ETV Bharat / bharat

ಮಿ.ಇಂಡಿಯಾ ಬಾಡಿ ಬಿಲ್ಡರ್ ಆತ್ಮಹತ್ಯಾ ಯತ್ನ: ಬಾಲಿವುಡ್ ನಟ ಸಾಹಿಲ್ ಖಾನ್ ವಿರುದ್ಧ ಕಿರುಕುಳ ಆರೋಪ - ಮನೋಜ್ ಪಾಟೀಲ್ ಡೆತ್​ ನೋಟ್

ಮಿಸ್ಟರ್ ಇಂಡಿಯಾ ಬಾಡಿ ಬಿಲ್ಡರ್ ಮನೋಜ್ ಪಾಟೀಲ್ ಡೆತ್​ ನೋಟ್ ಬರೆದಿಟ್ಟು, ಆತ್ಮಹತ್ಯೆಗೆ ಯತ್ನಿಸಿದ್ದು, ಈಗ ಅವರಿಗೆ ಮುಂಬೈನ ಕೂಪರ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

mumbai-mr-india-bodybuilder-manoj-patil-attempted-suicide-accusing-actor-sahil-khan
ಮಿ.ಇಂಡಿಯಾ ಬಾಡಿ ಬಿಲ್ಡರ್ ಆತ್ಮಹತ್ಯಾ ಯತ್ನ: ಬಾಲಿವುಡ್ ನಟ ಸಾಹಿಲ್ ಖಾನ್ ವಿರುದ್ಧ ಕಿರುಕುಳದ ಆರೋಪ
author img

By

Published : Sep 16, 2021, 1:22 PM IST

ಮುಂಬೈ: ಮಿಸ್ಟರ್ ಇಂಡಿಯಾ ಬಾಡಿ ಬಿಲ್ಡರ್ ಮನೋಜ್ ಪಾಟೀಲ್ ಡೆತ್​ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದು, ಡೆತ್​​ ನೋಟ್​​ನಲ್ಲಿ ಬಾಲಿವುಡ್​ ನಟ ಸಾಹಿಲ್ ಖಾನ್ ಮೇಲೆ ಗಂಭೀರವಾದ ಆರೋಪ ಮಾಡಲಾಗಿದೆ. ಸದ್ಯಕ್ಕೆ ಮುಂಬೈನ ಕೂಪರ್​ ಆಸ್ಪತ್ರೆಗೆ ಮನೋಜ್ ಪಾಟೀಲ್​​ ಅವರನ್ನು ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಮಾತ್ರಗಳನ್ನು ನುಂಗಿ ಮನೋಜ್ ಪಾಟೀಲ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಡೆತ್​​ನೋಟ್​ನಲ್ಲಿ ಕೆಲವು ದಿನಗಳಿಂದ ನಟ ಸಾಹಿಲ್ ಖಾನ್ ತನಗೆ ಕಿರುಕುಳ ನೀಡುತ್ತಿದ್ದರು. ನನ್ನ ವಿರುದ್ಧ ಅವರು ಅಪಪ್ರಚಾರ ಮಾಡುತ್ತಿದ್ದರು. ಆದ್ದರಿಂದಾಗಿ ನಾನು ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

ಮಿಸ್ಟರ್ ಇಂಡಿಯಾ ಆಗಿದ್ದ ಮನೋಜ್ ಪಾಟೀಲ್, ಮಿಸ್ಟರ್​ ಒಲಂಪಿಯಾದಲ್ಲಿ ಭಾಗವಹಿಸಲು ಸಜ್ಜಾಗುತ್ತಿದ್ದರು. ಸಾಹಿಲ್ ಖಾನ್ ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸಿದ್ದರು. ಇದರಿಂದಾಗಿ ಸಾಹಿಲ್ ತನ್ನನ್ನು ಸ್ಪರ್ಧೆಯಲ್ಲಿ ಭಾಗವಹಿಸದಿರಲು ಅಡ್ಡಿಯುಂಟು ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: Pornography Case: ರಾಜ್ ಕುಂದ್ರಾ ವಿರುದ್ಧ ಒಂದೂವರೆ ಸಾವಿರ ಪುಟಗಳ ಚಾರ್ಜ್​​ಶೀಟ್ ಸಲ್ಲಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.