ಕೊಲ್ಹಾಪುರ : ಬಿಜೆಪಿ ಮುಖಂಡ ಕಿರೀಟ್ ಸೋಮಯ್ಯ ಅವರು ಇಂದು (ಫೆಬ್ರವರಿ 23) ಕೊಲ್ಲಾಪುರಕ್ಕೆ ಭೇಟಿ ನೀಡಿದ್ದಾರೆ. ಕೊಲ್ಲಾಪುರಕ್ಕೆ ತಲುಪಿದ ತಕ್ಷಣವೇ ಅವರು ಎನ್‌ಸಿಪಿ ಶಾಸಕ ಹಾಗೂ ಮಾಜಿ ಸಚಿವ ಹಸನ್ ಮುಶ್ರೀಫ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹಸನ್ ಮುಶ್ರೀಫ್ ಅವರು ಹಗರಣ 158 ಕೋಟಿ ರೂಪಾಯಿಗಳ ಹಗರಣ ಮಾಡಿದ್ದಾರೆ ಎಂದು ಹೇಳಲಾಗಿತ್ತು, ಆದರೆ ಈ ಹಗರಣ ವಾಸ್ತವದಲ್ಲಿ 500 ಕೋಟಿ ರೂಪಾಯಿಗಳಿಗೂ ಹೆಚ್ಚು ಎಂದು ಸೋಮಯ್ಯ ಆರೋಪಿಸಿದರು.
ಕಳೆದ ಕೆಲ ತಿಂಗಳುಗಳಿಂದ ಜಾರಿ ನಿರ್ದೇಶನಾಲಯವು ಶಾಸಕ ಹಸನ್ ಮುಶ್ರೀಫ್ ಅವರನ್ನು ಬೆನ್ನತ್ತಿದೆ. ಸರಸೇನಾಪತಿ ಸಂತಾಜಿ ಘೋರ್ಪಡೆ ಸಕ್ಕರೆ ಕಾರ್ಖಾನೆ ಮತ್ತು ಕೊಲ್ಲಾಪುರ ಜಿಲ್ಲಾ ಬ್ಯಾಂಕ್‌ಗೆ ಹಸನ್ ಮುಶ್ರೀಫ್ ವಂಚಿಸಿದ್ದಾರೆ ಎಂದು ಬಿಜೆಪಿ ಮುಖಂಡ ಕಿರೀಟ್ ಸೋಮಯ್ಯ ಆರೋಪಿಸಿದ್ದರು. ಇದಾದ ಬಳಿಕ ಶಾಸಕ ಹಸನ್ ಮುಶ್ರೀಫ್ ಅವರ ಮನೆಯಲ್ಲಿ ಹಾಗೂ ಮುಶ್ರೀಫ್ ಅವರೇ ಅಧ್ಯಕ್ಷರಾಗಿರುವ ಕೊಲ್ಲಾಪುರ ಜಿಲ್ಲಾ ಬ್ಯಾಂಕ್‌ನಲ್ಲಿನ ದಾಖಲೆ ಪತ್ರಗಳನ್ನು ಇಡಿ ಪರಿಶೀಲನೆ ನಡೆಸಿದದೆ. ಅದರ ನಂತರ ಸೋಮಯ್ಯ ಇಂದು ಕೊಲ್ಲಾಪುರಕ್ಕೆ ಬಂದಿದ್ದಾರೆ.
