ETV Bharat / bharat

ಪತ್ರಕರ್ತ ಕಶ್ಯಪ್ ನಿವಾಸದಲ್ಲಿ ನವಜೋತ್ ಸಿಂಗ್ ಸಿಧು ಉಪವಾಸ ಸತ್ಯಾಗ್ರಹ

ನವಜೋತ್ ಸಿಂಗ್ ಸಿಧು ಇಂದು ಲಖಿಂಪುರ್ ಖೇರಿಯಲ್ಲಿರುವ ಮೃತ ಪತ್ರಕರ್ತ ರಾಮನ್ ಕಶ್ಯಪ್ ಅವರ ನಿವಾಸದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

Navjot Singh Sidhu
Navjot Singh Sidhu
author img

By

Published : Oct 8, 2021, 10:01 PM IST

Updated : Oct 8, 2021, 10:10 PM IST

ಲಖಿಂಪುರ್ (ಉತ್ತರಪ್ರದೇಶ): ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಇಂದು ಲಖಿಂಪುರ್ ಖೇರಿಯಲ್ಲಿರುವ ಮೃತ ಪತ್ರಕರ್ತ ರಾಮನ್ ಕಶ್ಯಪ್ ಅವರ ನಿವಾಸದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಲಖಿಂಪುರ್ ಖೇರಿಯಲ್ಲಿ ನಡೆದ ರೈತರ ಪ್ರತಿಭಟನೆಯನ್ನು ವರದಿ ಮಾಡುವಾಗ ಪತ್ರಕರ್ತ ರಾಮನ್​​ ತಮ್ಮ ಜೀವವನ್ನು ಕಳೆದುಕೊಂಡಿದ್ದರು.

ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರೆಸುವುದಾಗಿ ಸಿಧು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ನ್ಯಾಯದಾನ ವಿಳಂಬ- ನ್ಯಾಯ ನಿರಾಕರಿಸಲಾಗಿದೆ. ಕೆಚ್ಚೆದೆಯ ಕುಟುಂಬದ ಲವ್​ ಪ್ರೀತ್ ಸಿಂಗ್​​ (20), ಕೇಂದ್ರ ಸಚಿವರ ಮಗನ ಕ್ರೂರತ್ವಕ್ಕೆ ಬಲಿಯಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಗುರುವಾರ ಲಖಿಂಪುರ್ ಖೇರಿಗೆ ಮೆರವಣಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ನವಜೋತ್ ಸಿಂಗ್ ಸಿಧು ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ಲಖಿಂಪುರ್ ಖೇರಿ ಹಿಂಸಾಚಾರ ಕೇಸ್.. ಉತ್ತರಪ್ರದೇಶ ಸರ್ಕಾರಕ್ಕೆ ತರಾಟೆ ತೆಗೆದುಕೊಂಡ ಸುಪ್ರೀಂ

ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಕಾರೊಂದು ಪ್ರತಿಭಟನಾಕಾರರತ್ತ ನುಗ್ಗಿದೆ. ಈ ಸಮಯದಲ್ಲಿ ನಾಲ್ವರು ರೈತರು ಮೃತಪಟ್ಟಿದ್ದರು. ಪ್ರತಿಭಟನಾಕಾರರು ಇಬ್ಬರು ಬಿಜೆಪಿ ಕಾರ್ಯಕರ್ತರು ಹಾಗೂ ಕಾರು ಚಾಲಕನನ್ನು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಓರ್ವ ಪತ್ರಕರ್ತನು ಸಾವನ್ನಪ್ಪಿದ್ದ.

Last Updated : Oct 8, 2021, 10:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.