ಪಟಿಯಾಲ: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಜೈಲಿನಲ್ಲಿ ಮೌನ ಉಪವಾಸ ವ್ರತ ಆರಂಭಿಸಿದ್ದಾರೆ. ಲಭ್ಯ ಮಾಹಿತಿಯ ಪ್ರಕಾರ ನವರಾತ್ರಿ ಹಬ್ಬದ ಅಂಗವಾಗಿ ಅವರು ಮೌನ ವ್ರತ ಕೈಗೊಂಡಿದ್ದಾರೆ. ಅದನ್ನು ಅವರು ದಸರಾ ದಿನದಂದು ಮುರಿಯುತ್ತಾರೆ. ಪ್ರಸ್ತುತ ನವಜೋತ್ ಸಿಂಗ್ ಸಿಧು ಪಟಿಯಾಲಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು 34 ವರ್ಷಗಳ ಹಿಂದಿನ ಹಲ್ಲೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ನಂತರ ಕಳೆದ ಹಲವು ತಿಂಗಳುಗಳಿಂದ ಜೈಲಿನಲ್ಲಿದ್ದಾರೆ.
ಪಟಿಯಾಲ ಜೈಲಿನಲ್ಲಿರುವ ಸಿಧು: 34 ವರ್ಷಗಳ ಹಿಂದಿನ ರೋಡ್ರಿಗಸ್ ಪ್ರಕರಣದಲ್ಲಿ ನವಜೋತ್ ಸಿಂಗ್ ಸಿಧುಗೆ ಸುಪ್ರೀಂಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷೆಯ ನಂತರ ಅವರು ಪಟಿಯಾಲ ನ್ಯಾಯಾಲಯಕ್ಕೆ ಶರಣಾಗಿದ್ದರು. ಅಂದಿನಿಂದ ಅವರನ್ನು ಪಟಿಯಾಲ ಜೈಲಿನಲ್ಲಿ ಇರಿಸಲಾಗಿದೆ.
ರೋಡ್ ರೇಜ್ ಪ್ರಕರಣದಲ್ಲಿ ಓರ್ವ ವ್ಯಕ್ತಿ ಸಾವು: ರಸ್ತೆಯಲ್ಲಿ ನಡೆದ ಜಗಳದಲ್ಲಿ ನಡೆದ ಗುಂಡಿನ ಪ್ರಕರಣದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ನವಜೋತ್ ಸಿಧು ಅವರು ಪಟಿಯಾಲಾದಲ್ಲಿ ಪಾರ್ಕಿಂಗ್ ಜಾಗದ ವಿಚಾರದಲ್ಲಿ ವ್ಯಕ್ತಿಯೊಬ್ಬನೊಂದಿಗೆ ಜಗಳವಾಡಿದ್ದರು. ಈ ಸಂದರ್ಭದಲ್ಲಿ ಸಿಧು ಅವರೊಂದಿಗೆ ಇನ್ನೊಬ್ಬ ಸ್ನೇಹಿತ ಹಾಜರಿದ್ದ. ಆ ಸಂದರ್ಭದಲ್ಲಿ ಇಬ್ಬರಿಗೂ ಸೇರಿ ವ್ಯಕ್ತಿಗೆ ಥಳಿಸಿದಾಗ ಆತ ಮೃತಪಟ್ಟಿದ್ದ. ಈ ಪ್ರಕರಣದಲ್ಲಿ 2006ರಲ್ಲಿ ಸಿಧು ದೋಷಿ ಎಂದು ಹೈಕೋರ್ಟ್ ತೀರ್ಪು ನೀಡಿತ್ತು.
ಇದನ್ನೂ ಓದಿ: 'ನೀವು ಏನನ್ನು ಬಿತ್ತಿದ್ದೀರೋ ಅದನ್ನೇ ಪಡೆಯುವಿರಿ': ಪಂಜಾಬ್ ಸೋಲಿನ ಬಗ್ಗೆ ಸಿಧು ಪ್ರತಿಕ್ರಿಯೆ!