ಬಿಜಾಪುರ : ಜಿಲ್ಲೆಯಲ್ಲಿ ಮತ್ತೆ ನಕ್ಸಲೀಯರು ಅಟ್ಟಹಾಸ ಮುಂದುವರಿದಿದೆ. ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದ ಸುಮಾರು 15ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ನಕ್ಸಲರು. ಇದರಿಂದಾಗಿ ರಸ್ತೆ ನಿರ್ಮಾಣದಲ್ಲಿ ತೊಡಗಿರುವ ಕಂಪನಿಗಳು ಭಾರಿ ನಷ್ಟ ಅನುಭವಿಸಿವೆ.
ಮೂರು ವಾಹನಗಳಿಗೆ ಬೆಂಕಿ : ಚೆರಿಕಂಟಿ ಗ್ರಾಮದ ಬಳಿ ನಕ್ಸಲರು ಮೂರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚುವ ಮುನ್ನ ನಕ್ಸಲೀಯರು ರಸ್ತೆ ನಿರ್ಮಾಣವನ್ನು ನಿಲ್ಲಿಸಲು ಕಾರ್ಮಿಕರು ಮತ್ತು ಚಾಲಕರನ್ನು ಒತ್ತೆಯಾಳಾಗಿ ತೆಗೆದುಕೊಂಡರು. ವಾಹನಗಳಿಗೆ ಬೆಂಕಿ ಹಚ್ಚಿದ ಬಳಿಕ ಚಾಲಕ ಹಾಗೂ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರನ್ನು ಬಿಡುಗಡೆಗೊಳಿಸಿದರು.
ಓದಿ: ರಾಜಧಾನಿಯಲ್ಲಿ ಮತ್ತೆ ಇಳಿಕೆಯತ್ತ ಮುಖಮಾಡಿದ ಕೋವಿಡ್ ಸೋಂಕಿತರ ಸಂಖ್ಯೆ!
ಎಸ್ಪಿ ಮಾಹಿತಿ : ಈ ವಿಷಯವನ್ನು ಖಚಿತಪಡಿಸಿರುವ ಎಸ್ಪಿ ಕಮ್ಲೋಚನ್ ಕಶ್ಯಪ್, ಮಾವೋವಾದಿಗಳು ಒಂದು ಜೆಸಿಬಿ, 1 ಪೊಕ್ಲೇನ್ ಮತ್ತು ಮಿಕ್ಸರ್ ಯಂತ್ರವನ್ನು ಸುಟ್ಟು ಹಾಕಿದ್ದಾರೆ ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಕ್ಸಲೀಯರು ನಿರಂತರವಾಗಿ ಜನರಲ್ಲಿ ಭೀತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಯಾವುದೋ ಕಾರ್ಯಕ್ರಮ ನಡೆಸಿ ತಮ್ಮ ಅಸ್ತಿತ್ವವನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಪೊಲೀಸ್ ಇನ್‌ಫಾರ್ಮರ್ ಎಂಬ ಆರೋಪದ ಮೇಲೆ ಕೆಲವೆಡೆ ಅಮಾಯಕರ ಹತ್ಯೆ ನಡೆಯುತ್ತಿದೆ. ಕೆಲವೆಡೆ ಬ್ಯಾನರ್, ಭಿತ್ತಿಪತ್ರಗಳನ್ನು ಎಸೆದು ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ ಎಂದು ಎಸ್ಪಿ ಹೇಳಿದರು.
ನಕ್ಸಲೀಯರ 2ನೇ ಘಟನೆ : ಜಿಲ್ಲೆಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ 13 ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಈ ವಾಹನಗಳಲ್ಲಿ 9 ಟ್ರ್ಯಾಕ್ಟರ್, 2 ಜೆಸಿಬಿ ಹಾಗೂ ಗ್ರೇಡರ್ ಇದೆ. ಘಟನೆಯ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ನಕ್ಸಲೀಯರು ಇದ್ದರು ಎಂದು ತಿಳಿದು ಬಂದಿದೆ. ಘಟನೆಯ ನಂತರ ಸ್ಥಳದಲ್ಲಿ ಭಾರೀ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