ನಾರಾಯಣಪುರ ( ಛತ್ತೀಸ್‌ಗಢ): ಛತ್ತೀಸ್‌ಗಢದ ಟಾಯ್ಮೆಟಾ ಅರಣ್ಯ ಪ್ರದೇಶದಲ್ಲಿ ನಾರಾಯಣಪುರ ಪೊಲೀಸ್ ಸಿಬ್ಬಂದಿ ನಕ್ಸಲ್ ನಾಯಕನನ್ನು ಹೆಡೆಮುರಿ ಕಟ್ಟಿದ್ದಾರೆ.
ಪಾಂಡು ಪದಾಮಿಯ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಬಂದಿತ್ತು. ಆತ ಬೆಚ, ಹಿತುಲ್ವಾಡ್, ಸವನಾರ್ ಮತ್ತು ತೋಯನಾರ್ ಅರಣ್ಯ ಪ್ರದೇಶದಲ್ಲಿ ಸುತ್ತಾಡಿಕೊಂಡು ಗ್ರಾಮಸ್ಥರನ್ನು ಭೇಟಿಯಾಗಿ ಅವರನ್ನು ನಕ್ಸಲರನ್ನಾಗಿ ಮಾಡುತ್ತಿದ್ದ ಎನ್ನಲಾಗ್ತಿದೆ. ಸುಳಿವಿನ ಮೇರೆಗೆ ಎಸ್‌ಪಿ ಗಿರ್ಜಾಶಂಕರ್ ಜೈಸ್ವಾಲ್ ಅವರು ಡಿಆರ್‌ಜಿ (ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್) ತಂಡವನ್ನು ನಿಯೋಜಿಸಿ, ಪೊಲೀಸರೊಂದಿಗೆ ಕಾರ್ಯಾಚರಣೆ ಕೈಗೊಂಡು ಪದಾಮಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಅರುಣಾಚಲದಿಂದ ಕಾಣೆಯಾಗಿದ್ದ ಬಾಲಕ ಪತ್ತೆ: ರಕ್ಷಣಾ ಸಚಿವಾಲಯದ ಪಿಆರ್ಒ
ಪಾಂಡು ಪದಾಮಿ ಏಳು ಮಂದಿ ಸೈನಿಕರ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ ಮತ್ತು ಬಸ್ ಸ್ಫೋಟ ಪ್ರಕರಣವೊಂದರಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾನೆ. ಕರಿಯಮೇಟಾದಲ್ಲಿ ಅಸಿಸ್ಟೆಂಟ್ ಕಮಾಂಡರ್ ಹವಿಲ್ದಾರ್ ಅವರ ಕೊಲೆಯಲ್ಲಿ ಕೂಡ ಭಾಗಿಯಾಗಿದ್ದನೆಂದು ತಿಳಿದುಬಂದಿದೆ.
ಜಾಹೀರಾತು- ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