ನವದೆಹಲಿ: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಭಾರತ ಸರ್ಕಾರವು ಆಪರೇಷನ್ ಗಂಗಾ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ನಡುವೆಯೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಬುಧವಾರ ಉಕ್ರೇನ್‌ಗೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ.
ಎನ್ಡಿಆರ್ಎಫ್ ಉಕ್ರೇನ್‌ನ ಜನರಿಗೆ ಹೊದಿಕೆಗಳು, ಮಲಗುವ ಚಾಪೆಗಳು ಮತ್ತು ಸೋಲಾರ್ ಸ್ಟಡಿ ಲ್ಯಾಂಪ್‌ಗಳು ಸೇರಿದಂತೆ ಪರಿಹಾರ ಸಾಮಗ್ರಿಗಳನ್ನು ಒದಗಿಸಿದೆ. ಪರಿಹಾರ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿರುವ ಫೋಟೋಗಳನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ.
-
#आपदा_सेवा_सदैव_सर्वत्र 🇮🇳#SavingLivesAndBeyond https://t.co/lzL7HSn7Wj
— NDRF 🇮🇳 (@NDRFHQ) March 2, 2022 " class="align-text-top noRightClick twitterSection" data="
">#आपदा_सेवा_सदैव_सर्वत्र 🇮🇳#SavingLivesAndBeyond https://t.co/lzL7HSn7Wj
— NDRF 🇮🇳 (@NDRFHQ) March 2, 2022#आपदा_सेवा_सदैव_सर्वत्र 🇮🇳#SavingLivesAndBeyond https://t.co/lzL7HSn7Wj
— NDRF 🇮🇳 (@NDRFHQ) March 2, 2022
ಬುಧವಾರ ಬೆಳಗ್ಗೆ ಪೋಲೆಂಡ್‌ಗೆ ತೆರಳಿದ ವಿಮಾನದ ಮೂಲಕ ಮತ್ತು ಮಧ್ಯಾಹ್ನ ರೊಮೇನಿಯಾಗೆ ತೆರಳಿರುವ ಭಾರತೀಯ ವಾಯುಪಡೆಯ ಮತ್ತೊಂದು ವಿಮಾನದ ಮೂಲಕ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಪೋಷಕರ ಸಂತಸಕ್ಕೆ ಪಾರವೇ ಇಲ್ಲ.. ಉಕ್ರೇನ್ನಿಂದ ಬಂದ ಮಕ್ಕಳನ್ನ ತಬ್ಬಿ ಕಣ್ಣೀರಿಟ್ಟ ಕುಟುಂಬಸ್ಥರು!
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಆಪರೇಷನ್ ಗಂಗಾ ಅಡಿಯಲ್ಲಿ ನಡೆಯುತ್ತಿರುವ ಪ್ರಯತ್ನಗಳನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ಫೆಬ್ರವರಿ 28ರಂದು ವಹಿಸಿಕೊಂಡಿದ್ದರು. ಇದೇ ವೇಳೆ ಸರ್ಕಾರವು ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಹಗಲಿರುಳು ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದ್ದರು.
ಉಕ್ರೇನ್‌ನ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸಲು ಉಕ್ರೇನ್‌ಗೆ ಪರಿಹಾರ ಸಾಮಗ್ರಿಗಳನ್ನು ರವಾನಿಸಲಾಗಿದೆ ಎಂದು ಸರ್ಕಾರ ಹೇಳಿದೆ.