ETV Bharat / bharat

National Anti-Drug Addiction Day: ವ್ಯಸನದಿಂದ ಮುಕ್ತರಾಗಲು ಇಲ್ಲಿದೆ ಪರಿಹಾರ ಮಾರ್ಗ - mahatma gandhi jayanti

ಭಾರತವನ್ನು ಮಾದಕವಸ್ತುಗಳಿಂದ ಮುಕ್ತಗೊಳಿಸಲು ಮತ್ತು ಕಾಪಾಡುವ ಉದ್ದೇಶದೊಂದಿಗೆ ಅಕ್ಟೋಬರ್ 2ರಂದು ರಾಷ್ಟ್ರೀಯ ಮಾದಕವಸ್ತು ವ್ಯಸನ ವಿರೋಧಿ ದಿನ ಆಚರಣೆ ಮಾಡಲಾಗುತ್ತದೆ.

national-anti-drug-addiction-day-quit-now
ರಾಷ್ಟ್ರೀಯ ಮಾದಕವಸ್ತು ವ್ಯಸನ ವಿರೋಧಿ ದಿನ
author img

By

Published : Oct 2, 2021, 1:38 PM IST

ಮಾದಕ ವ್ಯಸನವು ವ್ಯಕ್ತಿಯ ಜೀವನವನ್ನು ಸಂಪೂರ್ಣ ಹಾಳುಮಾಡುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ವ್ಯಸನಿಯಾದ ವ್ಯಕ್ತಿ ಮಾತ್ರವಲ್ಲ, ಆತನ ಸುತ್ತಮುತ್ತಲಿನ ಜನರು, ವಿಶೇಷವಾಗಿ ಅವನ ಕುಟುಂಬ ಮತ್ತು ಸ್ನೇಹಿತರ ಮೇಲೂ ಈ ದುಶ್ಚಟವು ಪರಿಣಾಮ ಬೀರುತ್ತದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಮಾದಕ ವ್ಯಸನದ ತೀವ್ರ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವಲ್ಲಿ ಮುಂಚೂಣಿಯಲ್ಲಿದ್ದರು. ಅದಕ್ಕಾಗಿಯೇ, ಪ್ರತಿ ವರ್ಷ ಅವರ ಜನ್ಮ ದಿನಾಚರಣೆಯಂದು, ರಾಷ್ಟ್ರೀಯ ಮಾದಕದ್ರವ್ಯ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತದೆ.

ಮಾದಕ ವ್ಯಸನವು ದೀರ್ಘಕಾಲದ ಮೆದುಳಿನ ಕಾಯಿಲೆಗಳಿಗೆ ಕಾರಣವಾಗುತ್ತದೆ. ಡ್ರಗ್ಸ್ ನಮ್ಮ ಸಮಾಜದ ದೊಡ್ಡ ಶತ್ರುವಾಗಿದ್ದು, ಇದು ವ್ಯಕ್ತಿಯ ಮೇಲೆ ಮಾತ್ರವಲ್ಲ, ಸಮಾಜದ ಮೇಲೂ ಪರಿಣಾಮ ಬೀರುತ್ತದೆ. ಇದು ತರ್ಕಬದ್ಧ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ.

ವ್ಯಸನದ ಪರಿಣಾಮಗಳು ಯಾವುವು?

ಭಾರತದ ರಾಷ್ಟ್ರೀಯ ಆರೋಗ್ಯ ಪೋರ್ಟಲ್ (NHP) ಪ್ರಕಾರ, ಮಾದಕ ವ್ಯಸನದ ಪರಿಣಾಮಗಳು ಹೀಗಿವೆ:

