ETV Bharat / bharat

ನವನೀತ್ ಕಲ್ರಾಗೆ ಕಾಂಗ್ರೆಸ್​ನೊಂದಿಗೆ ನಿಕಟ ಸಂಬಂಧವಿದೆ : ಬಿಜೆಪಿ

author img

By

Published : May 15, 2021, 7:19 PM IST

ದೆಹಲಿಯಲ್ಲಿ ಕೃತಕ ಆಮ್ಲಜನಕರ ಕೊರತೆ ಸೃಷ್ಟಿಸಲು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್​ ಪಕ್ಷದ ಸ್ನೇಹಿತರು ಭಾರಿ ಶ್ರಮ ಪಟ್ಟಿದ್ದಾರೆ. ಇಂಥ ಸಂದಿಗ್ಧ ಪರಿಸ್ಥಿತಿಯನ್ನು ಅವರು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದ್ದಾರೆ..

ಬಿಜೆಪಿ
ಬಿಜೆಪಿ

ನವದೆಹಲಿ : ಆಕ್ಸಿಜನ್ ಕಾನ್ಸಂಟ್ರೇಟರ್​ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪ ಹೊತ್ತಿರುವ ಉದ್ಯಮಿ ನವನೀತ್ ಕಲ್ರಾಗೆ ಕಾಂಗ್ರೆಸ್​ನೊಂದಿಗೆ ನಿಕಟ ಸಂಬಂಧವಿದೆ ಎಂದು ಬಿಜೆಪಿ ಆರೋಪಿಸಿದೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಲೋಕಸಭಾ ಸದಸ್ಯೆ ಮೀನಾಕ್ಷಿ ಲೇಖಿ, ಕಾಳಸಂತೆ ನಡೆಸುವವರು ಹಾಗೂ ಉದ್ಯಮಿಗಳ ಜತೆ ಕಾಂಗ್ರೆಸ್​ ಸಂಬಂಧವಿದೆ. ದೆಹಲಿಯಲ್ಲಿ ಕೃತಕ ಆಮ್ಲಜನಕರ ಕೊರತೆ ಸೃಷ್ಟಿಸಲು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್​ ಪಕ್ಷದ ಸ್ನೇಹಿತರು ಭಾರಿ ಶ್ರಮ ಪಟ್ಟಿದ್ದಾರೆ. ಇಂಥ ಸಂದಿಗ್ಧ ಪರಿಸ್ಥಿತಿಯನ್ನು ಅವರು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

ಕಲ್ರಾ ಫೇಸ್​ಬುಕ್​​​ ಟೈಮ್​ಲೈನ್ ನೋಡಿದ್ರೆ ನಿಮಗೆ ತಿಳಿಯುತ್ತೆ, ಅವರು ಕೋವಿಡ್ ನಿಯಂತ್ರಣ ಸಲುವಾಗಿ ಪ್ರಧಾನಿಯವರನ್ನು ದೂಷಿಸಿದ್ದರು. ರಾಹುಲ್ ಗಾಂಧಿ ಮತ್ತು ಸೋನಿಯಾಗಾಂಧಿ ಅವರೊಂದಿಗೆ ರೆಸ್ಟೋರೆಂಟ್​​ನ ಬಾಣಸಿಗರು ಫೋಟೋ ತೆಗೆಸಿಕೊಂಡಿದ್ದಾರೆ.

ಅಜಯ್ ಮಾಕೆನ್ ನಗರಾಭಿವೃದ್ಧಿ ಸಚಿವರಾಗಿದ್ದಾಗ ಕಲ್ರಾ ಅವರಿಗೆ ದೆಹಲಿ ಗಾಲ್ಫ್ ಕ್ಲಬ್ ಸದಸ್ಯತ್ವ ನೀಡಲಾಯಿತು ಎಂದು ಲೇಖಿ ಆರೋಪಿಸಿದ್ದಾರೆ. ದೆಹಲಿ ಗಾಲ್ಫ್ ಕ್ಲಬ್‌ಗೆ ಇಬ್ಬರನ್ನು ನಾಮನಿರ್ದೇಶನ ಮಾಡುವ ಅಧಿಕಾರವನ್ನು ಮಾಕೆನ್ ಹೊಂದಿದ್ದರು.

ಅವರು ಮೊದಲು 2004-05ರಲ್ಲಿ ರಾಬರ್ಟ್ ವಾದ್ರಾ ಅವರನ್ನು ನಾಮನಿರ್ದೇಶನ ಮಾಡಿದರು ಮತ್ತು ಅದರ ಮುಂದಿನ ವರ್ಷ ನವೀನ್ ಕಲ್ರಾ ಅವರನ್ನು ನಾಮನಿರ್ದೇಶನ ಮಾಡಿದ್ದರು. ಇದರಿಂದಲೇ ತಿಳಿಯುತ್ತೆ ಅವರ ಬೆನ್ನ ಹಿಂದೆ ಯಾರಿದ್ದಾರೆಂದು ಕಾಂಗ್ರೆಸ್​ ವಿರುದ್ಧ ಲೇಖಿ ನೇರವಾಗಿ ಆಪಾದಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.