ಮುಂಬೈ, ಮಹಾರಾಷ್ಟ್ರ: ಸಚಿವ ನವಾಬ್ ಮಲಿಕ್ ಮಾನಸಿಕ ಅಸ್ವಸ್ಥರಾಗಿದ್ದು, ತಪಾಸಣೆ ಮಾಡಿಸುವ ಅಗತ್ಯವಿದೆ ಎಂದು ಮುಂಬೈ ವಲಯದ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಸಹೋದರಿ ಯಾಸ್ಮಿನ್ ವಾಂಖೆಡೆ ವ್ಯಂಗ್ಯವಾಡಿದ್ದಾರೆ.
ಸಮೀರ್ ವಾಂಖೆಡೆ ಖಾಸಗಿ ತಂಡವನ್ನು ಸೃಷ್ಟಿಸಿಕೊಂಡು, ವಂಚನೆ ಮಾಡುತ್ತಿದ್ದಾರೆ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಗಂಭೀರ ಆರೋಪ ಮಾಡಿದ್ದರು. ಇದಷ್ಟು ಮಾತ್ರವಲ್ಲದೇ ಸಮೀರ್ ವಾಂಖೆಡೆ ಧರಿಸುವ ಶರ್ಟ್ 70 ಸಾವಿರ ರೂಪಾಯಿ, ವಾಚ್ 50 ಲಕ್ಷ ರೂಪಾಯಿ ಎಂದು ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಮೀರ್ ಸಹೋದರ ಯಾಸ್ಮಿನ್ ಅವರು, ನವಾಬ್ ಮಲಿಕ್ ವಿರುದ್ಧ ಹರಿಹಾಯ್ದಿದ್ದಾರೆ. ಮಲಿಕ್ ಮಾಡಿರುವ ಆರೋಪಗಳು ನಮ್ಮ ಕಿವಿಗೆ ಬಿದ್ದಿವೆ. ನಾವು ನಮ್ಮ ತಾಯಿಯಿಂದ ಉಡುಗೊರೆಗಳನ್ನು ಪಡೆದಿದ್ದೇವೆ. ಕೈಗಡಿಯಾರವನ್ನು ತಾಯಿ ನೀಡಿದ ಗಿಫ್ಟ್ ಎಂದಿದ್ದಾರೆ.
ನನ್ನ ಸಹೋದರ ಸಮೀರ್ ವರ್ಷವಿಡೀ ಶಾಪಿಂಗ್‌ಗೆ ಹೋಗಬೇಕಾದ ಹಣವನ್ನು ಸಂಗ್ರಹಿಸಿ, ಒಂದೇ ಬಾರಿ ಶಾಪಿಂಗ್‌ಗೆ ತೆರಳುತ್ತಾರೆ ಎಂದು ಯಾಸ್ಮಿನ್ ಸ್ಪಷ್ಟನೆ ನೀಡಿದ್ದಾರೆ.
ಇದರ ಜೊತೆಗೆ ಮಲಿಕ್ ಅವರ ಅಳಿಯನನ್ನು ಟಾರ್ಗೆಟ್ ಮಾಡಿರುವ ಅವರು, 'ಮಲಿಕ್ ಅವರ ಅಳಿಯ ಮೂರ್ನಾಲ್ಕುಕೋಟಿ ಮೌಲ್ಯದ ಕಾರುಗಳ ಮುಂದೆ ಫೋಟೋ ತೆಗೆಸಿಕೊಳ್ಳುತ್ತಾರೆ. ಅವರಿಗೆ ಅಷ್ಟು ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದ ಹಾನ್ಲಿಯಲ್ಲಿ 4.3 ತೀವ್ರತೆಯ ಲಘು ಭೂಕಂಪನ