ಗುಮ್ಲಾ(ಜಾರ್ಖಂಡ್): ಸದರ್ ಪೊಲೀಸ್ ಠಾಣಾ ವ್ಯಾಪ್ತಿಯ ಕೊಯ್ನಾರ ಬರ್ಕಾ ಟೋಲಿ ಗ್ರಾಮದಲ್ಲಿ 55 ವರ್ಷದ ಮಧ್ಯವಯಸ್ಕನನ್ನು ಗ್ರಾಮದ 10 ರಿಂದ 12 ಜನರು ಸೇರಿಕೊಂಡು ವಾಮಾಚಾರದ ಆರೋಪದಲ್ಲಿ ದೊಣ್ಣೆ ಮತ್ತು ಕಲ್ಲಿನಿಂದ ಹೊಡೆದು ಕೊಂದಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಗುಮ್ಲಾ ಪೊಲೀಸ್ ಠಾಣೆಯ ಪ್ರಭಾರಿ ಮನೋಜ್ ಕುಮಾರ್ ಅವರು ಸ್ಥಳಕ್ಕೆ ತಲುಪಿ ಘಟನೆ ಪರಿಶೀಲಿಸಿದ್ದಾರೆ. ಹಾಗೆ ಮೃತದೇಹವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಗ್ರಾಮದ 8 ಜನರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ಕುರಿತು ಮೃತರ ಸಹೋದರ ಮಾತನಾಡಿ, ಅಂಬರದಿ ಮಾರುಕಟ್ಟೆಯಿಂದ ತರಕಾರಿ ಮಾರಾಟ ಮಾಡಿ ಹಿಂದಿರುಗುತ್ತಿದ್ದಾಗ ಗ್ರಾಮದ ಮಹಿಳೆಯೊಂದಿಗೆ ಯಾವುದೋ ವಿಚಾರಕ್ಕೆ ಸಹೋದರ ಜಗಳವಾಡಿದ್ದಾನೆ. ಇದಾದ ನಂತರ ಮಹಿಳೆ ಅಲ್ಲಿಗೆ ಗ್ರಾಮದ ಜನರನ್ನು ಒಟ್ಟುಗೂಡಿಸಿ ವಾಮಾಚಾರದ ಆರೋಪದಲ್ಲಿ ದೊಣ್ಣೆ, ಕಲ್ಲುಗಳಿಂದ ಅಮಾನುಷವಾಗಿ ಹೊಡೆದಿದ್ದಾರೆ. ಎರಡು ವರ್ಷಗಳಿಂದ ನನ್ನ ಸಹೋದರನ ಮೇಲೆ ವಾಮಾಚಾರದ ಆರೋಪವಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಈ ಮ್ಯಾಜಿಕ್ ಬಾವಿಯಲ್ಲಿದೆ ಈ ವಿಶೇಷತೆ: ತ್ವರಿತ ನೀರು ಪರುಪೂರ್ಣ ಕಾರ್ಯ ವಿಧಾನಕ್ಕೆ ಮುಂದಾದ ಐಐಟಿ ಮದ್ರಾಸ್
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೊಲೆಯ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.