ETV Bharat / bharat

ಆರ್‌ಡಿಎಕ್ಸ್ ತುಂಬಿದ ಟ್ಯಾಂಕರ್​​ನೊಂದಿಗೆ ಇಬ್ಬರು ಪಾಕ್​ ಪ್ರಜೆಗಳು ಗೋವಾಕ್ಕೆ ಪ್ರಯಾಣ: ಮುಂಬೈ ಪೊಲೀಸರಿಗೆ ಬೆದರಿಕೆ ಕರೆ - ಮುಂಬೈ ಪೊಲೀಸರು

ಮಹಾರಾಷ್ಟ್ರ ರಾಜಧಾನಿ ಮುಂಬೈ ಪೊಲೀಸರಿಗೆ ಮತ್ತೊಂದು ಬೆದರಿಕೆ ಕರೆ ಬಂದಿದೆ. ಆರ್‌ಡಿಎಕ್ಸ್ ತುಂಬಿದ ಟ್ಯಾಂಕರ್​​ನೊಂದಿಗೆ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದಾರೆ ಎಂದು ಅಪರಿಚಿತ ವ್ಯಕ್ತಿ ಕರೆ ಮಾಡಿದ್ದಾನೆ.

Mumbai Police receives threat call; tanker filled with RDX, 2 Pakistani nationals heading to Goa
ಆರ್‌ಡಿಎಕ್ಸ್ ತುಂಬಿದ ಟ್ಯಾಂಕರ್​​ನೊಂದಿಗೆ ಇಬ್ಬರು ಪಾಕ್​ ಪ್ರಜೆಗಳು ಗೋವಾಕ್ಕೆ ಪ್ರಯಣ: ಮುಂಬೈ ಪೊಲೀಸರಿಗೆ ಬೆದರಿಕೆ ಕರೆ
author img

By

Published : Jul 23, 2023, 9:49 PM IST

ಮುಂಬೈ (ಮಹಾರಾಷ್ಟ್ರ): ಆರ್‌ಡಿಎಕ್ಸ್ ತುಂಬಿದ ಟ್ಯಾಂಕರ್​​ನೊಂದಿಗೆ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದಾರೆ ಎಂಬ ಬೆದರಿಕೆ ಕರೆಯೊಂದು ಮಹಾರಾಷ್ಟ್ರ ರಾಜಧಾನಿ ಮುಂಬೈ ಪೊಲೀಸರಿಗೆ ಬಂದಿದೆ. ಇದರಿಂದ ಕೂಡಲೇ ಪೊಲೀಸರು ಅಲರ್ಟ್​​ ಆಗಿದ್ದು, ಕಟ್ಟೆಚ್ಚರ ವಹಿಸಿದ್ದಾರೆ.

