ETV Bharat / bharat

ಮನುಷ್ಯ ಧರ್ಮವೇ ಎಲ್ಲಕ್ಕೂ ಮೇಲು.. ಮುಸ್ಲಿಮರಿಂದ ಹಿಂದೂವಿನ ಅಂತ್ಯಕ್ರಿಯೆ.. ಮನುಜಮತ ವಿಶ್ವಪಥ!

author img

By

Published : Apr 20, 2021, 2:53 PM IST

ಧರ್ಮ ಬದಿಗಿಟ್ಟು ಸಾಧ್ಯವಾದಷ್ಟು ಸಹಾಯ ಮಾಡುವುದು ಮನುಷ್ಯನಾಗಿ ತನ್ನ ಕರ್ತವ್ಯ. ಮನುಷ್ಯನಾಗಿ ಇದನ್ನ ತಾನು ಮಾಡಲೇಬೇಕು. ಹಾಗಾಗಿ, ಕ್ಯಾಮೆರಾ ಮುಂದೆ ಮಾತನಾಡಿ ಇದನ್ನ ಪ್ರಚಾರ ಪಡೆಯಲಾರೆ ಅಂತ ಅದನ್ನೂ ಕೂಡ ನಿಸ್ವಾರ್ಥ ಹೃದಯದ ರಫೀಕ್ ನಿರಾಕರಿಸಿದ್ದಾರೆ.. ಇಂಥವರ ಸಂಖ್ಯೆ ಕೋಟಿಗಳ ಲೆಕ್ಕದಲ್ಲಿ ಹೆಚ್ಚಲಿ. ಮನುಷ್ಯತ್ವವೇ ಮೇಲಾಗಲಿ..

coronacorona
ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಯುವಕರು

ನಾಗ್ಪುರ(ಮಹಾರಾಷ್ಟ್ರ) : ಕೊರೊನಾಗೆ ಹೆದರಿ ಹೃದಯಾಘಾತದಿಂದ ಸಾವನ್ನಪ್ಪಿದ ಹಿಂದೂ ವ್ಯಕ್ತಿಯ ಮೃತದೇಹದ ಅಂತ್ಯಸಂಸ್ಕಾರಕ್ಕೆ ಸ್ವತಃ ಸಂಬಂಧಿಕರೇ ಮುಂದೆ ಬರಲಿಲ್ಲ. ಆದರೆ, ಮುಸ್ಲಿಂ ಯುವಕರೇ ಹಿಂದೂವಿನ ಅಂತ್ಯ ಸಂಸ್ಕಾರ ಮಾಡಿ ಮನುಷ್ಯತ್ವವೇ ಎಲ್ಲಕ್ಕಿಂತ ದೊಡ್ಡದು ಅಂತ ತೋರಿಸಿ ಕೊಟ್ಟಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದ ಖಾರ್ಬಿ ಪ್ರದೇಶದ ನಿವಾಸಿ ಶ್ರೀರಾಮ್ ಬೆಲ್ಖೊಂಡೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಆದರೆ, ಇವರು ಕೋವಿಡ್​ನಿಂದ ಮೃತಪಟ್ಟಿದ್ದು ಎಂಬ ಊಹಾಪೂಹ ಸಂಬಂಧಿಕರದಲ್ಲಿತ್ತು. ಬೆಲ್ಖೊಂಡೆ ಪತ್ನಿ ಹಾಗೂ ಮಕ್ಕಳು ಬಿಟ್ಟರೆ ಕೊನೆಯ ಕ್ಷಣದಲ್ಲಿ ಯಾರೂ ಇರಲಿಲ್ಲ.

ಶವಸಂಸ್ಕಾರ ನಡೆಸಲು ಯಾರೂ ಮುಂದೆ ಬರದೆ ಬೆಳಗ್ಗೆ 11 ರಿಂದ 5 ಗಂಟೆ ಕಾಲ ಹೆಂಡತಿ-ಮಕ್ಕಳು ಯಾರಾದರೂ ಅಂತ್ಯ ಸಂಸ್ಕಾರಕ್ಕೆ ನೆರವಾಗ್ತಾರೆಂದು ಕಾಯ್ದಿದಾರೆ. ಯಾರೊಬ್ಬರೂ ಅವರ ಮನೆಯತ್ತ ಸುಳಿಯಲೇ ಇಲ್ಲ.

ಆದರೆ, ಈ ವೇಳೆ ಸಲ್ಮಾನ್ ರಫೀಕ್ ಎಂಬ ಯುವಕ ಮುಂದೆ ಬಂದಿದ್ದರು. ಅಷ್ಟೇ ಅಲ್ಲ, ಮಸೀದಿ ಸಮಿತಿಯಿಂದ ಸ್ನೇಹಿತರನ್ನು ಕರೆದುಕೊಂಡು ಬಂದು ಎಲ್ಲರೂ ಸೇರಿ ಸಕಲ ಹಿಂದೂ ಧರ್ಮದ ವಿಧಿ-ವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಹಿಂದೂ ವಿಧಾನಗಳು ತಿಳಿಯದ ಕಾರಣ ಓರ್ವ ಹಿಂದೂ ವ್ಯಕ್ತಿಯ ಸಹಾಯದೊಂದಿಗೆ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಧರ್ಮ ಬದಿಗಿಟ್ಟು ಸಾಧ್ಯವಾದಷ್ಟು ಸಹಾಯ ಮಾಡುವುದು ಮನುಷ್ಯನಾಗಿ ತನ್ನ ಕರ್ತವ್ಯ ಎಂದು ಸಲ್ಮಾನ್ ರಫೀಕ್ ಹೇಳಿದ್ದಾರೆ.

ಮನುಷ್ಯನಾಗಿ ಇದನ್ನ ತಾನು ಮಾಡಲೇಬೇಕಾದ ಕರ್ತವ್ಯ. ಹಾಗಾಗಿ, ಕ್ಯಾಮೆರಾ ಮುಂದೆಯೂ ಮಾತನಾಡಿ ಇದನ್ನ ಪ್ರಚಾರ ಪಡೆಯಲಾರೆ ಅಂತ ಅದನ್ನೂ ಕೂಡ ನಿಸ್ವಾರ್ಥ ಹೃದಯದ ರಫೀಕ್ ನಿರಾಕರಿಸಿದ್ದಾರೆ. ಇಂಥ ದುರಿತ ಕಾಲದಲ್ಲಿ ಪ್ರತಿಯೊಬ್ಬ ಮನುಷ್ಯರೂ ಧರ್ಮ, ಜಾತಿ ಎನ್ನದೇ ಒಬ್ಬರಿಗೊಬ್ಬರಾಗುವುದು ಮುಖ್ಯ. ರಫೀಕ್ ಮತ್ತು ಆತನ ಸ್ನೇಹಿತ ಸಂಖ್ಯೆ ನೂರಾಗಲಿ, ಸಾವಿರವಾಗಲಿ, ಕೋಟಿಗಳ ಲೆಕ್ಕದಲ್ಲಿ ಹೆಚ್ಚಲಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.