ETV Bharat / bharat

ಡಿಡಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ವತಂತ್ರ ಅಭ್ಯರ್ಥಿ ನೇಮಕ: ಕಾನೂನು ಮೊರೆಗೆ ಮುಂದಾದ ಎನ್​ಸಿ - ಎನ್‌ಸಿ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ

ಜಮ್ಮು ಕಾಶ್ಮೀರದ ಬಡ್ಗಾಮ್​ ಜಿಲ್ಲಾ ಅಭಿವೃದ್ಧಿ ಮಂಡಳಿಯ (ಡಿಡಿಸಿ) ಅಧ್ಯಕ್ಷ ಸ್ಥಾನಕ್ಕೆ ಸ್ವತಂತ್ರ ಅಭ್ಯರ್ಥಿಯನ್ನು ನೇಮಕ ಮಾಡಿರುವುದನ್ನು ಖಂಡಿಸಿರುವ ನ್ಯಾಷನಲ್ ಕಾನ್ಫರೆನ್ಸ್​ (ಎನ್​ಸಿ), ಅಧ್ಯಕ್ಷ ಚುನಾವಣೆ ವಿರುದ್ಧ ಕಾನೂನು ಮೊರೆ ಹೋಗುತ್ತೇವೆ ಎಂದು ಶನಿವಾರ ಹೇಳಿದೆ.

ಎನ್‌ಸಿ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ
NC vice-president Omar Abdullah
author img

By

Published : Feb 13, 2021, 5:36 PM IST

ಶ್ರೀನಗರ: ಜಮ್ಮು ಕಾಶ್ಮೀರದ ಬಡ್ಗಾಮ್​ ಜಿಲ್ಲಾ ಅಭಿವೃದ್ಧಿ ಮಂಡಳಿಯ (ಡಿಡಿಸಿ) ಅಧ್ಯಕ್ಷ ಸ್ಥಾನಕ್ಕೆ ಸ್ವತಂತ್ರ ಅಭ್ಯರ್ಥಿಯನ್ನು ನೇಮಕ ಮಾಡಿರುವುದನ್ನು ಖಂಡಿಸಿರುವ ನ್ಯಾಷನಲ್ ಕಾನ್ಫರೆನ್ಸ್​ (ಎನ್​ಸಿ), ಅಧ್ಯಕ್ಷ ಚುನಾವಣೆ ವಿರುದ್ಧ ಕಾನೂನು ಮೊರೆ ಹೋಗುತ್ತೇವೆ ಎಂದು ಶನಿವಾರ ಹೇಳಿದೆ.

  • Talk about murdering democracy in J&K. I met 8 of our DDC members of Budgam district. There is at least 1 more alliance member of Javaid Mustafa Mir’s party so 9 out of a total strength of 14 & yet in an “election” an independent member was made the chairman. pic.twitter.com/u6dwBP902C

    — Omar Abdullah (@OmarAbdullah) February 13, 2021 " class="align-text-top noRightClick twitterSection" data=" ">

ಎನ್‌ಸಿ ಉಪಾಧ್ಯಕ್ಷ ಓಮರ್ ಅಬ್ದುಲ್ಲಾ ಈ ಕುರಿತು ಪ್ರತಿಕ್ರಿಯಿಸಿ, ನಮ್ಮ ಪಕ್ಷದಲ್ಲಿ ಎಂಟು ಸದಸ್ಯರಿದ್ದಾರೆ. ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್ (ಪಿಎಜಿಡಿ) ಭಾಗವಾಗಿರುವ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್‌ಮೆಂಟ್‌ನ ಸದಸ್ಯರ ಬೆಂಬಲವೂ ನಮಗಿದೆ. ಆದರೂ ಡಿಡಿಸಿ ಅಧ್ಯಕ್ಷರನ್ನಾಗಿ ಸ್ವತಂತ್ರ ಅಭ್ಯರ್ಥಿಯನ್ನು ಮಾಡಲಾಗಿದೆ. ಈ ನಿರ್ಧಾರ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು ಎಂದು ಕಿಡಿಕಾರಿದರು.

ಈ ಸುದ್ದಿಯನ್ನೂ ಓದಿ: ವಿಪತ್ತು ಪರಿಹಾರವಾಗಿ 5 ರಾಜ್ಯಗಳಿಗೆ 3,113 ಕೋಟಿ ರೂ. ನೀಡಲು ಶಾ ನೇತೃತ್ವದ ಸಮಿತಿ ಅನುಮೋದನೆ

ಬಡ್ಗಾಮ್ ಜಿಲ್ಲೆಯ ಪಕ್ಷದ 8 ಸದಸ್ಯರನ್ನು ಭೇಟಿಯಾದೆ. ಜಾವೈದ್ ಮುಸ್ತಫಾ ಮೀರ್ ಅವರ ಪಕ್ಷದಲ್ಲಿ ಕನಿಷ್ಠ ಇನ್ನೊಬ್ಬ ಮೈತ್ರಿ ಸದಸ್ಯರಿದ್ದಾರೆ. ಹೀಗಾಗಿ, ಒಟ್ಟು 14 ರಲ್ಲಿ 9 ಸದಸ್ಯರಿದ್ದಾರೆ. ಸಂಪೂರ್ಣ ಬಹುಮತ ನಮಗಿದ್ದರೂ ಸ್ವತಂತ್ರ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಎಷ್ಟು ಸರಿ. ಇದು ಕಾನೂನು ಮತ್ತು ನಿಯಮಗಳ ಸ್ಪಷ್ಟ ಉಲ್ಲಂಘನೆ. ಮುಂದಿನ ವಾರ ನ್ಯಾಯಾಲಯದಲ್ಲಿ ಈ ಪ್ರಜಾಪ್ರಭುತ್ವ ವಿರೋಧಿ ಕ್ರಮವನ್ನು ಪ್ರಶ್ನಿಸುತ್ತೇವೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ ಸ್ವತಂತ್ರ ಅಭ್ಯರ್ಥಿ ನಜೀರ್ ಅಹ್ಮದ್ ಖಾನ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ಎನ್‌ಸಿಯ ನಜೀರ್ ಅಹ್ಮದ್ ಜಹರಾ ಪರಿಷತ್ತಿನ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.