ನಾಸಿಕ್(ಮಹಾರಾಷ್ಟ್ರ): ರಾಷ್ಟ್ರೀಯ ಉರ್ದು ಅಭಿವೃದ್ಧಿ ಮಂಡಳಿಯ ಅಖಿಲ ಭಾರತ ಉರ್ದು ಪುಸ್ತಕ ಮೇಳವನ್ನು ಮಹಾರಾಷ್ಟ್ರದ ನಾಸಿಕ್ ಬಳಿಯ ಮಾಲೆಗಾಂವ್ನಲ್ಲಿ ಆಯೋಜಿಸಿದ್ದು, ಓದುಗರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಡಿಸೆಂಬರ್ 18 ರಿಂದ 26 ರವರೆಗೆ ಮಾಲೇಗಾಂವ್‌ನ ಪುರಸಭೆ ಮತ್ತು ಎಟಿಟಿ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಲಾಗಿದೆ. ಉರ್ದು ಭಾಷೆಯಲ್ಲಿರುವ ರಾಮಾಯಣ, ಮಹಾಭಾರತ ಪುಸ್ತಕಗಳಿಗೂ ಹೆಚ್ಚು ಬೇಡಿಕೆ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.
ದೇಶದ 164 ಉರ್ದು ಸಾಹಿತ್ಯ ಪ್ರಕಾಶನ ಸಂಸ್ಥೆಗಳಲ್ಲಿಯೂ ಈ ಪುಸ್ತಕ ಮೇಳ ನಡೆಯುತ್ತಿದ್ದು, ಲಕ್ಷಾಂತರ ಪುಸ್ತಕಗಳ ಮಾರಾಟ ಮಾಡಲಾಗುತ್ತಿದೆ. ಮಾಲೆಗಾಂವ್ನಲ್ಲಿ ಕಳೆದ 6 ದಿನಗಳಿಂದ ಪುಸ್ತಕ ಪ್ರದರ್ಶನ ನಡೆಯುತ್ತಿದ್ದು, ಉರ್ದು ಸಾಹಿತ್ಯ ಪ್ರೇಮಿಗಳು ಪುಸ್ತಕಗಳನ್ನು ಖರೀದಿಸಲು ಮುಗಿ ಬೀಳುತ್ತಿದ್ದಾರೆ.
ಉರ್ದು ಭಾಷೆಯ ರಾಮಾಯಣ, ಮಹಾಭಾರತ ಮಾತ್ರವಲ್ಲದೇ ಭಗವದ್ಗೀತೆ, ಸುಖಸಾಗರ, ವೇದ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳು ಈ ಪುಸ್ತಕ ಮೇಳದಲ್ಲಿ ಲಭ್ಯವಿವೆ. ಗ್ರಂಥಾಲಯಗಳು ಮತ್ತು ಉರ್ದು ಶಾಲೆಗಳಿಗೂ ಇಲ್ಲಿಂದ ಪುಸ್ತಕಗಳನ್ನು ರವಾನಿಸಲಾಗಿದೆ ಎಂಬುದು ಆಯೋಜಕರ ಮಾತಾಗಿದೆ.
ಇದನ್ನೂ ಓದಿ: ಭಾರತದ ಮೇಲೆ ಯಾರ ಕಣ್ಣು ಬೀಳಬಾರದೆಂದು ಬ್ರಹ್ಮೋಸ್ ತಯಾರಿಕೆ: ರಾಜನಾಥ ಸಿಂಗ್