ETV Bharat / bharat

ಬುದ್ಧನ ಬಗ್ಗೆ ಪ್ರಭಾವಿತರಾಗಿ ಲೇಖನ ಬರೆದ ಮುಸ್ಲಿಂ ಕುಟುಂಬದ ಅಣ್ಣ-ತಂಗಿ - ಅಣ್ಣ ತಂಗಿಯ ಲೇಖನ ತಥಾಗತ ಪುಸ್ತಕದಲ್ಲಿ ಪ್ರಕಟ

ಬಿಹಾರದ ಮುಸ್ಲಿಂ ಕುಟುಂಬದ ಸಹೋದರ ಮತ್ತು ಸಹೋದರಿ ಬೌದ್ಧ ಧರ್ಮದಿಂದ ಪ್ರಭಾವಿತರಾಗಿದ್ದು, ಬುದ್ಧನ ಬಗ್ಗೆ ಸಂಶೋಧಿಸಿ 'ಬುದ್ಧ ಹೈ ಹೋ ಜಾನಾ' ಲೇಖನವನ್ನು ಬರೆದಿದ್ದಾರೆ.

Muslim brother and sister wrote article on Buddha  article on Buddha  Muslim brother and sister wrote poem on buddha  muslim brothers and sisters of gaya  Muslim siblings influenced by Lord Buddha  Muslim Love For Buddha  ಬುದ್ಧನ ಬಗ್ಗೆ ಪ್ರಭಾವಿತರಾಗಿ ಲೇಖನ ಬರೆದ ಮುಸ್ಲಿಂ ಕುಟುಂಬ  ಲೇಖನ ಬರೆದ ಮುಸ್ಲಿಂ ಕುಟುಂಬದ ಅಣ್ಣ ತಂಗಿ  ಸಹೋದರ ಮತ್ತು ಸಹೋದರಿ ಬೌದ್ಧ ಧರ್ಮದಿಂದ ಪ್ರಭಾವಿತ  ಬುದ್ಧ ಹೈ ಹೋ ಜಾನಾ  ಅಣ್ಣ ತಂಗಿಯ ಲೇಖನ ತಥಾಗತ ಪುಸ್ತಕದಲ್ಲಿ ಪ್ರಕಟ  ಜೀವನ ಕಥೆಯೊಂದಿಗೆ ಬರೆಯಲಾದ ಒಂದು ಚಿಕ್ಕ ಲೇಖನ
vಬುದ್ಧನ ಬಗ್ಗೆ ಪ್ರಭಾವಿತರಾಗಿ ಲೇಖನ ಬರೆದ ಮುಸ್ಲಿಂ ಕುಟುಂಬದ ಅಣ್ಣ-ತಂಗಿ
author img

By

Published : Feb 2, 2023, 8:54 AM IST

ಗಯಾ(ಬಿಹಾರ): ಇಲ್ಲಿನ ಮುಸ್ಲಿಂ ಕುಟುಂಬವೊಂದರ ಸಹೋದರ ಮತ್ತು ಸಹೋದರಿ ಇಬ್ಬರೂ ಕಾಲೇಜಿನಲ್ಲಿ ಪ್ರಾಧ್ಯಾಪಕರು ಭಗವಾನ್ ಬುದ್ಧನ ಆಲೋಚನೆಗಳಿಂದ ಪ್ರಭಾವಿತರಾಗಿದ್ದಾರೆ. ಅಣ್ಣ-ತಂಗಿಯರ ಸಮಾನತೆಯ ನಡುವೆ ಬುದ್ಧನ ಚಿಂತನೆಯಿಂದ ಪ್ರಭಾವಿತರಾದ ವಿಶಿಷ್ಟ ಕಥೆ ಇದು.

ಅಣ್ಣ-ತಂಗಿಯ ಲೇಖನ ತಥಾಗತ ಪುಸ್ತಕದಲ್ಲಿ ಪ್ರಕಟ: ಅಂತಾರಾಷ್ಟ್ರೀಯ ಬೌದ್ಧ ಉತ್ಸವವನ್ನು ಬೋಧಗಯಾದಲ್ಲಿ ಜನವರಿ 27 ರಿಂದ 29 ರವರೆಗೆ ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ತಥಾಗತ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ದರು. ಈ ಪುಸ್ತಕದಲ್ಲಿ ಈ ಮುಸ್ಲಿಂ ಕುಟುಂಬದ ಲೇಖನವೂ ಇದೆ. ಈ ಲೇಖನವು ಹೆಚ್ಚು ಮೆಚ್ಚುಗೆ ಪಡೆದಿದೆ. ಲೇಖನದ ಹೆಸರು 'ಬುದ್ಧ ಹೈ ಹೋ ಜಾನಾ'. ಈ ಲೇಖನವನ್ನು ಮೊಹಮ್ಮದ್ ಡ್ಯಾನಿಶ್ ಮಶೂರ್ ಮತ್ತು ಅವರ ಸಹೋದರಿ ಡಾ. ಝಕಿಯಾ ಮಸ್ರೂರ್ ಹೆಸರಿನಲ್ಲಿ ಪ್ರಕಟಿಸಲಾಗಿದೆ.

