ETV Bharat / bharat

ದೇಶದ ಅತಿ ಕಿರಿಯ ಮೇಯರ್ ಜೊತೆ ಅತಿ ಕಿರಿಯ ಶಾಸಕನ ಮದುವೆ... - ದೇಶದ ಅತ್ಯಂತ ಕಿರಿಯ ಮೇಯರ್ ಆರ್ಯ ರಾಜೇಂದ್ರನ್

ದೇಶದ ಅತಿ ಕಿರಿಯ ಮೇಯರ್​ ತಿರುವನಂತಪುರದ ಆರ್ಯಾ ರಾಜೇಂದ್ರನ್ ಹಾಗೂ ಬಲುಸ್ಸೆರಿ ಕ್ಷೇತ್ರದ ಶಾಸಕ ಕೆ.ಎಂ. ಸಚಿನ್​ ವಿವಾಹ ಮಾಡಿಕೊಳ್ಳಲಿದ್ದಾರೆ. ಈ ಕುರಿತಂತೆ ಸಚಿನ್​ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ರಾಜ್ಯದ ಅತಿ ಕಿರಿಯ ಶಾಸಕನನ್ನು ವರಿಸಲಿರುವ ದೇಶದ ಅತಿ ಕಿರಿಯ ಮೇಯರ್

author img

By

Published : Feb 16, 2022, 3:37 PM IST

Updated : Feb 17, 2022, 1:55 PM IST

ತಿರುವನಂತಪುರಂ (ಕೇರಳ): ದೇಶದ ಅತ್ಯಂತ ಕಿರಿಯ ಮೇಯರ್ ಖ್ಯಾತಿಯ ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ಅವರು ಕೇರಳ ವಿಧಾನಸಭೆಯ ಅತ್ಯಂತ ಕಿರಿಯ ಶಾಸಕ ಸಚಿನ್ ದೇವ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಬಾಲುಸ್ಸೆರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಆರ್ಯ ರಾಜೇಂದ್ರನ್ ಮತ್ತು ಸಚಿನ್ ದೇವ್ ಬಾಲ್ಯದಿಂದಲೂ ಎಸ್‌ಎಫ್‌ಐನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಆಗಿನಿಂದಲೂ ಇವರಿಬ್ಬರು ಸ್ನೇಹಿತರಾಗಿದ್ದರು. ಹೀಗಾಗಿ ಇವರ ಮದುವೆಗೆ ಕುಟುಂಬಗಳು ಒಪ್ಪಿಗೆ ಸೂಚಿಸಿದ್ದು, ಒಂದು ತಿಂಗಳ ನಂತರ ವಿವಾಹ ನೆರವೇರಿಸಲು ಕುಟುಂಬಗಳು ನಿರ್ಧರಿಸಿವೆ ಎಂದು ತಿಳಿದು ಬಂದಿದೆ.

ರಾಜ್ಯದ ಅತಿ ಕಿರಿಯ ಶಾಸಕನನ್ನು ವರಿಸಲಿರುವ ದೇಶದ ಅತಿ ಕಿರಿಯ ಮೇಯರ್!

ಎಸ್​ಎಫ್​ಐ ಸಂಘಟನೆಯ ಅಖಿಲ ಭಾರತೀಯ ಜಂಟಿ ಕಾರ್ಯದರ್ಶಿಯಾಗಿರುವ ಶಾಸಕ ಸಚಿನ್​ ದೇವ್ ಕೊಯಿಕ್ಕೋಡ್​ನ ನೆಲ್ಲಿಕೋಡ್​ ಮೂಲದವರು. ಎಸ್​ಎಫ್​ಐನ ರಾಜ್ಯ ಕಾರ್ಯದರ್ಶಿ ಆಗಿದ್ದ ಸಮಯದಲ್ಲಿ ಬಲುಸ್ಸೆರಿ ವಿಧಾನಸಭೆ ಚುನಾವಣೆಯಿಂದ ಸ್ಪರ್ಧಿಸಿದ್ದರು. ಸಚಿನ್​ ಅವರು ಕೊಯಿಕ್ಕೂಡ್​ ಸರ್ಕಾರಿ ಕಲಾ ಕಾಲೇಜಿನಲ್ಲಿ ಇಂಗ್ಲಿಷ್​ ಸಾಹಿತ್ಯದಲ್ಲಿ ಪದವಿ ಶಿಕ್ಷಣ ಮತ್ತು ಕೊಯಿಕ್ಕೋಡ್​ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದಿದ್ದಾರೆ.

ಆರ್ಯಾ ರಾಜೇಂದ್ರನ್​ ಅವರು 21ನೇ ವಯಸ್ಸಿನಲ್ಲೇ ತಿರುವನಂತಪುರದ ಆಲ್ ಸೇಂಟ್ಸ್ ಕಾಲೇಜಿನ ವಿದ್ಯಾರ್ಥಿ ಆಗಿರುವಾಗಲೇ ತಿರುವನಂತಪುರದ ಮೇಯರ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಇಬ್ಬರ ಮದುವೆ ಫಿಕ್ಸ್​ ಆಗಿದ್ದು, ವಿನೂತನ ಮದುವೆಗೆ ಕೇರಳ ರಾಜ್ಯ ಸಾಕ್ಷಿಯಾಗಲಿದೆ.

ಇದನ್ನೂ ಓದಿ: ವಿಶ್ವಸಂಸ್ಥೆಯ UNSAAT ತಂಡದಲ್ಲಿ ಭಾರತದ 19 ಮಹಿಳಾ ಅಧಿಕಾರಿಗಳಿಗೆ ಸ್ಥಾನ.. ಇದೇ ಮೊದಲು

Last Updated : Feb 17, 2022, 1:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.