ನಾಸಿಕ್, ಮಹಾರಾಷ್ಟ್ರ: ಶಸ್ತ್ರಾಸ್ತ್ರಗಳನ್ನು ಹೊಂದುವುದು ಮತ್ತು ಸಾಗಾಟ ಮಾಡುವುದು ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧ. ಆದರೂ ಕೆಲವೆಡೆ ಶಸ್ತ್ರಗಳನ್ನು ಹೊಂದಿರುವ ಪ್ರಕರಣಗಳು ದೇಶದ ಹಲವೆಡೆ ದಾಖಲಾಗುತ್ತಿವೆ. ಈಗ ಮಹಾರಾಷ್ಟ್ರದಲ್ಲಿ ಒಂದೇ ಸ್ಥಳದಲ್ಲಿ 30 ಖಡ್ಗಗಳು ಪತ್ತೆಯಾಗಿದ್ದು, ಪೊಲೀಸರಲ್ಲಿ ಅಚ್ಚರಿ ಮೂಡಿಸಿವೆ.
ನಾಸಿಕ್ ಬಳಿಯ ಮಾಲೇಗಾಂವ್ ಸಮೀಪದ ಮೋಮಿನ್ಪುರದಲ್ಲಿ ಪೊಲೀಸರು ದಾಳಿ ನಡೆಸಿದ್ದು, ಸುಮಾರು 30 ಹರಿತ ಕತ್ತಿಗಳನ್ನು ಜಪ್ತಿ ಮಾಡಿದ್ದಾರೆ. ಖಡ್ಗಗಳನ್ನು ಹೊಂದಿದ್ದ ಆರೋಪದ ಮೇಲೆ ಇಬ್ಬರ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ದೂರು ದಾಖಲು ಮಾಡಲಾಗಿದೆ.
ಆರೋಪಿಗಳು ಇಷ್ಟೊಂದು ಖಡ್ಗಗಳನ್ನು ಸಂಗ್ರಹಿಸಿಡಲು ಕಾರಣವೇನು? ಅವರ ಉದ್ದೇಶ ಏನಾಗಿತ್ತು? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳನ್ನು ಮಾಲೇಗಾಂವ್ನ ಕಮಲಪುರ ನಿವಾಸಿಯಾದ ಮೊಹಮ್ಮದ್ ಮೆಹಮೂದ್ ಅಬ್ದುಲ್ ರಶೀದ್ ಅನ್ಸಾರಿ ಅಲಿಯಾಸ್ ಮಸ್ತಾನ್, ಮಾಲೇಗಾಂವ್ನ ಇಸ್ಲಾಂಪುರ ನಿವಾಸಿಯಾದ ಮೊಹಮ್ಮದ್ ಬಿಲಾಲ್ ಶಬ್ಬೀರ್ ಅಹ್ಮದ್ ಅಲಿಯಾಸ್ ಬಿಲಾಲ್ ದಾದಾ ಎಂದು ಗುರ್ತಿಸಲಾಗಿದೆ.
ಮಾಲೇಗಾಂವ್‌ನಲ್ಲಿ ಕೆಲವರು ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿರುವ ಬಗ್ಗೆ ಡಿಸೆಂಬರ್ 24ರಂದು ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಪಾಟೀಲ್ ಅವರಿಗೆ ಸುಳಿವು ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಎಸ್ಪಿ ಸೂಚನೆ ಮೇರೆಗೆ ಮಾಲೇಗಾಂವ್ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಘುಸಾರ್ ದಾಳಿ ನಡೆಸಿದ್ದಾರೆ.
ಮೊಮಿನ್ಪುರ ದಲ್ವಾಲಾ ಚೌಕ್ ಬಳಿಯ ಮುಲ್ಲಾ ಬಾಬಾ ಸಮೀಪದ ಕೊಳೆಗೇರಿ ಮೇಲೆ ದಾಳಿ ನಡೆಸಿದ ಪೊಲೀಸರು ಸುಮಾರು 30 ಖಡ್ಗಗಳನ್ನು ಜಪ್ತಿ ಮಾಡಿದ್ದು, ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ವಿಪರೀತ ಚಳಿ ತಡೆಯಲಾಗದೇ ತಾನೇ ಕದ್ದ ಬೈಕ್ಗೆ ಬೆಂಕಿ ಇಟ್ಟ ಭೂಪ..