ಮುಶ್ರೀಫ್ ಕುಟುಂಬದ ಹಗರಣ 500 ಕೋಟಿ ರೂಪಾಯಿ: ಇಂದು ಬೆಳಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಕಿರೀಟ್ ಸೋಮಯ್ಯ, ಈವರೆಗೆ 158 ಕೋಟಿ ರೂಪಾಯಿ ಹಗರಣದಂತೆ ಕಂಡು ಬಂದಿದ್ದ ಶಾಸಕ ಹಸನ್ ಮುಶ್ರೀಫ್ ಕುಟುಂಬದ ಹಗರಣ ಇದೀಗ 500 ಕೋಟಿಗೂ ಅಧಿಕವಾಗಿದ್ದು, ರೈತರನ್ನು ಲೂಟಿ ಮಾಡಲು ಹಸನ್ ಮುಶ್ರೀಫ್ ಜಿಲ್ಲಾ ಬ್ಯಾಂಕನ್ನು ಸಹ ಬಿಟ್ಟಿಲ್ಲ. ಹೀಗಾಗಿ ಇಂದು ಕೊಲ್ಲಾಪುರ ಜಿಲ್ಲಾ ಬ್ಯಾಂಕ್‌ಗೆ ಭೇಟಿ ನೀಡುತ್ತಿದ್ದೇನೆ. ಹಗರಣದ ಬಗ್ಗೆ ಇಡಿ ತೆಗೆದುಕೊಂಡ ಕ್ರಮದ ಬಗ್ಗೆ ಪರಿಶೀಲಿಸಲಿದ್ದೇನೆ ಎಂದು ಹೇಳಿದ್ದಾರೆ. ಕಿರೀಟ್ ಸೋಮಯ್ಯ ಬಡ ರೈತರಿಗಾಗಿ ತನ್ನ ಪ್ರಾಣ ಬೇಕಾದರೂ ನೀಡಬಲ್ಲರು ಎಂದು ಹಸನ್ ಮುಶ್ರೀಫ್ ಈಗ ಅರಿತುಕೊಂಡಿದ್ದಾರೆ. ಕಿರೀಟ್ ಸೋಮಯ್ಯ ಕೊಲ್ಲಾಪುರಕ್ಕೆ ಕಾಲಿಡಲು ಬಿಡುವುದಿಲ್ಲ ಎಂದು ಮುಶ್ರಿಫ್ ಪಣ ತೊಟ್ಟಿದ್ದರು. ಆದರೆ ಈಗ ಅವರ ಕಾಲು ಎಲ್ಲೆಲ್ಲಿ ಜಾರಿದೆ ಎಂದು ಕಾಣಿಸುತ್ತಿದೆ ಎಂದು ಹಸನ್ ಮುಶ್ರೀಫ್ ಅವರನ್ನು ಟೀಕಿಸಿದ್ದಾರೆ.
ಕಿರೀಟ್ ಸೋಮಯ್ಯ ಇಂದಿನ ಕೊಲ್ಲಾಪುರ ಭೇಟಿ ದಿನಚರಿ: ಜಿಲ್ಲಾ ಬ್ಯಾಂಕ್ ಮೇಲೆ ಇಡಿ ದಾಳಿ ನಡೆಸಿದ ನಂತರ ಬಿಜೆಪಿ ಮುಖಂಡ ಕಿರೀಟ್ ಸೋಮಯ್ಯ ಇಂದು ಕೊಲ್ಲಾಪುರಕ್ಕೆ ಬಂದಿದ್ದಾರೆ. ಇದೇ ವೇಳೆ ಬಿಜೆಪಿ ಕಾರ್ಯಕರ್ತರು ಬೆಳಗ್ಗೆ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು. ಕಿರೀಟ್ ಸೋಮಯ್ಯ ಬೆಳಗ್ಗೆ ವಿಭಾಗೀಯ ಜಂಟಿ ನೋಂದಣಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಬಳಿಕ ಜಿಲ್ಲಾ ಬ್ಯಾಂಕ್‌ಗೆ ಭೇಟಿ ನೀಡಲಿದ್ದಾರೆ. ನಂತರ ಮಧ್ಯಾಹ್ನ ರೈತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇದರ ನಂತರ ಮಧ್ಯಾಹ್ನ ಸಮರ್ಜಿತ್‌ಸಿಂಹ ಘಾಟ್ಗೆ ಅವರ ನಿವಾಸದಲ್ಲಿ ಆಹಾರ ಸೇವಿಸಿದ ನಂತರ ಅವರು ಪುಣೆಗೆ ತೆರಳಲಿದ್ದಾರೆ. ಕಿರೀಟ್ ಸೋಮಯ್ಯ ಜಿಲ್ಲಾ ಬ್ಯಾಂಕ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇದನ್ನೂ ಓದಿ: ಪುಣೆ: ಲೆಜಿಮ್ ನೃತ್ಯಕ್ಕೆ ಹೆಜ್ಜೆ ಹಾಕಿದ ಜಿ-20 ನಿಯೋಗದ ಸದಸ್ಯರು-ವಿಡಿಯೋ