ನವದೆಹಲಿ: ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯನ್ನು ಒಳಗೊಂಡಂತೆ ಈ ಬಾರಿಯ ಗಣರಾಜ್ಯೋತ್ಸವವು ಜನವರಿ 23 ರಿಂದ ಪ್ರಾರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಈಗ ನೇತಾಜಿ ಸುಭಾಷ ಚಂದ್ರ ಬೋಸ್ ಅವರ ಬೃಹತ್ ಪ್ರತಿಮೆ ಇಂಡಿಯಾ ಗೇಟ್ ಬಳಿ ಸ್ಥಾಪಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಓದಿ: ರಸ್ತೆಯಲ್ಲಿ ಹೋಗ್ತಿದ್ದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ..!
ಪ್ರತಿ ವರ್ಷ ಜನವರಿ 24ರಿಂದ ಗಣರಾಜ್ಯೋತ್ಸವದ ಆಚರಣೆ ಆರಂಭವಾಗುತ್ತಿತ್ತು. ಈ ಹಿಂದೆ ಸುಭಾಶ್ಚಂದ್ರ ಬೋಸ್ ಅವರ ಜನ್ಮದಿನವಾದ ಜನವರಿ 23ನ್ನು ‘ಪರಾಕ್ರಮ್ ದಿವಸ್’ ಎಂದು ಆಚರಿಸಲು ಸರ್ಕಾರ ಪ್ರಾರಂಭಿಸಿತ್ತು. ಸರ್ಕಾರವು ಅನೇಕ ಮಹನೀಯರ ದಿನಾಚರಣೆಗಳನ್ನು ಆಚರಿಸುತ್ತಿದೆ.
ಆಗಸ್ಟ್ 14 ಅನ್ನು ‘ವಿಭಜನೆಯ ಕರಾಳ ನೆನಪಿನ ದಿನ’, ಅಕ್ಟೋಬರ್ 31 ಅನ್ನು ‘ರಾಷ್ಟ್ರೀಯ ಏಕತಾ ದಿನ’ (ಸರ್ದಾರ್ ಪಟೇಲ್ ಅವರ ಜನ್ಮದಿನ), ನವೆಂಬರ್ 15 ‘ಜನಜಾತಿಯ ಗೌರವ ದಿವಸ’ (ಬಿರ್ಸಾ ಮುಂಡಾ ಅವರ ಜನ್ಮ ವಾರ್ಷಿಕೋತ್ಸವ), ನವೆಂಬರ್ 26 ಅನ್ನು ಸಂವಿಧಾನ ದಿನವಾಗಿ ಮತ್ತು ಡಿಸೆಂಬರ್ 26 ಅನ್ನು ವೀರ್ ಬಾಲ್ ದಿವಸ್ (ಗುರು ಗೋಬಿಂದ್ ಸಿಂಗ್ ಅವರ ನಾಲ್ವರು ಪುತ್ರರಿಗೆ ಗೌರವ) ಆಗಿ ಆಚರಿಸಲಾಗುತ್ತದೆ.
ಓದಿ: ಚಲಿಸುತ್ತಿದ್ದ ಬಿಎಂಟಿಸಿ ಬಸ್ನಲ್ಲಿ ಕಾಣಿಸಿಕೊಂಡ ಬೆಂಕಿ: ಪ್ರಾಣಾಪಾಯದಿಂದ ಪಾರಾದ 40 ಪ್ರಯಾಣಿಕರು
ಇದೇ ಮಾದರಿಯಲ್ಲಿ ಸುಭಾಶ್ಚಂದ್ರ ಬೋಸ್ ಅವರ ಜನ್ಮದಿನಾಚರಣೆಯನ್ನು ‘ಪರಾಕ್ರಮ್ ದಿವಸ್’ ಆಗಿ ಆಚರಿಸಲಾಗುತ್ತದೆ. ಈ ಬಾರಿ ಸರ್ಕಾರವು ಅದನ್ನು ಗಣರಾಜ್ಯೋತ್ಸವ ಆಚರಣೆಯ ವೇಳಾಪಟ್ಟಿಗೆ ಸೇರಿಸಿದೆ. ಇನ್ನು ಇಂಡಿಯಾ ಗೇಟ್ ಬಳಿ ಸುಭಾಶ್ಚಂದ್ರ ಬೋಸ್ ವಿಗ್ರಹವನ್ನು ಸ್ಥಾಪಿಸುವ ಮೂಲಕ ವಿಶೇಷ ಗೌರವ ಸಲ್ಲಿಸಲಾಗುತ್ತದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