ETV Bharat / bharat

ಪುರಿ ಅಭಿವೃದ್ಧಿಗಾಗಿ ತಂದೆಯ ಸ್ಮಾರಕವನ್ನೇ ಕೆಡವಲು ಆದೇಶಿಸಿದ್ದ ನವೀನ್ ಪಟ್ನಾಯಕ್​! - ನವೀನ್​ ಪಟ್ನಾಯಕ್

ಪುರಿಯ ಸ್ವರ್ಗದ್ವಾರ ಪ್ರದೇಶದಲ್ಲಿದ್ದ ಮಾಜಿ ಸಿಎಂ ಬಿಜು ಪಟ್ನಾಯಕ್​ ಅವರ ಸ್ಮಾರಕವನ್ನು ಕೆಡವಲು ಒಡಿಶಾ ಸಿಎಂ ನವೀನ್​ ಪಟ್ನಾಯಕ್ ಆದೇಶ ಕೊಟ್ಟಿದ್ದರು ಎಂದು ಖಾಸಗಿ ಕಾರ್ಯದರ್ಶಿ ವಿ.ಕೆ.ಪಾಂಡಿಯನ್ ಹೇಳಿದ್ದಾರೆ.

naveen-patnaik-dismantled-fathers-memorial-for-developing-puri
ಪುರಿ ಅಭಿವೃದ್ಧಿಗಾಗಿ ತಂದೆಯ ಸ್ಮಾರಕ ಕೆಡವಲು ಆದೇಶಿಸಿದ್ದ ನವೀನ್ ಪಟ್ನಾಯಕ್​
author img

By

Published : May 18, 2023, 2:05 PM IST

ಭುವನೇಶ್ವರ್ (ಒಡಿಶಾ): ಒಡಿಶಾದ ಪ್ರಸಿದ್ಧ ಯಾತ್ರಿಕರ ನಗರಿ ಪುರಿಯ ಅಭಿವೃದ್ಧಿ ಮತ್ತು ಸುಂದರೀಕರಣದ ಉದ್ದೇಶಕ್ಕಾಗಿ ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ಅವರು 2019ರಲ್ಲಿ ತಮ್ಮ ತಂದೆ, ಮಾಜಿ ಸಿಎಂ ಬಿಜು ಪಟ್ನಾಯಕ್​ ಅವರ ಸಮಾಧಿಯನ್ನೇ ಕಿತ್ತು ಹಾಕಲು ಆದೇಶಿಸಿದ್ದರು ಎಂದು ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

1997ರ ಏಪ್ರಿಲ್​ 17ರಂದು ಬಿಜು ಪಟ್ನಾಯಕ್ ನಿಧನದ ನಂತರ ಪುರಿಯ ಸ್ವರ್ಗದ್ವಾರ ಪ್ರದೇಶದಲ್ಲಿ ಸ್ಥಳೀಯ ಆಡಳಿತ ಸಂಸ್ಥೆಯು ಸ್ಮಾರಕವನ್ನು ನಿರ್ಮಿಸಿತ್ತು. ಆದರೆ, ಸಾಕಷ್ಟು ಸ್ಥಳವನ್ನು ತೆಗೆದುಕೊಂಡಿತ್ತು. ಇದರಿಂದ ಅಭಿವೃದ್ಧಿ ಕಾರ್ಯ ಮತ್ತು ಸುಂದರೀಕರಣಕ್ಕೆ ಸಮಸ್ಯೆ ಉಂಟಾಗಿತ್ತು. ಅದರ ನಕ್ಷೆಯನ್ನು ತೋರಿಸಲಾಗಿತ್ತು. ಇದನ್ನು ಮನಗಂಡ ನವೀನ್​ ಪಟ್ನಾಯಕ್​ ತಮ್ಮ ತಂದೆಯ ಸಮಾಧಿಯನ್ನು ಕೆಡವಲು ಆದೇಶಿಸಿದ್ದರು. ಅಲ್ಲದೇ, ಪಟ್ನಾಯಕ್​ ಕುಟುಂಬ ಇತರ ಸದಸ್ಯರು ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು ಎಂದು ಅಧಿಕಾರಿ ವಿ.ಕೆ.ಪಾಂಡಿಯನ್ ಮಾಹಿತಿ ನೀಡಿದ್ದಾರೆ.

