ಮುಂಬೈ : ಎನ್ಸಿಬಿ ಅಧಿಕಾರಿಗಳು ಮುಂಬೈನ ಹಲವು ಪ್ರದೇಶಗಳಲ್ಲಿ ದಾಳಿ ನಡೆಸಲು ಆರಂಭಿಸಿದ್ದಾರೆ. ಮುಂಬೈ ಏರ್ಪೋರ್ಟ್ನಿಂದ ಆಸ್ಟ್ರೇಲಿಯಾಗೆ ಕೋರಿಯರ್ ಮೂಲಕ ಸಾಗಿಸಲಾಗುತ್ತಿದ್ದ ಎಂಡಿ ಡ್ರಗ್ಸ್ ಅನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಓರ್ವ 30 ವರ್ಷದ ವ್ಯಕ್ತಿಯನ್ನು ಎನ್ಸಿಬಿ ಬಂಧಿಸಿದೆ. ಆರೋಪಿಯನ್ನ ಕಚೇರಿಗೆ ಕರೆತಂದು ತೀವ್ರ ವಿಚಾರಣೆ ನಡೆಸುತ್ತಿದೆ. ಕೋರಿಯರ್ನ ಮೇಲೆ ಓರ್ವ ವ್ಯಕ್ತಿಯ ಹೆಸರು ಮತ್ತು ವಿಳಾಸ ಇದ್ದು, ತನಿಖೆ ಮುಂದುವರೆಯುತ್ತಿದೆ.
ಇದನ್ನೂ ಓದಿ: Omicron: ಮುಂಬೈನಲ್ಲಿ ಸೆಕ್ಷನ್ 144 ಜಾರಿ.. ದೇಶದಲ್ಲಿ ಕೋವಿಡ್ ಸಕ್ರಿಯ ಪ್ರಕರಣ ಇಳಿಕೆ