ETV Bharat / bharat

ಸೌರವ್ಯೂಹದ ಹೊರಗಿರುವ ಎಕ್ಸೋಪ್ಲಾನೆಟ್‌ನ ಪ್ರಥಮ ನೇರ ಚಿತ್ರ ಸೆರೆಹಿಡಿದ ನಾಸಾ - ಎಕ್ಸೋಪ್ಲಾನೆಟ್‌ನ ಪ್ರಥಮ ನೇರ ಚಿತ್ರ

ನಾಸಾದ ಜೇಮ್ಸ್​ ವೆಬ್ ಸ್ಪೇಸ್ ಟೆಲಿಸ್ಕೋಪ್ (NASA's James Webb Space Telescope) ಬಳಸಿ ನಮ್ಮ ಸೌರವ್ಯೂಹದ ಹೊರಗಿರುವ ಗ್ರಹ ಒಂದರ ನೇರ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಆದರೆ, ಈ ಗ್ರಹ ಜೀವಿಗಳ ವಾಸಕ್ಕೆ ಯೋಗ್ಯವಾಗಿಲ್ಲ.

ಸೌರವ್ಯೂಹದ ಹೊರಗಿರುವ ಎಕ್ಸೋಪ್ಲಾನೆಟ್‌ನ ಪ್ರಥಮ ನೇರ ಚಿತ್ರ ಸೆರೆಹಿಡಿದ ನಾಸಾ
NASA captures the first direct image of an exoplanet outside the solar system
author img

By

Published : Sep 2, 2022, 5:53 PM IST

ನ್ಯೂಯಾರ್ಕ್: ಇದೇ ಪ್ರಥಮ ಬಾರಿಗೆ ಗಗನಯಾತ್ರಿಗಳು ನಾಸಾದ ಜೇಮ್ಸ್​ ವೆಬ್ ಸ್ಪೇಸ್ ಟೆಲಿಸ್ಕೋಪ್ (NASA's James Webb Space Telescope) ಬಳಸಿ ನಮ್ಮ ಸೌರವ್ಯೂಹದ ಹೊರಗಿರುವ ಗ್ರಹ ಒಂದರ ನೇರ ಚಿತ್ರ ಸೆರೆ ಹಿಡಿದಿದ್ದಾರೆ. HIP 65426 b ಎಂಬ ಹೆಸರು ಇಟ್ಟಿರುವ ಈ ಎಕ್ಸೊಪ್ಲಾನೆಟ್ ಒಂದು ಬೃಹತ್ತಾದ ಅನಿಲ ಗ್ರಹವಾಗಿದೆ. ಅಂದರೆ ಇದರಲ್ಲಿ ಯಾವುದೇ ಕಲ್ಲು ಬಂಡೆಯ ಮೇಲ್ಮೈ ಇಲ್ಲ ಹಾಗೂ ಅದೇ ಕಾರಣದಿಂದ ಇದು ಜೀವಿಗಳ ವಾಸಕ್ಕೆ ಯೋಗ್ಯವಾಗಿಲ್ಲ.

ಎಕ್ಸೋಪ್ಲಾನೆಟ್ ಗುರುಗ್ರಹದ ದ್ರವ್ಯರಾಶಿಯ ಆರರಿಂದ 12 ಪಟ್ಟು ಹೆಚ್ಚು ದೊಡ್ಡದಾಗಿದೆ ಮತ್ತು ಈ ಅವಲೋಕನಗಳು ಗ್ರಹದ ಬಗ್ಗೆ ಮತ್ತಷ್ಟು ತಿಳಿಯಲು ಅನುಕೂಲವಾಗಲಿವೆ. 4.5 ಬಿಲಿಯನ್ ವರ್ಷಗಳಷ್ಟು ಹಳೆಯದಾದ ಭೂಮಿಗೆ ಹೋಲಿಸಿದರೆ, ಈ ಗ್ರಹ 15 ರಿಂದ 20 ಮಿಲಿಯನ್ ವರ್ಷ ವಯಸ್ಸಿನದಾಗಿದ್ದು. ಇನ್ನೂ ಯೌವನದ ಹಂತದಲ್ಲಿದೆ.

