ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮಾನವೀಯತೆಯೇ ಬೆಚ್ಚಿಬೀಳುವಂತಹ ಘಟನೆ ಜರುಗಿದೆ. ನವಜಾತ ಶಿಶುವಿನ ಶವವನ್ನು ನಾಯಿಗಳು ಕಿತ್ತು ತಿನ್ನಲು ಯತ್ನಿಸುತ್ತಿದ್ದ ಘಟನೆ ಕಂಡುಬಂದಿದೆ. ಶಿಮ್ಲಾದ ಮೆಹ್ಲಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಈ ಶವ ಪತ್ತೆಯಾಗಿದ್ದು, ಕಟ್ಟಡದ ಮೂಲಕ ಹೋಗುತ್ತಿದ್ದ ಕೆಲವರು ಇದನ್ನು ಗಮನಿಸಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಫೋರೆನ್ಸಿಕ್ ತಂಡ ಮತ್ತು ಶ್ವಾನ ದಳದೊಂದಿಗೆ ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಿಮ್ಲಾದ ಮೆಹ್ಲಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಲ್ಯಾಂಟರ್ನ್ ಅಡಿಯಲ್ಲಿ ನಾಯಿಗಳು ನವಜಾತ ಶಿಶುವಿನ ದೇಹವನ್ನು ತಿನ್ನಲು ಮುಂದಾಗಿದ್ದವು ಎಂಬ ಬಗ್ಗೆ ಮಾಹಿತಿ ಬಂದಿತ್ತು. ಅದರಂತೆ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಡಿಎಸ್ಪಿ ಸಿಟಿ ಮಂಗಲ್ರಾಮ್ ತಿಳಿಸಿದ್ದಾರೆ.
ಈ ಮಗು ಯಾರದ್ದು, ನಾಯಿಗಳು ಎಲ್ಲಿಂದ ಕಚ್ಚಿಕೊಂಡು ಬಂದವು ಎಂಬೆಲ್ಲಾ ಮಾಹಿತಿಯನ್ನು ಪೊಲೀಸರು ಕಲೆಹಾಕಲು ಮುಂದಾಗಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಮಳೆಯಿಂದ 40 ಕೋಟಿ ಮೌಲ್ಯದ ಬೆಳೆ ಹಾನಿ.. ಶೀಘ್ರ ಪರಿಹಾರ ಭರವಸೆ ನೀಡಿದ ಸಚಿವರು