ಗೋರಖ್‌ಪುರ: ಪ್ರೇಮ ವಿವಾದದಲ್ಲಿ ಮೂವರನ್ನು ಹರಿತವಾದ ಆಯುಧಗಳಿಂದ ಹತ್ಯೆ ಮಾಡಲಾಗಿರುವ ಘಟನೆ ಸೋಮವಾರ ತಡರಾತ್ರಿ ಖೋರಬಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಗರದಲ್ಲಿ ತ್ರಿವಳಿ ಕೊಲೆ ಪ್ರಕರಣ ಸಂಚಲನ ಮೂಡಿಸಿದೆ.
ಇಲ್ಲಿನ ಬಂಗಲೆ ಚೌಕದಲ್ಲಿ ವಾಸವಿದ್ದ ಗಾಮ ನಿಶಾದ್ ಅವರು ರಾಯಗಂಜ್ ನಿವಾಸಿ ರಾಮ ನಿಶಾದ್ ಅವರ ಸಹೋದರನ ಮಗಳ ಮದುವೆಯಲ್ಲಿ ನಡೆಯುವ ಶಾಸ್ತ್ರವೊಂದರ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು. ಮನೆಯಿಂದ ಸುಮಾರು 800 ಮೀಟರ್ ದೂರದಲ್ಲಿ ಅಪರಿಚಿತ ದುಷ್ಕರ್ಮಿಗಳು ಅವರನ್ನು ದಾರಿಯಲ್ಲಿ ಅಡ್ಡಗಟ್ಟಿ ಗಾಮ ನಿಶಾದ್, ಪತ್ನಿ ಸಂಜು ಮತ್ತು ಮಗಳು ಪ್ರೀತಿಯನ್ನು ಹರಿತವಾದ ಆಯುಧದಿಂದ ಹತ್ಯೆ ಮಾಡಿ ಪರಾರಿಯಾಗಿದ್ದರು.
ಓದಿ: ಬಜರಂಗದಳಕ್ಕಾಗಿ ಕೆಲಸ ಮಾಡ್ತಿಯಾ ಎಂದು ಕೊಲೆ ಬೆದರಿಕೆ: ಮೂವರ ಬಂಧನ..
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಎಡಿಜಿ ಅಖಿಲ್ ಕುಮಾರ್, ಡಿಐಜಿ ಜೆ.ರವೀಂದರ್ ಗೌಡ್, ಎಸ್‌ಎಸ್‌ಪಿ ಡಾ.ವಿಪಿನ್ ತಾಡಾ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಅಪರಾಧ ದಳ, ಬೆರಳಚ್ಚು ಮತ್ತು ಶ್ವಾನದಳದ ತಂಡ ತನಿಖೆ ಆರಂಭಿಸಿತ್ತು. ಬಳಿಕ ಪೊಲೀಸರು ಮೂವರ ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.
ಗಾಮ ನಿಶಾದ್ ಅವರು ಕುಟುಂಬ ಸಮೇತ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳುತ್ತಿದ್ದರು. ಈ ವೇಳೆ, ಅಪರಿಚಿತ ದುಷ್ಕರ್ಮಿಗಳು ಕುಟುಂಬದ ಮೂವರನ್ನು ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ವಿಷಯ ಪ್ರೇಮ ಪ್ರಕರಣಕ್ಕೆ ಸಂಬಂಧಿಸರಬಹುದಾದ ಅನುಮಾನ ಮೂಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ಅಲೋಕ್ ಪಾಸ್ವಾನ್ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ಮತ್ತು ತನಿಖೆ ಬಳಿಕ ಸತ್ಯಾಸತ್ಯೆತೆ ತಿಳಿಯಲಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಪಿನ್ ತಾಡಾ ತಿಳಿಸಿದ್ದಾರೆ.