ETV Bharat / bharat

ಮುಂಬೈನ ಮಂತ್ರಾಲಯಕ್ಕೆ ಹುಸಿ ಬಾಂಬ್ ಸಂದೇಶ: ಓರ್ವನ ಬಂಧನ - ಮರೈನ್ ಡ್ರೈವ್ ಪೊಲೀಸರಿಗೆ ಸಂದೇಶ

ಹುಸಿಬಾಂಬ್ ಬಾಂಬ್ ಸಂದೇಶ ಕಳಿಸಿದ್ದ ಆರೋಪದಲ್ಲಿ ಓರ್ವ ವ್ಯಕ್ತಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

Mumbai Police receives mail citing bomb threat in Mumbai's Mantralaya
ಮುಂಬೈನ ಮಂತ್ರಾಲಯಕ್ಕೆ ಹುಸಿ ಬಾಂಬ್ ಸಂದೇಶ: ಓರ್ವನ ಬಂಧನ
author img

By

Published : Jun 22, 2021, 7:51 AM IST

ಮುಂಬೈ(ಮಹಾರಾಷ್ಟ್ರ): ರಾಜ್ಯದ ಆಡಳಿತಾತ್ಮಕ ಮುಖ್ಯ ಕಚೇರಿಗಳನ್ನು ಒಳಗೊಂಡ ಮುಂಬೈನ ಮಂತ್ರಾಲಯಕ್ಕೆ ಬಾಂಬ್ ಇಟ್ಟಿರುವುದಾಗಿ ಇಮೇಲ್ ಮೂಲಕ ಬೆದರಿಕೆ ಸಂದೇಶವೊಂದು ಬಂದಿದ್ದು, ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಮರೈನ್ ಡ್ರೈವ್ ಪೊಲೀಸರಿಗೆ ಇ-ಮೇಲ್ ಮೂಲಕ ಸಂದೇಶ ಬಂದಿದ್ದು, ಪೊಲೀಸ್ ಇನ್ಸ್​ಪೆಕ್ಟರ್ ವಿಶ್ವನಾಥ್ ಕೊಲೆಕಾರ್ ಈ ಬಗ್ಗೆ ದೃಢಪಡಿಸಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡಿದ್ದು ಇದೊಂದು ಹುಸಿ ಬಾಂಬ್ ಕರೆ ಎಂದು ತಿಳಿದುಬಂದಿದೆ.

Anonymous mail to Marine Drive police station about the bomb placed in the ministry.
ಮುಂಬೈನ ಮಂತ್ರಾಲಯ

ಈ ಸಂಬಂಧ ಪುಣೆ ಪೊಲೀಸರು ವ್ಯಕ್ತಿಯೋರ್ವನನ್ನು ಘೋರ್ಪಾಂಡಿ ಪ್ರದೇಶದಲ್ಲಿ ಬಂಧಿಸಿದ್ದಾರೆ. ಶೀಘ್ರದಲ್ಲೇ ಮುಂಬೈ ಪೊಲೀಸರಿಗೆ ಆರೋಪಿಯನ್ನು ಹಸ್ತಾಂತರ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಲಕ್ಷದ್ವೀಪ ಕರ್ನಾಟಕ ಹೈಕೋರ್ಟ್ ವ್ಯಾಪ್ತಿಗೆ ಒಳಪಡುತ್ತಾ? ಅಧಿಕಾರಿಗಳು ಹೇಳೋದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.