ETV Bharat / bharat

ವೇಶ್ಯಾವಾಟಿಕೆ ಟೂರಿಸಂ ದಂಧೆ: ಇಬ್ಬರು ಆರೋಪಿಗಳು ಅಂದರ್​ - ಮುಂಬೈ ಪೊಲೀಸರು

ವೇಶ್ಯಾವಾಟಿಕೆ ದಂಧೆಯ ಆರೋಪಿಗಳು ಗಿರಾಕಿಗಳನ್ನು ಪತ್ತೆಹಚ್ಚುತ್ತಿದ್ದರು. ಗಿರಾಕಿಗಳಿಗೆ ಯುವತಿಯರ ಫೋಟೋಗಳನ್ನು ಕಳಿಸಿ ಡೀಲ್ ಕುದುರಿಸುತ್ತಿದ್ದರು. ಗಿರಾಕಿ ಬುಕ್ ಮಾಡಿದ ಪ್ರದೇಶಕ್ಕೆ ಅಥವಾ ನಗರಕ್ಕೆ ಯುವತಿಯರು ತೆರಳಬೇಕಿತ್ತು.

Chhatrapati Shivaji Maharaj International Airport Mumbai
ಗಿರಾಕಿಗಳ ಜೊತೆ ಯುವತಿಯರ ಪ್ರವಾಸ: ಟೂರಿಸಂ ವೇಶ್ಯಾವಾಟಿಕೆ ಜಾಲದ ಆರೋಪಿಗಳು ಅಂದರ್​
author img

By

Published : Oct 21, 2021, 12:54 AM IST

Updated : Oct 21, 2021, 2:18 AM IST

ಮುಂಬೈ, ಮಹಾರಾಷ್ಟ್ರ: ವೇಶ್ಯಾವಾಟಿಕೆ ಟೂರಿಸಂ ದಂಧೆಯನ್ನು ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೇದಿಸಲಾಗಿದೆ. ಕಾರ್ಯಾಚರಣೆ ನಡೆಸಿದ ಮುಂಬೈ ಪೊಲೀಸ್​​​ನ ಅಪರಾಧ ವಿಭಾಗದಿಂದ ಇಬ್ಬರು ಮಹಿಳಾ ಬ್ರೋಕರ್​​ಗಳನ್ನು ಬಂಧಿಸಲಾಗಿದೆ ಎಂದು ಮುಂಬೈ ಕ್ರೈಮ್ ಬ್ರಾಂಚ್​ನ ಡಿಸಿಪಿ ದತ್ತ ನಾವಡೆ ಮಾಹಿತಿ ನೀಡಿದ್ದಾರೆ.

ಯುವತಿಯರನ್ನು ಬಲವಂತವಾಗಿ ಈ ದಂಧೆಯಲ್ಲಿ ತಳ್ಳಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅತ್ಯಂತ ಮುಖ್ಯವಾಗಿ ಈ ವೇಶ್ಯಾವಾಟಿಕೆ ಟೂರಿಸಂ ದಂಧೆಯಲ್ಲಿರುವ ಯುವತಿಯರು ತಮ್ಮ ಗಿರಾಕಿಗಳೊಡನೆ ಪ್ರವಾಸ ಹೊರಡಬೇಕಿತ್ತು.

ಮುಂಬೈ ಕ್ರೈಮ್ ಬ್ರಾಂಚ್​​ನ 7 ಯುನಿಟ್ ಈ ಕುರಿತು ವೇಶ್ಯಾವಾಟಿಕೆ ದಂಧೆಯಲ್ಲಿ ಬಂಧಿತಳಾಗಿದ್ದ ಮಹಿಳೆಯೋರ್ವಳಿಂದ 2020ರಲ್ಲಿ ಮಾಹಿತಿ ಪಡೆದಿತ್ತು. ವಿಭಿನ್ನವಾಗಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಆಕೆ ಹೇಳಿಕೊಂಡಿದ್ದಳು.

ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಮಹಿಳಾ ಆರೋಪಿಗಳನ್ನು ಬಂಧಿಸಿ, ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಲ್ಪಟ್ಟಿದ್ದ ಇನ್ನಿಬ್ಬರು ಮಹಿಳೆಯರನ್ನು ರಕ್ಷಿಸಿದ್ದರು. ಬಂಧಿತರ ವಿರುದ್ಧ ಐಪಿಸಿಯ ಕೆಲವು ಸೆಕ್ಷನ್​ಗಳು ಹಾಗೂ PITA (The Immoral Traffic (Prevention) Act) ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

2 ದಿನಕ್ಕೆ 50 ಸಾವಿರ ರೂಪಾಯಿ..

ಇಬ್ಬರೂ ಆರೋಪಿಗಳು ಗಿರಾಕಿಗಳನ್ನು ಪತ್ತೆಹಚ್ಚುತ್ತಿದ್ದರು. ಗಿರಾಕಿಗಳಿಗೆ ಯುವತಿಯರ ಫೋಟೋಗಳನ್ನು ಕಳಿಸಿ ಡೀಲ್ ಕುದುರಿಸುತ್ತಿದ್ದರು. ಗಿರಾಕಿ ಬುಕ್ ಮಾಡಿದ ಪ್ರದೇಶಕ್ಕೆ ಅಥವಾ ನಗರಕ್ಕೆ ಯುವತಿಯರು ತೆರಳಬೇಕಿತ್ತು.

ಎರಡು ದಿನಕ್ಕೆ 50 ಸಾವಿರ ರೂಪಾಯಿಯನ್ನು ನಿಗದಿ ಮಾಡಲಾಗಿತ್ತು. ಯುವತಿಯರಿಂದ ಶೇಕಡಾ 20ರಷ್ಟು ಕಮಿಷನ್​ ಅನ್ನು ದಂಧೆಯ ಕಿಂಗ್​ಪಿನ್​ಗಳಿಗೆ ನೀಡಬೇಕಾಗಿತ್ತು. ಇಂಥಹ ದಂಧೆಯಲ್ಲಿ ಪಾಲ್ಗೊಂಡಿದ್ದ ಆರೋಪಿಗಳಾದ ಆಬ್ರುನ್ ಅಮ್ಜದ್ ಖಾನ್ ಅಲಿಯಾಸ್ ಸಾರಾ ಮತ್ತು ವರ್ಷಾ ದಯಾಲಾಲ್ ಎಂಬುವವರನ್ನ ಬಂಧಿಸಲಾಗಿದೆ. ಈ ಪ್ರಕರಣವನ್ನು ಭೇದಿಸಲು ಮುಂಬೈ ಪೊಲೀಸರು ನಕಲಿ ಗಿರಾಕಿಯನ್ನು ಸೃಷ್ಟಿಸಿದ್ದರು.

Last Updated : Oct 21, 2021, 2:18 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.