ETV Bharat / bharat

ನಿರ್ಮಾಣ ಹಂತದ ಸೇತುವೆ ಕುಸಿತ: 14 ಕಾರ್ಮಿಕರಿಗೆ ಗಾಯ - ಮುಂಬೈ ಇತ್ತೀಚಿನ ಸುದ್ದಿ

ಮುಂಬೈನಲ್ಲಿ ನಿರ್ಮಾಣ ಹಂತದ ಸೇತುವೆಯ ಒಂದು ಭಾಗ ಕುಸಿದಿದ್ದು ಪರಿಣಾಮ 14 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ.

author img

By

Published : Sep 17, 2021, 9:08 AM IST

ಮುಂಬೈ: ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸೇತುವೆಯ ಒಂದು ಭಾಗ ಕುಸಿದಿದ್ದು, ಪರಿಣಾಮ 14 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ.

ಈ ಘಟನೆ ಇಂದು ಮುಂಜಾನೆ 4.41ರ ಸುಮಾರಿಗೆ ಸಂಭವಿಸಿದೆ. ಪೂರ್ವ ಬಾಂದ್ರಾದ ಟ್ರೇಡ್​ ಸೆಂಟರ್​ ಬಳಿಯ ಎಂಟಿಎನ್ಎಲ್ ಜಂಕ್ಷನ್​ ಸಮೀಪ ಈ ಸೇತುವೆ ನಿರ್ಮಾಣ ಮಾಡಲಾಗುತ್ತಿತ್ತು. ಆದರೆ, ದುರಾದೃಷ್ಟ ಎಂಬಂತೆ ಸೇತುವೆಯ ಒಂದು ಭಾಗ ಕುಸಿದಿದೆ.

ಇನ್ನು ಗಾಯಗೊಂಡವರನ್ನು ಅನಿಲ್ ಸಿಂಗ್, ಅರವಿಂದ್ ಸಿಂಗ್, ಅಝರ್ ಅಲಿ, ಮುಸ್ತಾಫ್ ಅಲಿ, ರಿಯಾಜುದ್ದೀನ್, ಮೊಟ್ಲಾಬ್ ಅಲಿ, ರಿಯಾಜು ಅಲಿ, ಶ್ರವಣ್, ಅತೀಶ್ ಅಲಿ, ರ್ಲಿಸ್ ಅಲಿ, ಅಜೀಜ್-ಉಲ್-ಹುಕ್, ಪರ್ವೇಜ್, ಅಕ್ಬರ್ ಅಲಿ, ಶ್ರೀಮಂದ್ ಎಂದು ಗುರುತಿಸಲಾಗಿದೆ. ಗಾಯಗೊಂಡವರೆಲ್ಲರೂ ಅಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.