ಮುಂಬೈ: ಆಲಿಯಾ ಭಟ್ ಮತ್ತು ರಣ್‌ಬೀರ್ ಕಪೂರ್ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ವಿಚಾರವಾಗಿ ರಣ್‌ಬೀರ್ ತಾಯಿ ನೀತು ಕಪೂರ್ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತು ನೀತು ಭಾನುವಾರ ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿ, ತಾವು ಅಜ್ಜಿಯಾಗಿರುವ ಖುಷಿಯನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಆಲಿಯಾ ಅವರ ಆರೋಗ್ಯ ಸ್ಥಿತಿ ಮತ್ತು ಮಗುವಿನ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ಇನ್ನು, ಭಾನವಾರ ಬೆಳಗ್ಗೆ ಆಲಿಯಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಬೆನ್ನಲ್ಲೇ ಅವರನ್ನು ಮುಂಬೈನ್ ಹೆಚ್ಎನ್ ಆಸ್ಪತ್ರಗೆ ದಾಖಲಿಸಲಾಗಿತ್ತು. ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ ವಿಷಯ ತಿಳಿದು ಅಭಿಮಾನಿಗಳು ಮತ್ತು ಚಿತ್ರರಂಗದ ನಟ, ನಟಿಯರು ದಂಪತಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಇದನ್ನೂ ಓದಿ: 'ಹೆಣ್ಣು ಮಕ್ಕಳು ನಿಜಕ್ಕೂ ವಿಶೇಷ..' ಆಲಿಯಾ-ರಣ್‌ಬೀರ್ ದಂಪತಿಗೆ ಮಹೇಶ್ ಬಾಬು ಅಭಿನಂದನೆ