ETV Bharat / bharat

ಮೊದಲ 'ಲಿಂಗ-ತಟಸ್ಥ' ಸಂಸ್ಥೆಯಾಗಲಿದೆ ಹೈದರಾಬಾದ್‌ನ NALSAR ಕಾನೂನು ವಿವಿ

author img

By

Published : Mar 28, 2022, 3:55 PM IST

ಹೈದರಾಬಾದ್‌ನ ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಅಂಡ್ ರಿಸರ್ಚ್ ಮಹತ್ವದ ಹೆಜ್ಜೆ ಇಟ್ಟಿದೆ. ಈ ವಿಶ್ವವಿದ್ಯಾಲಯವು ಮೊದಲ 'ಲಿಂಗ-ತಟಸ್ಥ' ಸಂಸ್ಥೆಯಾಗಲಿದೆ..

NALSAR
ಎನ್​ಎಎಲ್​ಎಸ್​​ಎಆರ್ ಕಾನೂನು ವಿವಿ

ಹೈದರಾಬಾದ್(ಆಂಧ್ರಪ್ರದೇಶ) : ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಅಂಡ್ ರಿಸರ್ಚ್ (NALSAR) ಹೈದರಾಬಾದ್, LGBTQ+ ವಿದ್ಯಾರ್ಥಿಗಳಿಗೆ ಲಿಂಗ-ತಟಸ್ಥ ಜಾಗವನ್ನು ತೆರೆದಿದೆ. ವಿಶ್ವವಿದ್ಯಾನಿಲಯವು ವಿಶ್ವವಿದ್ಯಾನಿಲಯದೊಳಗೆ ಲಿಂಗ-ತಟಸ್ಥ ವಾಸಸ್ಥಳವನ್ನು ಸ್ಥಾಪಿಸಿದೆ.

  • We are pleased to share that in our endeavour to make our campus a truly inclusive space, the ground floor of GH-6 has been designated as a gender neutral space with rooms allotted to students self-identifying as members of the LGBTQ+ community, with plans to move towards a pic.twitter.com/163JeSGQ99

    — NALSAR University of Law (@NALSAR_Official) March 26, 2022 " class="align-text-top noRightClick twitterSection" data=" ">

ಈ ಬಗ್ಗೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಣೆ ಹೊರಡಿಸಿದೆ. ಹೈದರಾಬಾದ್‌ನ ಜಸ್ಟೀಸ್ ಸಿಟಿ, ಶಮೀರ್‌ಪೇಟ್‌ನಲ್ಲಿರುವ ತಮ್ಮ ಕ್ಯಾಂಪಸ್‌ನ GH-6ನ ನೆಲ ಮಹಡಿಯನ್ನು 'ಲಿಂಗ-ತಟಸ್ಥ ಸ್ಥಳವೆಂದು ಗೊತ್ತುಪಡಿಸಲಾಗಿದೆ. LGBTQ+ ಸಮುದಾಯದ ಸದಸ್ಯರಿಗೆ ಕೊಠಡಿಗಳನ್ನು ನಿಗದಿಪಡಿಸಲಾಗಿದೆ ಎಂದು ಟ್ವೀಟ್​​ನಲ್ಲಿ ಹೇಳಿದೆ.

ಸುರಕ್ಷಿತ ಮತ್ತು ಅಂತರ್ಗತ ಕ್ಯಾಂಪಸ್ ಅನ್ನು ರಚಿಸುವುದು ವಿಶ್ವವಿದ್ಯಾನಿಲಯದ ಉದ್ದೇಶ ಎಂದು ಉಪಕುಲಪತಿ ಫೈಜಾನ್ ಮುಸ್ತಫಾ ಹೇಳಿದ್ದಾರೆ. ಶೈಕ್ಷಣಿಕ ಬ್ಲಾಕ್‌ನ ನೆಲ ಮಹಡಿಯಲ್ಲಿರುವ ವಾಶ್‌ರೂಮ್ ಅನ್ನು ಲಿಂಗ ತಟಸ್ಥ ಶೌಚಾಲಯ ಎಂದು ಗೊತ್ತುಪಡಿಸಲಾಗಿದೆ ಎಂದು ರಿಜಿಸ್ಟ್ರಾರ್ ಪ್ರೊ. ವಿ ಬಾಲಕಿಸ್ತಾ ರೆಡ್ಡಿ ತಿಳಿಸಿದ್ದಾರೆ. ಅಲ್ಲದೇ ಸಂಸ್ಥೆಯು ಹೆಚ್ಚು ಸ್ನೇಹಪರ ಮತ್ತು ಎಲ್ಲರನ್ನೂ ಒಳಗೊಳ್ಳುವ ಮಾರ್ಗವಾಗಿದೆ ಎಂದು ಅವರು ಹೇಳಿದ್ದಾರೆ.

ಅಧಿಕೃತ ಪ್ರಕಟಣೆಯ ಪ್ರಕಾರ, NALSAR ಕಾನೂನು ವಿಶ್ವವಿದ್ಯಾನಿಲಯವು LGBTQ+ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಲಿಂಗ ತಟಸ್ಥ ಮಹಡಿಯಲ್ಲಿ ಕೊಠಡಿಗಳನ್ನು ನೀಡಲಾಗುವುದು ಎಂದು ಘೋಷಿಸಿದೆ. ಇದಲ್ಲದೆ, ಆಡಳಿತವು ತಮ್ಮ ಶೈಕ್ಷಣಿಕ ಬ್ಲಾಕ್‌ನ ನೆಲ ಮಹಡಿಯಲ್ಲಿ ವಾಶ್‌ರೂಮ್ ಅನ್ನು 'ಜೆಂಡರ್ ನ್ಯೂಟ್ರಲ್' ಎಂದು ನಿಯೋಜಿಸಿದೆ.

ಜೂನ್ 2015ರಲ್ಲಿ, 22 ವರ್ಷದ BA, LLB ವಿದ್ಯಾರ್ಥಿಯು ಪದವಿ ಪ್ರಮಾಣ ಪತ್ರದಲ್ಲಿ ಲಿಂಗ ಗುರುತಿಸದಂತೆ ವಿನಂತಿಸಿದ್ದರು, ವಿಶ್ವವಿದ್ಯಾನಿಲಯ ತಕ್ಷಣವೇ ಈ ವಿನಂತಿಯನ್ನು ಸ್ವೀಕರಿಸಿತ್ತು. ಮತ್ತು ತಟಸ್ಥ ಪೂರ್ವಪ್ರತ್ಯಯ 'MX' ಅನ್ನು ಬಳಸಿತ್ತು. ಆಗಿನಿಂದಲೇ ಎಲ್ಲರನ್ನೂ ಒಳಗೊಳ್ಳುವ ಸಂಸ್ಥೆಯ ಪ್ರಯತ್ನಗಳು ಆರಂಭವಾಗಿದೆ.

ಇದನ್ನೂ ಓದಿ: ಪಂಜಾಬ್‌ನಲ್ಲಿ ಜನರ ಮನೆ ಬಾಗಿಲಿಗೆ ಪಡಿತರ ವಿತರಿಸಲು ಆಪ್ ಸರ್ಕಾರ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.