ETV Bharat / bharat

ಕುಖ್ಯಾತ ನಕ್ಸಲ್ ಶಾನಿಚಾರ್ ಸುರಿನ್ ಎನ್​ಕೌಂಟರ್​ಗೆ ಬಲಿ

ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಕಖ್ಯಾತ ನಕ್ಸಲ್ ಶಾನಿಚಾರ್ ಸುರಿನ್ ಹತ್ಯೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

PLFI militant killed in encounter with security forces in Chaibasa
ಸಾನಿಚಾರ್ ಸುರಿನ್ ಎನ್​ಕೌಂಟರ್
author img

By

Published : Jul 17, 2021, 11:50 AM IST

ಚೈಬಾಸ ( ಜಾರ್ಖಂಡ್ ) : ನಿಷೇಧಿತ ನಕ್ಸಲ್ ಸಂಘಟನೆ ಪೀಪಲ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (PLFI) ದ ಸದಸ್ಯ ಶಾನಿಚಾರ್ ಸುರಿನ್ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ.

ಜಾರ್ಖಂಡ್​ನ ಚೈಬಾಸ ಜಿಲ್ಲೆಯ ಗುಡ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಪಿಡುಂಗ್ ಬಾದಾ ಕೇಸ್ ಅರಣ್ಯದಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಮುಖಾಮುಖಿಯಲ್ಲಿ ಸುರಿನ್ ಹತನಾಗಿದ್ದಾನೆ.

ಪಿಡುಂಗ್ ಬಾದಲ್ ಕೇಸ್ ಅರಣ್ಯದ ರಾನಿಯಾ ಪ್ರದೇಶದಲ್ಲಿ ಪಿಎಲ್​ಎಫ್​ಐ ನಕ್ಸಲರು ಕ್ಯಾಂಪ್ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಮಾಹಿತಿ ಆಧರಿಸಿದ ಪೊಲೀಸರು ಮತ್ತು ಸಿಆರ್​ಪಿಎಫ್​ನ 64 ನೇ ಬೆಟಾಲಿಯನ್ ಜಂಟಿ ಕಾರ್ಯಾಚರಣೆ ನಡೆಸಿದ್ದವು. ಕಾಡಿನಲ್ಲಿ ಶೋಧ ಕಾರ್ಯ ಕೈಗೊಂಡ ಭದ್ರತಾ ಪಡೆಗಳನ್ನು ಕಂಡು ನಕ್ಸಲರು ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿದ್ದರು.

ಈ ವೇಳೆ ಭದ್ರತಾ ಪಡೆಗಳು ಕೂಡ ಪ್ರತಿದಾಳಿ ನಡೆಸಿದ್ದು, ಕಾರ್ಯಾಚರಣೆಯಲ್ಲಿ ಸೈನಿಕರ ಗುಂಡಿಗೆ ಶಾನಿಚಾರ್ ಸುರಿನ್ ಹತನಾಗಿದ್ದಾನೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಸುರಿನ್​ನ ಮೃತದೇಹವನ್ನು ಗುರುತಿಸಲಾಗಿದ್ದು, ಆತ ಹತನಾಗಿರುವುದು ಖಚಿತ ಎಂದು ಅಧಿಕಾರಿಗಳು ಹೇಳಿದ್ದಾರೆ. ಅರಣ್ಯದಲ್ಲಿ ನಕ್ಸಲರ ಬೇಟೆಗೆ​ ಶೋಧ ಕಾರ್ಯ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.