ETV Bharat / bharat

ವಿಶೇಷಚೇತನ ಅತ್ಯಾಚಾರ ಸಂತ್ರಸ್ತೆಗೆ 29 ವಾರಗಳ ಗರ್ಭಪಾತಕ್ಕೆ ಮುಂಬೈ ಹೈಕೋರ್ಟ್ ಅನುಮತಿ

author img

By ETV Bharat Karnataka Team

Published : Oct 12, 2023, 6:46 PM IST

ಗರ್ಭಪಾತದ ವೇಳೆ ಜೀವಂತ ಮಗು ಜನಿಸಿದರೆ ಅದರ ಆರೈಕೆಯನ್ನು ಮಹಾರಾಷ್ಟ್ರ ರಾಜ್ಯ ಸರ್ಕಾರ ಮಾಡುತ್ತದೆ ಎಂದು ನ್ಯಾಯಾಲಯ ಹೇಳಿತು.

Bombay High court
ಮುಂಬೈ ಹೈಕೋರ್ಟ್​

ಮುಂಬೈ (ಮಹಾರಾಷ್ಟ್ರ): ಗರ್ಭಿಣಿಯಾಗಿದ್ದ ಅತ್ಯಾಚಾರ ಸಂತ್ರಸ್ತೆಯೋರ್ವಳಿಗೆ ತನ್ನ 29 ವಾರಗಳ ಭ್ರೂಣವನ್ನು ಗರ್ಭಪಾತ ಮಾಡಿಸಲು ಮುಂಬೈ ಹೈಕೋರ್ಟ್​ ಅನುಮತಿ ನೀಡಿದ್ದು, ಗರ್ಭಪಾತ ಮಾಡಿಸಿದ ನಂತರದ ವರದಿಯನ್ನು ನಾಳೆ (ಅಕ್ಟೋಬರ್​ 13ರಂದು) ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದೆ. ಭಾರತದಲ್ಲಿ ಗರ್ಭಪಾತ ಕಾನೂನುಬಾಹಿರವಾಗಿದ್ದರೂ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಅಶಕ್ತಳಾಗಿರುವ 25 ವರ್ಷದ ಯುವತಿಯ ಪೋಷಕರ ಮನವಿಯನ್ನು ಪರಿಗಣಿಸಿದ ಹೈಕೋರ್ಟ್​ ಗರ್ಭಪಾತಕ್ಕೆ ಅನುಮತಿಸಿತು.

ನ್ಯಾಯಮೂರ್ತಿ ರೇವತಿ ಮೋಹಿತೆ ದೇರೆ ಹಾಗೂ ನ್ಯಾಯಮೂರ್ತಿ ಗೌರಿ ಗೋಡ್ಸೆ ಅವರಿದ್ದ ವಿಭಾಗೀಯ ಪೀಠ ಸೋಮವಾರ ಅರ್ಜಿ ವಿಚಾರಣೆ ನಡೆಸಿತು. ಯುವತಿಯ ದೈಹಿಕ ಹಾಗೂ ಮಾನಸಿಕ ಸ್ಥಿತಿಯನ್ನು ಪರಿಗಣಿಸಿ, ಗರ್ಭಪಾತಕ್ಕೆ ಶಿಫಾರಸು ಮಾಡಿದ್ದ ವೈದ್ಯಕೀಯ ಮಂಡಳಿಯ ವರದಿಯನ್ನು ಪರಿಗಣಿಸಿ ನ್ಯಾಯಾಲಯ ಈ ಆದೇಶ ನೀಡಿದೆ.

"ವೈದ್ಯಕೀಯ ವರದಿ ಪರಿಗಣಿಸಿ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾದ ಹಾಗೂ ದೈಹಿಕ ಮತ್ತು ಬೌದ್ಧಿಕ ಅಸಾಮರ್ಥ್ಯದಿಂದ ಬಳಲುತ್ತಿರುವ ಅರ್ಜಿದಾರರಿಗೆ 29 ವಾರಗಳ ತಮ್ಮ ಭ್ರೂಣವನ್ನು ಗರ್ಭಪಾತ ಮಾಡಿಸಲು ಅನುಮತಿ ನೀಡುವುದು ಸೂಕ್ತವಾಗಿದೆ. ಅದರಂತೆ ಕೊಲ್ಹಾಪುರದ ಛತ್ರಪತಿ ಪ್ರಮೀಳಾತಾಯಿ ರಾಜೇ ಆಸ್ಪತ್ರೆ ಅಥವಾ ಬೇರೆ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಲು ಅರ್ಜಿದಾರರಿಗೆ ಅನುಮತಿ ಇದೆ" ಎಂದು ವಿಭಾಗೀಯ ಪೀಠ ಹೇಳಿತು.

