷ ಸಂಜಯ್​ ಕುಮಾರ್ ಸಿಂಗ್​ ಅವರಿಗೆ ತಿಳಿಸಿದ್ದಾರೆ. ಘಟನೆ ಬೆನ್ನಲ್ಲೇ ಆಸ್ಪತ್ರೆಗೆ ಆಗಮಿಸಿರುವ ಜಿಲ್ಲಾಧ್ಯಕ್ಷರು ಆಸ್ಪತ್ರೆ ಆಡಳಿತ ವೈಖರಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಸಿವಿಲ್ ಸರ್ಜನ್ ಮಿಶ್ರಾ ಅವರೊಂದಿಗೆ ಮಾತನಾಡಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.