ETV Bharat / bharat

ವ್ಯಾಪಾರದಲ್ಲಿ ನಷ್ಟವಾಗಿದ್ದಕ್ಕೆ ಬಡ ಯುವತಿಯರ ಕರೆ ತಂದು ನಗ್ನ ಪೂಜೆ, ಲೈಂಗಿಕ ದೌರ್ಜನ್ಯ! - ನಾಗೇಶ್ವರ ರಾವ್ ನಗ್ನ ಪೂಜೆ ನೆರವೇರಿಸಿದ ಆರೋಪಿ

ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಮಹಿಳೆಯೊಬ್ಬಳು ಇಬ್ಬರು ಯುವತಿಯರಿಂದ ನಗ್ನ ಪೂಜೆ ಮಾಡಿಸಿಕೊಂಡ ಘಟನೆ ಆಂಧ್ರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

Naked worship by young women  Naked worship by young women in Andhra Pradesh  ಯುವತಿಯರಿಂದ ನಗ್ನ ಪೂಜೆ  ವ್ಯಾಪಾರದಲ್ಲಿ ನಷ್ಟ ಹೊಂದಿದ್ದ ಮಹಿಳೆ  ಇಬ್ಬರು ಯುವತಿಯರಿಂದ ನಗ್ನ ಪೂಜೆ  ಆಂಧ್ರಪ್ರದೇಶದ ಗುಂಟೂರು ಜಿಲ್ಲೆ  ಯುವತಿಯರೊಂದಿಗೆ ಕ್ಷುದ್ರ ಪೂಜೆ  ಗುಂಟೂರಿನಲ್ಲಿ ಡಿಎಸ್ಪಿ ಮಹೆಬೂಬ್ ಬಾಷಾ  ಪೊನ್ನೆಕಲ್ಲು ಪೂಜಾರಿ ನಾಗೇಶ್ವರ ರಾವ್  ನಾಗೇಶ್ವರ ರಾವ್ ನಗ್ನ ಪೂಜೆ ನೆರವೇರಿಸಿದ ಆರೋಪಿ  ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ
ಯುವತಿಯರಿಂದ ನಗ್ನ ಪೂಜೆ
author img

By

Published : May 15, 2023, 7:08 AM IST

ಗುಂಟೂರು (ಆಂಧ್ರ ಪ್ರದೇಶ): ಯುವತಿಯರೊಂದಿಗೆ ಕ್ಷುದ್ರ ಧಾರ್ಮಿಕ ವಿಧಿ-ವಿಧಾನ ನಡೆಸುತ್ತಿದ್ದ ತಂಡವನ್ನು ನಲ್ಲಪಾಡು ಪೊಲೀಸರು ಬಂಧಿಸಿದ್ದಾರೆ. ಪೂಜಾರಿ ನಾಗೇಶ್ವರ ರಾವ್, ನಾಗೇಂದ್ರ ಬಾಬು (ಪೊನ್ನೆಕಲ್ಲು), ಅರವಿಂದ, ರಾಧಾ (ಚಿಲಕಲೂರಿಪೇಟೆ), ಸುರೇಶ್ (ಗುಂಟೂರು), ಭಾಸ್ಕರ್, ಪೆದ್ದಿರೆಡ್ಡಿ, ಸಾಗರ್, ಶಿವ, ಸುನೀಲ್, ಪವನ್ ಹಾಗು ಸುಬ್ಬುಲು (ನಂದ್ಯಾಲ ಜಿಲ್ಲೆ) ಬಂಧಿತರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣವೇನು?: ಭಾನುವಾರ ಗುಂಟೂರಿನಲ್ಲಿ ಡಿಎಸ್ಪಿ ಮಹೆಬೂಬ್ ಬಾಷಾ ಪ್ರಕರಣದ ವಿವರ ನೀಡಿದರು. ತಾಡಿಕೊಂಡ ತಾಲೂಕಿನ ಪೊನ್ನೆಕಲ್ಲು ಪೂಜಾರಿ ನಾಗೇಶ್ವರ ರಾವ್ ನಗ್ನ ಧಾರ್ಮಿಕ ಕ್ರಿಯೆ ನೆರವೇರಿಸಿದ ಪ್ರಮುಖ ಆರೋಪಿ. ಚಿಲಕಲೂರಿಪೇಟೆಯ ಅರವಿಂದಾ ಎಂಬ ಮಹಿಳೆ ಹಲವು ವ್ಯಾಪಾರಿಗಳಿಂದ ನಷ್ಟ ಅನುಭವಿಸಿದ್ದಾಳೆ. ಪೂಜಾರಿ ಮತ್ತು ಈ ಮಹಿಳೆ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಿತರು. ಇಬ್ಬರು ಗುಪ್ತ ನಿಧಿಗಾಗಿ ಸುಲಭವಾಗಿ ಹಣ ಗಳಿಸಲು ನಿಗೂಢ ವಿಧಿ-ವಿಧಾನಗಳನ್ನು ಮಾಡುವ ಯೋಜನೆ ರೂಪಿಸಿದ್ದರು.