ಕೊಲ್ಹಾಪುರ ಜಿಲ್ಲೆಯಲ್ಲಿ ಈ ಯುವತಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದನು. ಸಂತ್ರಸ್ತೆ ಗಂರ್ಭಿಣಿಯಾಗಿದ್ದಳು. ಮಗು ಜನಿಸಿದರೆ, ಮಗುವನ್ನು ಬೆಳೆಸಿ ಪೋಷಿಸುವಷ್ಟು ಸಮರ್ಥಳಿಲ್ಲ. ಗರ್ಭಪಾತ ಮಾಡಿಸದೇ ಬೇರೆ ದಾರಿ ಇಲ್ಲ ಎಂದು ಸಂತ್ರಸ್ತೆಯ ಪೋಷಕರು ಮುಂಬೈ ಹೈಕೋರ್ಟ್​ಗೆ ಗರ್ಭಪಾತ ಮಾಡಿಸಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದರು.

ಈ ಬಗ್ಗೆ ಅಕ್ಟೋಬರ್​ 5 ರಂದು ವಿಚಾರಣೆ ನಡೆಸಿದ್ದ ಮುಂಬೈ ಹೈಕೋರ್ಟ್,​ ಮಹಾರಾಷ್ಟ್ರ ರಾಜ್ಯ ಸರ್ಕಾರಕ್ಕೆ ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ, ಸಂತ್ರಸ್ತೆಯ ಸ್ಥಿತಿಯನ್ನು ನಿರ್ಣಯಿಸುವಂತೆ ನಿರ್ದೇಶಿಸಿತ್ತು. ಅಕ್ಟೋಬರ್​ 6ರಂದು ವೈದ್ಯಕೀಯ ಮಂಡಳಿ ವರದಿ ಸಲ್ಲಿಸಿದ್ದು, ವರದಿಯಲ್ಲಿ ಸಂತ್ರಸ್ತೆ ಸೆಲೆಬ್ರಲ್​ ಪಾಲ್ಸಿಯಿಂದ ಬಳಲುತ್ತಿದ್ದು, ಗರ್ಭಾವಸ್ಥೆಯನ್ನು ಮುಂದುವರಿಸಿದ್ದೇ ಆದರೆ ಆಕೆಯ ಮಾನಸಿಕ ಆರೋಗ್ಯಕ್ಕೆ ಮತ್ತಷ್ಟು ಹಾನಿಯಾಗಬಹುದು ಎಂದು ಹೇಳಲಾಗಿತ್ತು. ಅಕ್ಟೋಬರ್​ 9 ರಂದು ಪೀಠ ಸಂತ್ರಸ್ತೆಗೆ ಗರ್ಭಪಾತಕ್ಕೆ ಅನುಮತಿ ನೀಡಿದ್ದು, ಒಂದು ವೇಳೆ ಜೀವಂತ ಮಗು ಜನಿಸಿದರೆ ಮಗುವಿನ ಆರೈಕೆ ರಾಜ್ಯ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಹೇಳಿದೆ. ಅಕ್ಟೋಬರ್​ 13 ರಂದು ಗರ್ಭಪಾತದ ನಂತರ ಸಂತ್ರಸ್ತೆ ಹಾಗೂ ಮಗುವಿನ ಸ್ಥಿತಿ ಬಗ್ಗೆ ವರದಿ ನೀಡುವಂತೆ ಆದೇಶಿಸಿದೆ.

ಇದನ್ನೂ ಓದಿ: ಉತ್ತರಪ್ರದೇಶದಿಂದ ಬಾಲಕಿ ಅಪಹರಿಸಿ ಕರ್ನಾಟಕಕ್ಕೆ ಕರೆತಂದು 2 ತಿಂಗಳು ಅತ್ಯಾಚಾರ: ಆರೋಪಿ ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.