ಮುಂಬೈನಿಂದ ಗೋವಾಕ್ಕೆ ಆರ್‌ಡಿಎಕ್ಸ್ ತುಂಬಿದ ಬಿಳಿ ಟ್ಯಾಂಕರ್​ವೊಂದು ಹೋಗುತ್ತಿದೆ ಎಂದು ಮಧ್ಯರಾತ್ರಿ 1 ಗಂಟೆಗೆ ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಬಂದಿದೆ. ಈ ಟ್ಯಾಂಕರ್​​ನಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳೂ ಇದ್ದಾರೆ ಎಂದು ಕರೆ ಮಾಡಿದವರು ತಿಳಿಸಿದ್ದಾರೆ. ಆಗ ಕೂಡಲೇ ಮುಂಬೈ ಪೊಲೀಸರು ತಕ್ಷಣವೇ ಮಹಾರಾಷ್ಟ್ರ ಎಟಿಎಸ್ ಮತ್ತು ಗೋವಾ ಪೊಲೀಸ್ ಕಂಟ್ರೋಲ್ ರೂಂಗೆ ಸಂದೇಶ ರವಾನಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲ, ಕರೆ ಮಾಡಿದ ವ್ಯಕ್ತಿ ತನ್ನ ಹೆಸರನ್ನು ಪಾಂಡೆ ಎಂದು ಹೇಳಿಕೊಂಡಿದ್ದಾನೆ. ಪೊಲೀಸರಿಗೆ ಈ ಬೆದರಿಕೆ ಕರೆ ಬಂದ ಬಳಿಕ ರತ್ನಗಿರಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೇ, ರತ್ನಗಿರಿ ಬಳಿಯ ಬಂಡ್ರಿ ಎಂಬಲ್ಲಿ ಶಂಕಿತ ಟ್ಯಾಂಕರ್​ಅನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ, ಟ್ಯಾಂಕರ್‌ನಲ್ಲಿ ಅನುಮಾನಾಸ್ಪದ ವಸ್ತು ಯಾವುದೂ ಪತ್ತೆಯಾಗಿಲ್ಲ. ಈ ಟ್ಯಾಂಕರ್​ನಲ್ಲಿ ಪಾಲಿಥಿನ್ ತಯಾರಿಸುವ ಸಾಮಗ್ರಿಗಳಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸೀಮಾ ಹೈದರ್ ಪಾಕಿಸ್ತಾನಕ್ಕೆ ಮರಳಿ ಹೋಗದಿದ್ದರೆ, 26/11 ರೀತಿ ದಾಳಿ ಮಾಡುವ ಬೆದರಿಕೆ ಹಾಕಿದ ಅಪರಿಚಿತ ವ್ಯಕ್ತಿ..

ತಪಾಸಣೆ ಕಾರ್ಯದ ವೇಳೆ ಸಂಗಮೇಶ್ವರದಲ್ಲಿ ಶಂಕಿತ ಟ್ಯಾಂಕರ್ ನಿಲ್ಲಿಸಲಾಗಿತ್ತು. ನಂತರ ಬಾಂಬ್ ನಿಷ್ಕ್ರಿಯ ದಳದಿಂದ ಕೂಲಂಕಷವಾಗಿ ತನಿಖೆ ನಡೆಸಲಾಯಿತು. ತಪಾಸಣೆ ವೇಳೆ ಟ್ಯಾಂಕರ್‌ನಲ್ಲಿ ಬಾಂಬ್‌ನಂತಹ ವಸ್ತುಗಳು ಅಥವಾ ಸ್ಫೋಟಕಗಳು ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಈ ಬೆದರಿಕೆ ಕರೆ ಮಾಡಿದ ವ್ಯಕ್ತಿಯ ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಈ ಹಿಂದೆ ಜುಲೈ 13ರಂದು ಕೂಡ ಮುಂಬೈ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದ. 26/11ರ ದಾಳಿಯಂತೆಯೇ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ. ಈ ಬಗ್ಗೆ ಆಗ ಮಾಹಿತಿ ನೀಡಿದ್ದ ಮುಂಬೈ ಪೊಲೀಸರು, ಬೆದರಿಕೆ ಕರೆ ಮಾಡಿದ್ದ ವ್ಯಕ್ತಿ ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಪಾಕಿಸ್ತಾನಕ್ಕೆ ಹಿಂತಿರುಗದಿದ್ದರೆ, 26/11ರ ಮಾದರಿಯ ಭಯೋತ್ಪಾದಕ ದಾಳಿಗೆ ಸಿದ್ಧರಾಗುವುದಾಗಿ ಬೆದರಿಕೆವೊಡ್ಡಿದ್ದ ಎಂದು ತಿಳಿಸಿದ್ದರು. ಈ ಕುರಿತು ಅಪರಿಚಿತ ವ್ಯಕ್ತಿಯ ವಿರುದ್ಧ ವರ್ಲಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 509 (2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್‌ ಗಡ್ಕರಿಗೆ ಬೆದರಿಕೆ ಹಾಕಿದ್ದ ಆರೋಪಿ ನಾಗ್ಪುರ್​ ಪೊಲೀಸರ ವಶಕ್ಕೆ.. ಕೈದಿಗೆ ಉಗ್ರರ ಜೊತೆ ಲಿಂಕ್ ಕುರಿತು ತನಿಖೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.