Naked worship by young women  Naked worship by young women in Andhra Pradesh  ಯುವತಿಯರಿಂದ ನಗ್ನ ಪೂಜೆ  ವ್ಯಾಪಾರದಲ್ಲಿ ನಷ್ಟ ಹೊಂದಿದ್ದ ಮಹಿಳೆ  ಇಬ್ಬರು ಯುವತಿಯರಿಂದ ನಗ್ನ ಪೂಜೆ  ಆಂಧ್ರಪ್ರದೇಶದ ಗುಂಟೂರು ಜಿಲ್ಲೆ  ಯುವತಿಯರೊಂದಿಗೆ ಕ್ಷುದ್ರ ಪೂಜೆ  ಗುಂಟೂರಿನಲ್ಲಿ ಡಿಎಸ್ಪಿ ಮಹೆಬೂಬ್ ಬಾಷಾ  ಪೊನ್ನೆಕಲ್ಲು ಪೂಜಾರಿ ನಾಗೇಶ್ವರ ರಾವ್  ನಾಗೇಶ್ವರ ರಾವ್ ನಗ್ನ ಪೂಜೆ ನೆರವೇರಿಸಿದ ಆರೋಪಿ  ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ
ಪ್ರಕರಣದ ಬಂಧಿತ ಆರೋಪಿಗಳು ಮತ್ತು ಡಿಎಸ್‌ಪಿ ಮೆಹಬೂಬ್ ಬಾಷಾ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿರುವುದು.

ಇದಕ್ಕಾಗಿ ಯುವತಿಯರ ಅವಶ್ಯಕತೆ ಇದೆ ಎಂದು ಅರವಿಂದಾ ಹಾಗೂ ಅರ್ಚಕ ನಾಗೇಶ್ವರ ರಾವ್ ನಾಗೇಂದ್ರ ಎಂಬ ವ್ಯಕ್ತಿಗೆ ತಿಳಿಸಿದ್ದಾನೆ. ನಂದ್ಯಾಲ ಜಿಲ್ಲೆಯ ಬಡ ಕುಟುಂಬದ ಇಬ್ಬರು ಯುವತಿಯರಿಗೆ ನಾಗೇಂದ್ರ ಮತ್ತು ಆತನ ಸ್ನೇಹಿತ ಸುರೇಶ್ ಹಣದ ಭರವಸೆ ನೀಡಿ ಮನವೊಲಿಸಿದ್ದಾರೆ. ನಾಗೇಶ್ವರ ರಾವ್ ಮತ್ತು ಮಹಿಳೆ ಅರವಿಂದಾ ಬಳಿಗೆ ಆ ಯುವತಿಯರನ್ನು ಕರೆ ತಂದು ನಗ್ನ ಪೂಜೆ ನಡೆಸಿದ್ದಾರೆ.

ಪೂಜೆಯ ನಂತರ ಅರ್ಚಕ ಮತ್ತು ಆತನ ಹಿಂಬಾಲಕರು ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯವನ್ನೂ ಎಸಗಿದ್ದಾರೆ. ಇದನ್ನು ವಿರೋಧಿಸಿದ ಯುವತಿಯರನ್ನು ಶನಿವಾರ ಬೆದರಿಸಿ ಕಾರ್‌ನಲ್ಲಿ ಕರೆದುಕೊಂಡು ಗುಂಟೂರಿಗೆ ಹೋಗಿದ್ದರು. ಯುವತಿಯರು ಗೋರಂಟ್ಲಾ ಸಮೀಪ ತಪ್ಪಿಸಿಕೊಂಡು ದಿಶಾ ಆ್ಯಪ್ ಮೂಲಕ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಕರೆ ಬಂದಾಕ್ಷಣ ನಲ್ಲಪಾಡು ಪೊಲೀಸರು ಸ್ಥಳಕ್ಕೆ ಧಾವಿಸಿ ಪೂಜಾರಿ ಹಾಗು ಆತನ ಸಹಚರರನ್ನು ಸೆರೆ ಹಿಡಿದಿದ್ದಾರೆ. ಪ್ರಕರಣದಲ್ಲಿ ಒಟ್ಟು 10 ಜನರನ್ನು ಬಂಧಿಸಲಾಗಿದೆ. ಕೇಸ್​ ದಾಖಲಾಗಿದೆ. ನಲ್ಲಪಾಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಗಳ ಮೇಲೆ ಅತ್ಯಾಚಾರ (ಪ್ರತ್ಯೇಕ ಪ್ರಕರಣ): ಮಗಳ ಮೇಲೆ ತಂದೆಯೇ ಅತ್ಯಾಚಾರವೆಸಗಿದ ಅಮಾನವೀಯ ಘಟನೆ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ತಂದೆ ಮಗಳನ್ನು ಬೆದರಿಸಿ ಕೃತ್ಯ ಎಸಗಿದ್ದಾನೆ. ವಿಚಾರ ತಿಳಿಸಿದರೆ ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ತಾಡಿಕೊಂಡ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಗಳು ಇಂಟರ್ಮೀಡಿಯೇಟ್ ನರ್ಸಿಂಗ್ ಎರಡನೇ ವರ್ಷ ಮುಗಿಸಿ ರಜೆಗೆ ಮನೆಗೆ ಬಂದಿದ್ದಾಗ ತಂದೆ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಮನನೊಂದ ಆಕೆ ಆತ್ಮಹತ್ಯೆಗೂ ಯತ್ನಿಸಿದ್ದು, ಸಂಬಂಧಿಕರು ರಕ್ಷಿಸಿದ್ದರು. ಆತ್ಮಹತ್ಯೆ ಯತ್ನಕ್ಕೆ ಕಾರಣ ತಿಳಿದ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಸೆಕ್ಯುರಿಟಿ ಗಾರ್ಡ್ ಮೇಲೆ ಇಸ್ಕಾನ್‌ನ ಸನ್ಯಾಸಿಯಿಂದ ಲೈಂಗಿಕ ಕಿರುಕುಳ ಆರೋಪ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.