ಮುಂಬೈ: ಕರ್ನಾಟಕದಲ್ಲಿ ಹೋರಾಟಗಾರ ವಾಟಾಳ್ ನಾಗರಾಜ್ರ ಕತ್ತೆ, ಕೋಣ ಮೆರವಣಿಗೆ, ರಸ್ತೆ ಅಡ್ಡಲಾಗಿ ಮಲಗುವುದು ಈ ರೀತಿಯ ಗಮನ ಸೆಳೆಯುವ ಪ್ರತಿಭಟನೆಗಳನ್ನು ನೋಡಿದ್ದೀರಿ. ಅದೇ ರೀತಿ ಮುಂಬೈನ ಶಾಸಕರೊಬ್ಬರು ಶೀರ್ಶಾಸನ ಹಾಕಿ ಪ್ರತಿಭಟಿಸಿ ಗಮನ ಸೆಳೆದಿದ್ದಾರೆ.
ಹಿಂದುತ್ವ ಹೋರಾಟದ ಪ್ರತೀಕ ಶಿವಾಜಿ ಮಹಾರಾಜರ ಬಗ್ಗೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಎನ್ಸಿಪಿ, ಶಿವಸೇನೆ ನಾಯಕರು ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ವೇಳೆ ಎನ್ಸಿಪಿ ಶಾಸಕ ಸಂಜಯ್ ದೌಂಡ್ ಎಂಬುವವರು ರಾಜ್ಯಪಾಲರ ಹೇಳಿಕೆಯನ್ನು ವಿರೋಧಿಸಿ ತಲೆಕೆಳಗೆ ಮಾಡಿ(ಶೀರ್ಶಾಸನ) ನಿಂತು ವಿಚಿತ್ರವಾಗಿ ಪ್ರತಿಭಟಿಸಿದರು. ಅಲ್ಲದೇ, ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಎನ್ಸಿಪಿ ಶಾಸಕರ ಈ ವಿಚಿತ್ರ ಪ್ರತಿಭಟನೆ ಅಲ್ಲಿದ್ದವರ ಗಮನ ಸೆಳೆಯಿತು.
ಓದಿ: ಉಕ್ರೇನ್ನಲ್ಲಿ ಸಿಲುಕಿದ 693 ಕನ್ನಡಿಗರು: 149 ಮಂದಿ ಈವರೆಗೆ ತಾಯ್ನಾಡಿಗೆ ವಾಪಸ್