  • ಆರೋಗ್ಯ ಸಮಸ್ಯೆಗಳು
  • ನೆನಪಿನ ಅಸ್ವಸ್ಥತೆ
  • ಸಮತೋಲನ ಮತ್ತು ನಡೆದಾಡಲು ಸಮಸ್ಯೆ
  • ಆತಂಕ, ಖಿನ್ನತೆ ಮತ್ತು ನಿದ್ರೆಯ ತೊಂದರೆ
  • ಹಠಾತ್ ತೂಕ ನಷ್ಟ ಅಥವಾ ತೂಕ ಹೆಚ್ಚಳವಾಗುವುದು
  • ಪಿತ್ತಜನಕಾಂಗದ ಕಾಯಿಲೆ, ಅಪಸ್ಮಾರ ಮತ್ತು ಕ್ಯಾನ್ಸರ್ ಅಪಾಯ ಹೆಚ್ಚಳ
  • ರಕ್ತದಲ್ಲಿ ಸಕ್ಕರೆ ಅಂಶ ಇಳಿಕೆ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟ ಅಧಿಕ
  • ಹೃದಯ ಸಂಬಂಧಿ ರೋಗ
  • ರೋಗನಿರೋಧಕ ಶಕ್ತಿ ಕಡಿಮೆಯಾಗುವುದು
  • ಸಂತಾನೋತ್ಪತ್ತಿ ಫಲವತ್ತತೆ ಸಮಸ್ಯೆ

ವರ್ತನೆಯ ಮತ್ತು ಮಾನಸಿಕ ಬದಲಾವಣೆಗಳು:

  • ಕೆಲಸದ ಸ್ಥಳದಲ್ಲಿ ಕಾರ್ಯಕ್ಷಮತೆ ಕಡಿಮೆಯಾಗುವುದು
  • ಆಸಕ್ತಿಯ ನಷ್ಟ ಮತ್ತು ಅನುಮಾನಾಸ್ಪದ ನಡವಳಿಕೆಗಳು
  • ಹಿಂಸಾತ್ಮಕ ವರ್ತನೆ
  • ವ್ಯಕ್ತಿತ್ವದಲ್ಲಿ ಬದಲಾವಣೆ

ಸಾಮಾಜಿಕ ಪರಿಣಾಮಗಳು:

  • ಮಾದಕ ವ್ಯಸನಿಗಳು ತಮ್ಮ ಸಾಮಾಜಿಕ ಹಾಗೂ ವೈಯಕ್ತಿಕ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವರು ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ.

ಆರ್ಥಿಕ ನಷ್ಟ:

  • ಮಾದಕ ವ್ಯಸನಿಗಳು ತಮ್ಮ ಬೇಡಿಕೆ ಪೂರೈಸಲು ಹಣಕ್ಕಾಗಿ ಬೇಡಿಕೊಳ್ಳುತ್ತಾರೆ, ಸಾಲ ಪಡೆಯುತ್ತಾರೆ ಅಥವಾ ಹಣವನ್ನು ಕದಿಯುತ್ತಾರೆ.

ಮಾದಕ ವ್ಯಸನದಿಂದ ಮುಕ್ತಿ ಪಡೆಯುವುದು ಹೇಗೆ?

ಸಿಗರೇಟ್, ತಂಬಾಕು, ಮದ್ಯ ಅಥವಾ ಮಾದಕವಸ್ತುಗಳನ್ನು ತ್ಯಜಿಸುವುದು ತುಂಬಾ ಕಷ್ಟ, ಆದರೆ ಇಚ್ಛಾಶಕ್ತಿ ಬಲವಾಗಿದ್ದರೆ ಮತ್ತು ವ್ಯಸನಿಯ ಕುಟುಂಬದ ಕಡೆಯಿಂದ ಬೆಂಬಲವಿದ್ದರೆ ಮಾದಕದ್ರವ್ಯವನ್ನು ತ್ಯಜಿಸುವುದು ಸುಲಭ. ಒಮ್ಮೆಗೇ ಅಲ್ಲದಿದ್ದರೂ ಹಂತ ಹಂತವಾಗಿ ಡ್ರಗ್ ಸೇವನೆಯನ್ನು ತ್ಯಜಿಸುವುದು ಅಗತ್ಯ. ಅದನ್ನು ಸರಿಯಾಗಿ ಪಾಲಿಸದಿದ್ದರೆ ಮತ್ತೆ ವ್ಯಕ್ತಿಯು ವ್ಯಸನದತ್ತ ಮುಖಮಾಡಬಹುದು.