ಇಡೀ ಕುಟುಂಬವು ಬುದ್ಧನಿಂದ ಪ್ರಭಾವಿತ: ಇಡೀ ಮುಸ್ಲಿಂ ಕುಟುಂಬವು ಭಗವಾನ್ ಬುದ್ಧ ಮತ್ತು ಅವನ ಬೋಧನೆಗಳಿಂದ ಪ್ರಭಾವಿತವಾಗಿದೆ. ಇದರ ಕಥೆಯೂ ವಿಶಿಷ್ಟವಾಗಿದೆ. ಲೇಖನ ಬರೆದ ಡಾ. ಡ್ಯಾನಿಶ್ ಮಸ್ರೂರ್ ಮತ್ತು ಡಾ.ಝಕಿಯಾನ್ ಮಸ್ರೂರ್ ಒಡಹುಟ್ಟಿದವರು. ಅವರು ಬುದ್ಧನಿಂದ ಪ್ರಭಾವಿತನಾದ ಕಥೆಯೂ ವಿಶಿಷ್ಟವಾಗಿದೆ. ಡ್ಯಾನಿಶ್ ಜನಿಸಿದಾಗ ಅಂದು ಬುಧವಾರ ಆಗಿದ್ದು, ನನಗೆ ಬುದ್ಧನಂತೆ ಕಂಡನು ಎಂದು ತಾಯಿ ರೋಷನ್ ಜಹಾನ್ ಹೇಳಿದರು. ಮನೆಯವರೆಲ್ಲರೂ ಡ್ಯಾನಿಶ್​ನನ್ನು ಬುದ್ಧ.. ಬುದ್ಧ.. ಎಂದು ಕರೆಯುತ್ತಿದ್ದೆವು. ಆದರೆ, ಸಹೋದರಿ ಝಕಿಯಾ ಮಸ್ರೂರ್ ಅವರನ್ನು ಬುದ್ಧನ ಸಹೋದರಿ ಎಂದು ಕರೆಯುತ್ತಿದ್ದೆವು. ಬುದ್ಧನ ಹೆಸರನ್ನು ಪದೇ ಪದೇ ಕರೆಯುವ ಮೂಲಕ, ಸಹೋದರರು ಮತ್ತು ಸಹೋದರಿಯರು ಭಗವಾನ್ ಬುದ್ಧ ಮತ್ತು ಅವನ ಬೋಧನೆಗಳ ಬಗ್ಗೆ ಬಹಳಷ್ಟು ಬಾಂಧವ್ಯವನ್ನು ಬೆಳೆಸಿಕೊಂಡರು ಮತ್ತು ಕ್ರಮೇಣ ಭಗವಾನ್ ಬುದ್ಧನಿಂದ ಹೆಚ್ಚು ಪ್ರಭಾವಿತರಾದರು ಎಂದು ಅವರ ತಾಯಿ ಮಾತಾಗಿದೆ.