ಕಳೆದ 13 ವರ್ಷಗಳಿಂದ ಸಿಎಂ ಪಟ್ನಾಯಕ್​ ಅವರೊಂದಿಗೆ ಪಾಂಡಿಯನ್ ಒಡನಾಟ ಹೊಂದಿದ್ದು, ಅವರ ಖಾಸಗಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಗಳವಾರ ದುಬೈನಲ್ಲಿ ನಡೆದ ಒಡಿಯಾ ಡಯಾಸ್ಪೊರಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಈ ವಿಷಯವನ್ನು ಪಾಂಡಿಯನ್ ಹಂಚಿಕೊಂಡಿದ್ದಾರೆ. ಸ್ಮಾರಕ ಕೆಡವಲು ಆದೇಶಿಸಿದ ಸಂದರ್ಭದಲ್ಲಿ, ''ತಮ್ಮ ತಂದೆ ಜನರ ಹೃದಯದಲ್ಲಿ ನೆಲೆಸಿದ್ದಾರೆಯೇ ಹೊರತು, ಕಲ್ಲಿನಲ್ಲಿ ಅಲ್ಲ ಎಂದು ಸಿಎಂ ಹೇಳಿದ್ದರು. ಅಲ್ಲದೇ, ಸಾರ್ವಜನಿಕರ ಸಿಟ್ಟು ತಪ್ಪಿಸಲು ಬೆಳಿಗ್ಗೆಯೇ ಸ್ಮಾರಕವನ್ನು ಕೆಡವಲು ಆದೇಶಿಸಿದ್ದರು. ಸದ್ಯ ಸ್ವರ್ಗದ್ವಾರದಲ್ಲಿ ಸ್ಮಾರಕದ ಬದಲು ಬಿಜು ಬಾಬು ಅವರ ಹೆಸರಿನ ಫಲಕ ಮಾತ್ರವಿದೆ'' ಎಂದು ಪಾಂಡಿಯನ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೇಂದ್ರದ ಮಾಜಿ ಸಚಿವ ರತನ್ ಲಾಲ್ ಕಟಾರಿಯಾ (72) ನಿಧನ

ಪುರಿ ಹಿಂದೂಗಳ ಪವಿತ್ರ ಯಾತ್ರಾ ಸ್ಥಳವಾಗಿದ್ದು, ಅನೇಕರು ಸ್ವರ್ಗದ್ವಾರ ಪ್ರದೇಶದಲ್ಲಿ ತಮ್ಮ ಹತ್ತಿರದ ಮತ್ತು ಆತ್ಮೀಯರನ್ನು ಶವಗಳನ್ನು ದಹನ ಮಾಡಲು ಬಯಸುತ್ತಾರೆ. ಇಲ್ಲಿ ದಹನ ಮಾಡಿದರೆ ಮೋಕ್ಷ ಸಿಗುತ್ತದೆ ಎಂಬುದು ನಂಬಿಕೆ. ಫಾನಿ ಚಂಡಮಾರುತದಿಂದ ಸ್ವರ್ಗದ್ವಾರ ಹಾನಿಯಾಗಿತ್ತು. ಅಭಿವೃದ್ಧಿ ಹಾಗೂ ಸುಂದರೀಕರಣಕ್ಕೆ ಒಡಿಶಾ ಸರ್ಕಾರ ವಿಶೇಷ ಯೋಜನೆಯನ್ನು ಕೈಗೊಂಡಿತ್ತು.

ಬಿಜು ಪಟ್ನಾಯಕ್​ ಸಹ ರಾಷ್ಟ್ರ ಮತ್ತು ಒಡಿಶಾದ ರಾಜಕಾರಣದಲ್ಲಿ ದೊಡ್ಡ ಹೆಸರು ಹೊಂದಿದ್ದರು. ಸುದೀರ್ಘ ರಾಜಕಾರಣದಲ್ಲಿದ್ದ ಅವರು 70-80ರ ದಶಕದಲ್ಲಿ ಲೋಕಸಭೆ ಸಂಸದರು ಹಾಗೂ ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ, 1990ರಿಂದ ಐದು ವರ್ಷಗಳ ಕಾಲ ಒಡಿಶಾ ಮುಖ್ಯಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ತಂದೆಯಂತೆಯೇ ನವೀನ್​ ಪಟ್ನಾಯಕ್​ ಸಹ ರಾಜಕಾರಣದಲ್ಲಿ ತಮ್ಮದೇ ಆದ ಹೆಸರು ಮತ್ತು ವರ್ಚಸ್ಸು ಹೊಂದಿದ್ದಾರೆ. ದೇಶದಲ್ಲೇ ಅತಿ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ರಾಜಕಾರಣಿಯಲ್ಲೊಬ್ಬರಾದ ನವೀನ್​ ಪಟ್ನಾಯಕ್​ 2000ರಿಂದಲೂ ಒಡಿಶಾ ಸಿಎಂ ಹುದ್ದೆಯಲ್ಲಿ ಮುಂದುವರೆದಿದ್ದಾರೆ.

ಇದನ್ನೂ ಓದಿ: ಕಂಬಳ, ಜಲ್ಲಿಕಟ್ಟು, ಎತ್ತಿನ ಬಂಡಿ ಓಟಕ್ಕೆ ಸುಪ್ರಿಂ ಕೋರ್ಟ್‌ ಸಾಂವಿಧಾನಿಕ ರಕ್ಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.