ವ್ಯಸನಮುಕ್ತರಾಗಲು ಪ್ಲಾನ್​ ಹೀಗಿರಲಿ:

ವ್ಯಸನವನ್ನು ತ್ಯಜಿಸಲು ಮತ್ತು ಅದರ ಮರುಕಳಿಕೆ ತಪ್ಪಿಸಲು, ವೈದ್ಯಕೀಯ ಚಿಕಿತ್ಸೆಯೊಂದಿಗೆ ಪುನರ್ವಸತಿ ಬಹಳ ಮುಖ್ಯ. ಪುನರ್ವಸತಿಯು ಚಿಕಿತ್ಸೆಯ ಒಂದು ಪ್ರಮುಖ ಭಾಗವಾಗಿದೆ. ಏಕೆಂದರೆ ಡ್ರಗ್ಸ್​ ತ್ಯಜಿಸಿದ ನಂತರವೂ, ನಮ್ಮ ಮೆದುಳಿನಲ್ಲಿನ ಬದಲಾವಣೆಗಳು ದೇಹ, ಮನಸ್ಸು ಮತ್ತು ಅಭ್ಯಾಸಗಳ ಮೇಲೆ ದೀರ್ಘಕಾಲ ಪರಿಣಾಮ ಬೀರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಪುನರ್ವಸತಿಯ ಅನುಪಸ್ಥಿತಿಯಲ್ಲಿ ವ್ಯಸನಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ಈ ಪ್ರಕ್ರಿಯೆಗೆ ಸಂಪೂರ್ಣ ಪ್ಲಾನ್​ ಅಗತ್ಯ.

ನಿರ್ವಿಶೀಕರಣ:

ನಿರ್ವಿಶೀಕರಣ ಎಂದರೆ ಚಯಾಪಚಯ, ವೈದ್ಯಕೀಯ ಅಥವಾ ಔಷಧೀಯ ಪ್ರಕ್ರಿಯೆಯ ಮೂಲಕ ದೇಹದಲ್ಲಿನ ವಿಷಕಾರಿ ಅಂಶಗಳನ್ನು ನಿರ್ಮೂಲನೆ ಮಾಡುವುದಾಗಿದೆ. ವ್ಯಸನ ಮುಕ್ತರಾಗಲು ಅಳವಡಿಸಿಕೊಳ್ಳಬೇಕಾದ ಮೊದಲ ಅಭ್ಯಾಸವೆಂದರೆ ನಿರ್ವಿಶೀಕರಣ. ಏಕಕಾಲದಲ್ಲಿ, ಚಿಕಿತ್ಸೆಯ ಮೂಲಕ, ವ್ಯಸನಿಯ ದೇಹದಲ್ಲಿಲ್ಲಿನ ಮಾದಕ ಅಂಶಗಳನ್ನು ನಿಗ್ರಹ ಮತ್ತು ನಿರ್ಮೂಲನೆ ಮಾಡುವ ಪ್ರಯತ್ನ ಇದಾಗಿದೆ.

ಸಮಾಲೋಚನೆ ಮತ್ತು ವರ್ತನೆಯ ಚಿಕಿತ್ಸೆ:

ಮಾದಕ ವ್ಯಸನಿಗಳಿಗೆ ಸಮಾಲೋಚನೆ ಬಹಳ ಮುಖ್ಯ. ಇದು ಮಾದಕವಸ್ತುಗಳನ್ನು ತೊರೆಯುವ ವ್ಯಕ್ತಿಯ ಇಚ್ಛೆಯನ್ನು ಬಲಪಡಿಸಲು ಸಹಾಯಕಾರಿ ಹಾಗೂ ಪುನರ್ವಸತಿ ಅವಧಿಯಲ್ಲಿ ಆತನ ದೇಹದಲ್ಲಿ ಆಗುತ್ತಿರುವ ಬದಲಾವಣೆ ತಿಳಿದುಕೊಳ್ಳಲು ಮತ್ತು ಅದರಂತೆ ವರ್ತಿಸಲು ಸಹಕಾರಿಯಾಗುತ್ತದೆ. ವ್ಯಸನದ ಮುಕ್ತರಾಗಲು ಪ್ರಯತ್ನಿಸುವವರಲ್ಲಿ ಆತ್ಮವಿಶ್ವಾಸ ಮತ್ತು ಮನೋಬಲವು ತೀವ್ರ ಕಡಿಮೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಅವರ ಮಾನಸಿಕ ಆರೋಗ್ಯ ಸುಧಾರಿಸಲು ಹಾಗೂ ಮತ್ತೆ ಸಮಾಜದೊಂದಿಗೆ ಹೊಂದಿಕೊಳ್ಳಲು ಸಲಹೆ ಮತ್ತು ನಡವಳಿಕೆಯ ಚಿಕಿತ್ಸೆಯು ನೆರವಾಗುತ್ತದೆ.