ಜೀವನ ಕಥೆಯೊಂದಿಗೆ ಬರೆಯಲಾದ ಒಂದು ಚಿಕ್ಕ ಲೇಖನ: ಶಿಕ್ಷಣತಜ್ಞ ಕುಟುಂಬದಿಂದ ಬಂದ ಈ ಇಬ್ಬರು ಒಡಹುಟ್ಟಿದವರು ಬೌದ್ಧ ತತ್ವಶಾಸ್ತ್ರ ಪದವೀದರರು. ಈ ಇಬ್ಬರು ಭಗವಾನ್ ಬುದ್ಧ ಮತ್ತು ಅವನ ಬೋಧನೆಗಳ ಬಗ್ಗೆ ಕಲಿತರು. ಡಾ. ಡ್ಯಾನಿಶ್ ಮಸ್ರೂರ್ ಮತ್ತು ಡಾ. ಝಾಕಿಯಾ ಮಸ್ರೂರ್, ಇಬ್ಬರೂ ವೃತ್ತಿಯಲ್ಲಿ ಸಂಶೋಧಕರು. ಭಗವಾನ್ ಬುದ್ಧನಿಂದ ಹೆಚ್ಚು ಪ್ರಭಾವಿತರಾಗಿದ್ದರು. ಆದ್ದರಿಂದ ಅವರು ಬುದ್ಧನ ಬಗ್ಗೆ ಸಾಕಷ್ಟು ತಿಳಿದುಕೊಂಡರು ಮತ್ತು ನಂತರ ಅವರು ಬುದ್ಧನ ಬಗ್ಗೆ ಪುಸ್ತಕವನ್ನು ಬರೆಯಲು ನಿರ್ಧರಿಸಿದರು. ಈ ಅನುಕ್ರಮದಲ್ಲಿ ಬೌದ್ಧ ಉತ್ಸವದ ಕುರಿತು ಪ್ರಕಟವಾಗಲಿರುವ ತಥಾಗತ ಪುಸ್ತಕದ ಬಗ್ಗೆ ಮಾಹಿತಿ ದೊರೆತಾಗ ಡಾ.ಡ್ಯಾನಿಶ್ ಮಸ್ರೂರ್ ಅವರು ತಮ್ಮ ಸಹೋದರಿಯ ಸಹಾಯದಿಂದ ಬುದ್ಧ ಭಗವಾನ್ ಬುದ್ಧನ ಜೀವನ ಕಥೆಯ ಜೊತೆಗೆ ಒಂದು ಸಣ್ಣ ಲೇಖನವನ್ನು ಸಹ ಬರೆದಿದ್ದಾರೆ. ಅದಕ್ಕೆ 'ಬುದ್ಧ ಹೈ ಹೋ ಜಾನಾ' ಎಂದು ಹೆಸರಿಸಲಾಗಿದೆ.

ಭಗವಾನ್ ಬುದ್ಧನ ಬೋಧನೆಗಳು ಅತ್ಯಮೂಲ್ಯವಾಗಿವೆ: ಭಗವಾನ್ ಬುದ್ಧನ ಬೋಧನೆಗಳನ್ನು ನಾವು ಅನುಸರಿಸಿದರೆ ಜೀವನ ಯಶಸ್ವಿಯಾಗುತ್ತದೆ. ಭಗವಾನ್ ಬುದ್ಧನ ಬೋಧನೆಗಳು ಅತ್ಯಮೂಲ್ಯವಾಗಿವೆ. ಭಗವಾನ್ ಬುದ್ಧ ಇಂದಿನ ಪರಿಸರದಲ್ಲಿ ಪ್ರಸ್ತುತವಾಗಿದೆ ಎಂದು ಡ್ಯಾನಿಶ್ ಹೇಳುತ್ತಾರೆ. ಮತ್ತೊಂದೆಡೆ, ಝಕಿಯಾ ಮಸ್ರೂರ್ ಅವರು ಭಗವಾನ್ ಬುದ್ಧನಿಂದ ಹೆಚ್ಚು ಪ್ರಭಾವಿತಳಾಗಿದ್ದೇನೆ. ನಾನು ಮತ್ತು ನನ್ನ ಸಹೋದರ ಒಟ್ಟಿಗೆ ಸಂಶೋಧನೆ ಮಾಡಿದ್ದೇವೆ. ಯಾವುದೇ ಕೆಲಸವನ್ನು ಒಟ್ಟಿಗೆ ಸಮಾಲೋಚಿಸಿದ ನಂತರವೇ ಮಾಡಲಾಗುತ್ತದೆ ಮತ್ತು ಭಗವಾನ್ ಬುದ್ಧನ ಈ ಲೇಖನವನ್ನು ಇಬ್ಬರೂ ಒಟ್ಟಿಗೆ ಬರೆದಿದ್ದೇವೆ. ಇದು ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾಗಿದೆ. ಈ ಲೇಖನದಲ್ಲಿ ನಮ್ಮಿಬ್ಬರ ಹೆಸರನ್ನು ಬರೆಯಲಾಗಿದೆ ಎಂದು ಝಕಿಯಾ ಹೇಳುತ್ತಾರೆ. ಹೀಗೆ ಒಡಹುಟ್ಟಿದವರು ಬುದ್ಧನ ತತ್ವಗಳಿಂದ ಪ್ರಭಾವಿತರಾದ ಕಥೆ ಇದು.

ಓದಿ: ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ ನಮ್ಮ ಆದರ್ಶ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.