ವಡಗಾಮ್(ಗುಜರಾತ್): ಹಿಂದೂ ದೇವಾಲಯದಲ್ಲಿ 100ಕ್ಕೂ ಹೆಚ್ಚು ಮುಸ್ಲಿಮರು ತಮ್ಮ ರೋಜಾ ಬಿಟ್ಟು ಮತ್ತು ಪ್ರಾರ್ಥನೆ ಸಲ್ಲಿಸುವ ಮೂಲಕ ಗುಜರಾತ್ನ ದಲ್ವಾನಾ ಗ್ರಾಮ ಕೋಮು ಸಾಮರಸ್ಯಕ್ಕೆ ಸಾಕ್ಷಿಯಾಯಿತು. ಬನಸಕಾಂತ್ ಜಿಲ್ಲೆಯ ವಡಗಾಮ್ ತಾಲೂಕಿನ ಈ ಗ್ರಾಮದಲ್ಲಿ ದೇವಸ್ಥಾನದ ಟ್ರಸ್ಟ್ ಮತ್ತು ಗ್ರಾಮ ಪಂಚಾಯಿತಿಯೇ ಮುಸ್ಲಿಮರ ಉಪವಾಸ ಬಿಡುವ ಕಾರ್ಯಕ್ರಮ ಆಯೋಜಿಸಿತ್ತು.
ದಲ್ವಾನಾ ಗ್ರಾಮವು ಹಿಂದೂ-ಮುಸ್ಲಿಮರು ಸಾಮರಸ್ಯದಿಂದ ಕೂಡಿದೆ. ಅನೇಕ ವರ್ಷಗಳಿಂದಲೂ ಇಲ್ಲಿ ಎರಡೂ ಧರ್ಮಗಳ ಹಬ್ಬ-ಹರಿದಿನಗಳನ್ನು ಒಟ್ಟಿಗೆ ಆಚರಿಸಿಕೊಂಡು ಬರಲಾಗುತ್ತಿದೆ. ಈಗ ರಂಜಾನ್ ಮಾಸವಾಗಿದ್ದರಿಂದ ಬುಧವಾರ ಇಲ್ಲಿನ ವೀರ ಮಹಾರಾಜ್ ದೇವಸ್ಥಾನದಲ್ಲಿ ಮುಸ್ಲಿಮರಿಗೆ ಉಪವಾಸ ಬಿಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಉಭಯ ಧರ್ಮಗಳ ಆಚರಣೆಗಳು ಬೇರೆಯಾಗಿದ್ದರೂ ಗ್ರಾಮದಲ್ಲಿ ಒಬ್ಬರನ್ನು ಬಿಟ್ಟು ಮತ್ತೊಬ್ಬರು ಯಾವುದೇ ಹಬ್ಬಗಳನ್ನು ಆಚರಣೆ ಮಾಡುವುದಿಲ್ಲವಂತೆ. ನವರಾತ್ರಿ ಮತ್ತು ಮೊಹರಂ ಒಂದೇ ದಿನ ಇದ್ದರೂ ಈ ಗ್ರಾಮದಲ್ಲಿ ಶಾಂತಿ ಕದಡುವುದಿಲ್ಲ. ಎಲ್ಲರೂ ಜೊತೆಗೂಡಿ ಉತ್ಸವಗಳಲ್ಲಿ ಪಾಲ್ಗೊಂಡು ಸಂಭ್ರಮಿಸುವ ಸಂಪ್ರದಾಯವನ್ನು ಗ್ರಾಮಸ್ಥರು ರೂಢಿಸಿಕೊಂಡಿದ್ದಾರೆ.
ಇದನ್ನೂ ಓದಿ: 'ಭಾರತೀಯನೆಂದು ಸಾಬೀತುಪಡಿಸಲು ಬಲವಂತವಾಗಿ ಹಿಂದಿ ಕಲಿಯುವ ಅವಶ್ಯಕತೆಯಿಲ್ಲ'