ಸಾಮಾನ್ಯವಾಗಿ ಈ ಚಿಕಿತ್ಸೆಯನ್ನು ವಿಭಿನ್ನ ರೀತಿಯಲ್ಲಿ ನೀಡಲಾಗುತ್ತದೆ. ಅಗತ್ಯಕ್ಕೆ ಅನುಗುಣವಾಗಿ ಒಬ್ಬ ವ್ಯಕ್ತಿ, ಗುಂಪು ಅಥವಾ ಕುಟುಂಬದ ಮಟ್ಟದಲ್ಲಿ ಚಿಕಿತ್ಸೆ ನಡೆಯುತ್ತದೆ. ಸುದೀರ್ಘ ಪ್ರಕ್ರಿಯೆಯಾಗಿದ್ದರೂ, ಚಟಕ್ಕೆ ಒಳಗಾದವರ ಸ್ಥಿತಿ ಸುಧಾರಿಸುವುದರಿಂದ, ಚಿಕಿತ್ಸಾ ಸೆಷನ್‌ಗಳ ಸಂಖ್ಯೆ ಕಡಿಮೆಯಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಸಾಮಾನ್ಯವಾಗಿ ಅರಿವಿನ ವರ್ತನೆಯ ಚಿಕಿತ್ಸೆ, ಬಹು ಆಯಾಮದ ಕುಟುಂಬ ಚಿಕಿತ್ಸೆ ಮತ್ತು ಪ್ರೇರಕ ಸಂದರ್ಶನ ಚಿಕಿತ್ಸೆಯನ್ನು ಅನುಸರಿಸಲಾಗುತ್ತದೆ.

ನೋಂದಣಿ ಮಾಡಿಕೊಳ್ಳಬಹುದು:

ಮಾದಕ ದ್ರವ್ಯ ವ್ಯಸನಕ್ಕಾಗಿ ನಮ್ಮ ದೇಶದಲ್ಲಿ ಅನೇಕ ಸಂಸ್ಥೆಗಳು ಸರ್ಕಾರ ಮತ್ತು ಸರ್ಕಾರೇತರ ಮಟ್ಟದಲ್ಲಿ ಕೆಲಸ ಮಾಡುತ್ತಿವೆ. ನಮ್ಮ ದೇಶದ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತು ಪುನರ್ವಸತಿ ವ್ಯವಸ್ಥೆ ಇದೆ. ವ್ಯಸನ ಮುಕ್ತರಾಗಲು ಇಚ್ಛಿಸುವವರ ನೆರವಿಗಾಗಿಯೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೆಲವು ವೆಬ್‌ಸೈಟ್‌ಗಳು ಕಾರ್ಯ ನಿರ್ವಹಿಸುತ್ತಿವೆ. ತಂಬಾಕು ಮುಕ್ತರಾಗಲು ಬಯಸುವವರು ಇಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬಹುದಾಗಿದೆ. 011-22901701 ನಂಬರ್​​ಗೆ ಮಿಸ್ಡ್ ಕಾಲ್ ನೀಡಬಹುದು ಮತ್ತು http://www.nhp.gov.in/quit-tobacco ಮೂಲಕ ತಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ನಮೂದಿಸಿ ತಮ್ಮನ್ನು ತಾವು ನೋಂದಾಯಿಸಿಕೊಳ್ಳಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.