ETV Bharat / bharat

ಅರೂಸಾ ಆಲಂ ವಿಚಾರ : ಕ್ಯಾ.ಅಮರೀಂದರ್ ಸಿಂಗ್​ ವಿರುದ್ಧ ನವಜೋತ್ ಕೌರ್ ಸಿಧು ಕಿಡಿ - ಅಮರೀಂದರ್ ಸಿಂಗ್​ ವಿರುದ್ಧ ನವಜೋತ್ ಕೌರ್ ಸಿಧು ಆರೋಪ

ಪಂಜಾಬ್​ ಮಾಜಿ ಸಿಎಂ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ತಮ್ಮ ಪಾಕ್​ ಮೂಲದ ಗೆಳತಿ ಅರೂಸಾ ಆಲಂ ಕೇಳದೇ ರಾಜ್ಯದಲ್ಲಿ ಯಾವುದೇ ಸಚಿವರನ್ನು ನೇಮಿಸಿಲ್ಲ ಎಂದು ನವಜೋತ್​ ಸಿಂಗ್​ ಸಿಧು ಪತ್ನಿ ಹಾಗೂ ಕಾಂಗ್ರೆಸ್ ನಾಯಕಿ ನವಜೋತ್ ಕೌರ್ ಸಿಧು ಆರೋಪಿಸಿದ್ದಾರೆ..

alam
ಕ್ಯಾ.ಅಮರೀಂದರ್ ಸಿಂಗ್​ ವಿರುದ್ಧ ನವಜೋತ್ ಕೌರ್ ಸಿಧು ಕಿಡಿ
author img

By

Published : Oct 23, 2021, 9:09 PM IST

ಅಮೃತಸರ : ಕಾಂಗ್ರೆಸ್ ನಾಯಕಿ ನವಜೋತ್ ಕೌರ್ ಸಿಧು ಅರೂಸಾ ಆಲಂ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಆಲಂ ಅವರನ್ನು ಸಂಪರ್ಕಿಸದೆ ರಾಜ್ಯದಲ್ಲಿ ಯಾವುದೇ ಸಚಿವರನ್ನು ನೇಮಿಸಲಾಗಿಲ್ಲ ಮತ್ತು ಆಕೆಯ ಒಪ್ಪಿಗೆಯಿಲ್ಲದೆ ಎಸ್‌ಹೆಚ್‌ಒಗಳು ಅಥವಾ ಎಸ್‌ಎಸ್‌ಪಿಗಳು ಕೂಡ ಕಾಣಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

'ಅರೂಸಾ ಆಲಂ ಇಲ್ಲದೆ ಯಾವುದೇ ಕೆಲಸ ನಡೆಯಲಿಲ್ಲ'

ಅರೂಸಾ ಆಲಂ ಅವರ ಮಗ ದುಬೈಗೆ ಹಣ ತುಂಬಿದ ಬ್ರೀಫ್‌ಕೇಸ್‌ಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ನವಜೋತ್ ಕೌರ್​ ​ಸಿಧು ಹೇಳಿದ್ದಾರೆ. ಅಮರೀಂದರ್​ ಅವರು ತಮ್ಮ ಜೀವನದ ಉಳಿದ ಸಮಯವನ್ನು ಅರೂಸಾ ಆಲಂನೊಂದಿಗೆ ಕಳೆಯುವುದನ್ನು ಆನಂದಿಸಬೇಕು ಎಂದಿದ್ದಾರೆ.

'ಅರೂಸಾ ಆಲಂಗೆ ಉಡುಗೊರೆಗಳನ್ನು ನೀಡಲಾಯಿತು'

ಅರೂಸಾಳನ್ನು ಭೇಟಿಯಾಗುತ್ತಿದ್ದ ಎಲ್ಲಾ ಅಕಾಲಿಗಳು ಆಕೆಗಾಗಿ ವಜ್ರದ ಸೆಟ್ ಅನ್ನು ತರುತ್ತಿದ್ದರು ಎಂದು ಕೌರ್​ ಸಿಧು ಹೇಳಿದ್ದಾರೆ. ಆಲಂ ಪಂಜಾಬಿನಿಂದ ಬಂದ ಹಣದೊಂದಿಗೆ ದುಬೈಗೆ ಪಲಾಯನ ಮಾಡಿದ್ದಾರೆ ಎಂದು ನವಜೋತ್ ಕೌರ್ ಸಿಧು ಹೇಳಿದ್ದಾರೆ.

'ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಹೊಸ ಪಕ್ಷದ ಬಗ್ಗೆ ಮಾತನಾಡುತ್ತಾ, ನಾವು ಕ್ಯಾಪ್ಟನ್ ಪಕ್ಷದ ಬಗ್ಗೆ ಕಾಳಜಿ ವಹಿಸುವುದಿಲ್ಲ," ಅವರ ಪಕ್ಷ ಯಾವುದೇ ಪರಿಣಾಮ ಬೀರುವುದಿಲ್ಲ" ಎಂದು ಹೇಳಿದರು. ಕ್ಯಾಪ್ಟನ್ ಆಳ್ವಿಕೆಯಲ್ಲಿ, ನವಜೋತ್ ಸಿಂಗ್ ಸಿಧು ಅವರ ಕ್ಷೇತ್ರವನ್ನು ಕಡೆಗಣಿಸಲಾಗಿದೆ. ಆದರೆ, ಈಗ ಅವರು ಅದನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಪಡಿಸುತ್ತಾರೆ ಎಂದರು. ನವಜೋತ್ ಸಿಂಗ್ ಸಿಧು ಪೂರ್ವ ಅಮೃತಸರದಿಂದ ಸ್ಪರ್ಧಿಸಲಿದ್ದಾರೆ ಎಂದು ಕೌರ್ ಇದೇ ವೇಳೆ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.