ಇದು ಕೇವಲ ವೆಬ್​ ಸಂಸ್ಥೆಗೆ ಮಾತ್ರವಲ್ಲದೆ ಇಡೀ ಖಗೋಳ ಸಂಶೋಧನಾ ಕ್ಷೇತ್ರಕ್ಕೆ ಮಹತ್ವದ ಘಟ್ಟವಾಗಿದೆ ಎಂದು ಯುಕೆಯ ಎಕ್ಸೆಟರ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಮತ್ತು ಖಗೋಳಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿರುವ ಸಾಶಾ ಹಿಂಕ್ಲೇ ಹೇಳಿದ್ದಾರೆ. ಸೆರೆಹಿಡಿಯಲಾದ ಚಿತ್ರವನ್ನು ನಾಲ್ಕು ವಿಭಿನ್ನ ಬೆಳಕಿನ ಫಿಲ್ಟರ್‌ಗಳ ಮೂಲಕ ನೋಡಿದಾಗ, ವೆಬ್‌ನ ಶಕ್ತಿಯುತ ಇನ್​ಫ್ರಾರೆಡ್ ನೋಟವು ನಮ್ಮ ಸೌರವ್ಯೂಹದ ಆಚೆಗಿನ ಪ್ರಪಂಚಗಳನ್ನು ಹೇಗೆ ಸುಲಭವಾಗಿ ಸೆರೆಹಿಡಿಯುತ್ತದೆ ಎಂಬುದು ತಿಳಿಯುತ್ತದೆ.

ಈ ಚಿತ್ರವು ಇನ್​ ಫ್ರಾರೆಡ್ ಬೆಳಕಿನ ವಿವಿಧ ಬ್ಯಾಂಡ್‌ಗಳಲ್ಲಿ ಎಕ್ಸೋಪ್ಲಾನೆಟ್ 'HIP 65426 b' ಅನ್ನು ತೋರಿಸಿದೆ. ಕರೋನಾಗ್ರಾಫ್ ಎಂದು ಕರೆಯಲ್ಪಡುವ ಪ್ರತಿಯೊಂದು ಉಪಕರಣದೊಳಗಿನ ಮುಖವಾಡಗಳ ಒಂದು ಸೆಟ್ ಆತಿಥೇಯ ನಕ್ಷತ್ರದ ಬೆಳಕನ್ನು ನಿರ್ಬಂಧಿಸುತ್ತದೆ. ಇದರಿಂದ ಗ್ರಹವನ್ನು ನೋಡಬಹುದಾಗಿದೆ.

ಚಿಲಿಯಲ್ಲಿರುವ ಯುರೋಪಿಯನ್ ಸದರ್ನ್ ಆಬ್ಸರ್ವೇಟರಿಯ ಬೃಹತ್ತಾದ ಟೆಲಿಸ್ಕೋಪ್​ನ SPHERE ಉಪಕರಣ ಬಳಸಿ 2017 ರಲ್ಲಿ ಖಗೋಳಶಾಸ್ತ್ರಜ್ಞರು ಈ ಗ್ರಹವನ್ನು ಕಂಡು ಹಿಡಿದಿದ್ದರು ಮತ್ತು ಕಡಿಮೆ ವೇವ್ ಲೆಂಗ್ತ್​ನ ಇನ್ ಫ್ರಾರೆಡ್ ಲೈಟ್ ಬಳಸಿ ಗ್ರಹದ ಚಿತ್ರಗಳನ್ನು ಸೆರೆಹಿಡಿದಿದ್ದರು. ಆದರೆ, ವೆಬ್ಸ್​ ಚಿತ್ರವು ದೂರದ ಇನ್ ಫ್ರಾರೆಡ್ ವೇವ್ ಲೆಂಗ್ತ್​ನಲ್ಲಿ ಹೊಸ ಮಾಹಿತಿಗಳನ್ನು ಬಹಿರಂಗಪಡಿಸಿದೆ. ಭೂಮಿಯ ಆಂತರಿಕ ಇನ್ ಫ್ರಾರೆಡ್ ಬೆಳಕಿನ ಕಾರಣದಿಂದ ಭೂಮಿಯ ಮೇಲೆ ಸ್ಥಾಪಿಸಲಾದ ಟೆಲಿಸ್ಕೋಪ್​ಗಳು ಸೆರೆಹಿಡಿಯಲಾಗದ ಮಾಹಿತಿಗಳನ್ನು ಜೇಮ್ಸ್​ ವೆಬ್ ಸ್ಪೇಸ್ ಟೆಲಿಸ್ಕೋಪ್ ಚಿತ್ರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.