ETV Bharat / bharat

ಮಹಾರಾಷ್ಟ್ರ ರಾಜ್ಯಪಾಲ - ಠಾಕ್ರೆ ಸರ್ಕಾರದ ಗುದ್ದಾಟ.. ಮರಾಠಾವಾಡ್​ಗೆ ಗವರ್ನರ್​​ ಪ್ರವಾಸ

author img

By

Published : Aug 4, 2021, 8:09 PM IST

ಮಹಾರಾಷ್ಟ್ರದಲ್ಲಿ ಗವರ್ನರ್​ ಹಾಗೂ ಸರ್ಕಾರದ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದ್ದು, ಇದರ ಮಧ್ಯೆ ಭಗತ್​ ಕೋಶಿಯಾರಿ ಮರಾಠಾವಾಡಗೆ ಪ್ರವಾಸ ಕೈಗೊಂಡಿದ್ದಾರೆ.

maharashtra Governor
maharashtra Governor

ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರ ಠಾಕ್ರೆ ಸರ್ಕಾರ ಹಾಗೂ ರಾಜ್ಯಪಾಲ ಭಗತ್​ ಕೋಶಿಯಾರಿ ನಡುವೆ ಕಳೆದ ಕೆಲ ದಿನಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಇದರ ಮಧ್ಯೆ ರಾಜ್ಯಪಾಲರು ಮೂರು ದಿನಗಳ ಮರಾಠಾವಾಡ್​​​ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ಸಂದರ್ಭದಲ್ಲಿ ಕೆಲವೊಂದು ಹಾಸ್ಟೇಲ್​ ಉದ್ಘಾಟನೆ ಮಾಡಲಿದ್ದು, ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ನವೆಂಬರ್​​ 2020ರ ಮೊದಲ ವಾರದಲ್ಲಿ ಸಮ್ಮಿಶ್ರ ಸರ್ಕಾರ ರಾಜ್ಯಪಾಲರ ಖೋಟಾದ ಅಡಿ ಪರಿಷತ್​ಗೆ ನಾಮ ನಿರ್ದೇಶನಗೊಳ್ಳಬೇಕಿದ್ದ ಸದಸ್ಯರ ಪಟ್ಟಿ ಗವರ್ನರ್​ಗೆ ರವಾನೆ ಮಾಡಬೇಕಾಗಿತ್ತು. 12 ಸದಸ್ಯರ ಪಟ್ಟಿಗೆ ಸಹಿ ಹಾಕುವುದಕ್ಕೆ ರಾಜ್ಯಪಾಲರು ವಿಳಂಬ ಮಾಡುತ್ತಿರುವುದನ್ನು ಕೋರ್ಟ್​​ನಲ್ಲಿ ಪ್ರಶ್ನಿಸಲು ಸರ್ಕಾರ ಮುಂದಾಗಿತ್ತು. ಇದೇ ವಿಚಾರವಾಗಿ ಅಲ್ಲಿನ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಗುದ್ದಾಟ ನಡೆಯುತ್ತಿದ್ದು, ಇದೀಗ ಬೇರೆ ವಿಷಯಗಳಲ್ಲೂ ಅದು ಮುಂದುವರೆದಿದೆ.

ಇದೇ ವಿಚಾರವನ್ನಿಟ್ಟುಕೊಂಡು ಗವರ್ನರ್​ ವಿರುದ್ಧ ಅಲ್ಲಿನ ಸರ್ಕಾರ ವಾಗ್ದಾಳಿ ನಡೆಸುತ್ತಿದ್ದು, ಆಡಳಿತ ಪಕ್ಷದ ನಡುವೆ ರಾಜ್ಯಪಾಲರು ರಾಜಕೀಯ ಮಾಡುತ್ತಿದ್ದಾರೆ ಎಂದಿದ್ದಾರೆ. ಅವರ ಭೇಟಿಗೂ ಇದೀಗ ಅಪಸ್ವರ ಕೇಳಿ ಬಂದಿದ್ದು, ಇಂದಿನ ಸಚಿವ ಸಂಪುಟದಲ್ಲಿ ಈ ವಿಚಾರವಾಗಿ ಚರ್ಚೆ ಸಹ ನಡೆಸಲಾಗಿದೆ.

ಇದನ್ನೂ ಓದಿರಿ: ನವದೆಹಲಿ ಅತ್ಯಾಚಾರ, ಕೊಲೆ ಪ್ರಕರಣ: ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ ರಾಗಾ

ಈ ಹಿಂದೆ ಮಹಾರಾಷ್ಟ್ರದ ಗವರ್ನರ್​​ ಕೋಶಿಯಾರಿ ಉತ್ತರಾಖಂಡ ಪ್ರವಾಸ ಕೈಗೊಳ್ಳಬೇಕಿದ್ದ ಸಂದರ್ಭದಲ್ಲಿ ಅವರಿಗೆ ಸರ್ಕಾರಿ ವಿಮಾನ ಕಾಯ್ದಿರಿಸಲಾಗಿತ್ತು. ಆದರೆ, ಕೊನೆ ಗಳಿಗೆವರೆಗೂ ರಾಜ್ಯಪಾಲರಿಗೆ ಅನುಮತಿ ಸಿಗದ ಕಾರಣ ವಾಣಿಜ್ಯ ಪ್ರಯಾಣಿಕರ ವಿಮಾನದಲ್ಲಿ ತೆರಳಿದ್ದರು. ಈ ವಿಷಯಕ್ಕೂ ರಾಜ್ಯಪಾಲರು ಹಾಗೂ ಅಲ್ಲಿನ ಸರ್ಕಾರದ ನಡುವೆ ಗುದ್ದಾಟವಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.