ಕೊಲ್ಹಾಪುರ (ಮಹಾರಾಷ್ಟ್ರ): ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದ ರಾಷ್ಟ್ರೀಯ ಟೇಬಲ್ ಟೆನಿಸ್ ಆಟಗಾರರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಕೊಲ್ಲಾಪುರದ ರಾಜ್ ಪಟೇಲ್ (32) ಎಂಬುವವರೇ ಮೃತ ಆಟಗಾರ.
ಸತಾರಾ ಜಿಲ್ಲೆಯಲ್ಲಿ ನಡೆದ 11ನೇ ಹಿಲ್ ಹಾಫ್ ಮ್ಯಾರಥಾನ್ನಲ್ಲಿ ದೇಶ ಹಾಗೂ ವಿದೇಶಗಳಿಂದ ಏಳು ಸಾವಿರ ಸ್ಪರ್ಧಿಗಳು ಭಾಗವಹಿಸಿದ್ದರು. ಇದರಲ್ಲಿ ಕೊಲ್ಲಾಪುರದ ರಾಜ್ ಪಟೇಲ್ ಕೂಡ ಒಬ್ಬರು. ಆದರೆ, ಮ್ಯಾರಥಾನ್ ಓಟದ ಮಧ್ಯೆಯೇ ರಾಜ್ ಪಟೇಲ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ರಾಜ್ ಪಟೇಲ್ ಮೃತದೇಹವನ್ನು ಸತಾರಾ ಸರ್ಕಾರಿ ಆಸ್ಪತ್ರೆಗೆ ಮೃತ ಸಾಗಿಸಿದ್ದು, ಇಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಯಲಿದೆ. ಅಲ್ಲದೇ, ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಇನ್ನೂ ಮೂವರು ಸ್ಪರ್ಧಿಗಳು ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮಹಮ್ಮದ್ ಶಮಿಗೆ ಕೋವಿಡ್: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಔಟ್, ಉಮೇಶ್‌ಗೆ ಸ್ಥಾನ